ಟಿ20 ವಿಶ್ವಕಪ್: ಮೊದಲ ಪಂದ್ಯದಲ್ಲಿ ಒಮಾನ್‌ಗೆ ಪಪುವಾ ನ್ಯೂಗಿನಿ ಸವಾಲು

ಟಿ20 ವಿಶ್ವಕಪ್‌ಗೆ ಇಂದು ಚಾಲನೆ ದೊರೆಯಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು ಪ್ರಧಾನ ಸುತ್ತಿಗೇರಲು 8 ತಂಡಗಳ ಮಧ್ಯೆ ಸೆಣೆಸಾಟ ನಡೆಯಲಿದೆ. ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಪಡೆದುಕೊಂಡಿರುವ ಪಪುವಾ ನ್ಯೂಗಿನಿ ಒಮಾನ್ ವಿರುದ್ಧ ಸ್ಪರ್ಧೆಯನ್ನು ನಡೆಸಲಿದೆ. ಈ ಪಂದ್ಯ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಎರಡು ತಂಡಗಳು ಇದೇ ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಯಾವ ತಂಡ ಗೆಲುವಿನಿಂದಿಗೆ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಅರ್ಹತಾ ಸುತ್ತಿಗೂ ಮುನ್ನ ಈ ಎರಡು ತಂಡಗಳು ಕೂಡ ಎರಡಡೆರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದ್ದವು.

ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ

ಒಮಾನ್ vs ಪಪುವಾ ನ್ಯೂಗಿನಿ ಪಂದ್ಯದ ಮಾಹಿತಿ:
ಪಂದ್ಯ: ಒಮಾನ್ vs ಪಪುವಾ ನ್ಯೂಗಿನಿ
ದಿನಾಂಕ ಹಾಗೂ ಸಮಯ: ಅಕ್ಟೋಬರ್ 17, 2021 ಸಮಯ: ಮಧ್ಯಾಹ್ನ 3:30
ಸ್ಥಳ: ಅಲ್ ಅಮೆರತ್ ಕ್ರೀಡಾಂಗಣ, ಒಮಾನ್

ಹವಾಮಾನ ವರದಿ: ಒಮಾನ್‌ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಯಾವುದೇ ಸಂಭವವಿಲ್ಲ. ವಾತಾವರಣ ಬಿಸಿಲಿನಿಂದ ಕೂಡಿರಲಿದ್ದು ಪಂದ್ಯ ನಡೆಯಲು ಅನುಕೂಲಕರ ವಾತಾವರಣವಿದೆ.

ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!

ಪಿಚ್ ರಿಪೋರ್ಟ್: ಒಮಾನ್‌ನ ಅಲ್ ಅಮೆರತ್ ಕ್ರೀಡಾಂಗಣದಲಲ್ಇ ಕಳೆದ ಕೆಲ ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿದ್ದು ಈವರೆಗೆ ಇಲ್ಲಿ ಒಟ್ಟು 24 ಟಿ20 ಪಂದ್ಯಗಳೂ ಆಯೋಜನೆಯಾಗಿದೆ. ಈ ಮೈದಾನದಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 151 ರನ್. ಇನ್ನು ಈ ಮೈದಾನದ ಇತಿಹಾಸದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಹಾಗೂ ರನ್ ಬೆನ್ನಟ್ಟಿದ ತಂಡಗಳು ಸಮಾನ ಯಶಸ್ಸು ಸಾಧಿಸಿದ ದಾಖಲೆಯಿದೆ. ಹೀಗಾಗಿ ಈ ಪಂದ್ಯದ ಮೇಲೆ ಟಾಸ್ ಪರಿಣಾಮ ಬೀರುವ ಸಾಧ್ಯತೆ ತೀರಾ ಕಡಿಮೆಯಿದೆ.

ನೇರಪ್ರಸಾರ, ಲೈವ್ ಸ್ಟ್ರೀಮಿಂಗ್: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಪಂದ್ಯದ ನೇರಪ್ರಸಾರವಿರಲಿದೆ. ಅಲ್ಲದೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದದರೂ ಲೈವ್‌ಸ್ಟ್ರೀಮಿಂಗ್ ಮೂಲಕ ಪಂದ್ಯವನ್ನು ವೀಕ್ಷಿಸಬಹುದು.

ಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆ

ಒಮಾನ್ ಸಂಪೂರ್ಣ ಸ್ಕ್ವಾಡ್: ಜೀಶನ್ ಮಕ್ಸೂದ್ (ನಾಯಕ), ನಸೀಮ್ ಖುಷಿ (ವಿಕೆಟ್ ಕೀಪರ್), ಜತೀಂದರ್ ಸಿಂಗ್, ಖುರ್ರಮ್ ನವಾಜ್, ಅಕಿಬ್ ಇಲ್ಯಾಸ್, ಅಯಾನ್ ಖಾನ್, ಸಂದೀಪ್ ಗೌಡ್, ಮೊಹಮ್ಮದ್ ನದೀಮ್, ಫಯಾಜ್ ಬಟ್, ಕಲೀಮುಲ್ಲಾ, ಬಿಲಾಲ್ ಖಾನ್, ಖಾವರ್ ಅಲಿ, ಸೂರಜ್ ಕುಮಾರ್, ನೆಸ್ಟರ್ ಧಂಬ, ಸುಫ್ಯಾನ್ ಮೆಹಮೂದ್

ಬುಮ್ರಾ,ಜಡೇಜಾಗಿಂದ T20 ವಿಶ್ವಕಪ್ ನಲ್ಲಿ ಭಾರತದ ಬೌಲಿಂಗ್ ಅಸ್ತ್ರ ಇವನೇ!! | Oneindia Kannada

ಪಪುವಾ ನ್ಯೂಗಿನಿ ಸಂಪೂರ್ಣ ಸ್ಕ್ವಾಡ್: ಅಸ್ಸಾದ್ ವಾಲಾ (ನಾಯಕ), ಕಿಪ್ಲಿನ್ ಡೊರಿಗಾ (ವಿಕೆಟ್ ಕೀಪರ್), ಟೋನಿ ಉರಾ, ಲೆಗಾ ಸಿಯಾಕಾ, ಚಾರ್ಲ್ಸ್ ಅಮಿನಿ, ಸೆಸೆ ಬೌ, ನಾರ್ಮನ್ ವನುವಾ, ಚಾಡ್ ಸೋಪರ್, ಜೇಸನ್ ಕಿಲಾ, ಡೇಮಿಯನ್ ರಾವ್, ನೊಸೈನಾ ಪೊಕಾನಾ, ಕಬುವಾ ಮೊರಿಯಾ, ಹಿರಿ ಹಿರಿ, ಗೌಡಿ ಟೋಕಾ, ಸೈಮನ್ ಆಟೈ

For Quick Alerts
ALLOW NOTIFICATIONS
For Daily Alerts
Story first published: Sunday, October 17, 2021, 10:34 [IST]
Other articles published on Oct 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X