ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಮೊಹಮ್ಮದ್ ಶಮಿ ವಿರುದ್ಧ ನಿಂದನೆ; ವೇಗಿಯ ಪರ ನಿಂತ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು

T20 World Cup: online trolls targeting Mohammed Shami; Former cricketers, indian fans stand with Shami
ಶಮಿ‌ ಪರ ನಿಂತ ಟೀಂ ಇಂಡಿಯಾ ಕ್ರಿಕೆಟಿಗರು:ಯಾಕೆ ಗೊತ್ತಾ? | Oneindia Kannada

ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 10 ವಿಕೆಟ್‌ಗಳ ಅಂತರದಿಂದ ಸೋಲು ಕಂಡಿತು. ಈ ಸೋಲಿನ ಬಳಿಕ ಕೆಲ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ವಿರುದ್ಧ ಬೆದರಿಕೆ ಹಾಗೂ ನಿಂದನೆಗಳನ್ನು ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಮಿ ದುಬಾರಿ ಬೌಲರ್ ಆಗಿದ್ದರು ಎಂಬ ಕಾರಣಕ್ಕೆ ಶಮಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ರೀತಿಯ ಕೆಟ್ಟ ವರ್ತನೆ ತೋರಿದ ದುಷ್ಕರ್ಮಿಗಳ ವಿರುದ್ಧವೂ ಈಗ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆ ವ್ಯಕ್ತವಾಗಿದ್ದು ಅನುಭವಿ ವೇಗಿ ಮೊಹಮ್ಮದ್ ಶಮಿ ಪರವಾಗಿ ನಾವಿದ್ದೇವೆ ಎಂಬ ಅಭಿಯಾನ ಆರಂಭವಾಗಿದೆ.

ಮೊಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಂದ ಬೆದರಿಕೆ ಹಾಗೂ ನಿಂದನೆಗಳ ವಿರುದ್ಧ ಮಾಜಿ ಕ್ರಿಕೆಟಿಗರು ಕೂಡ ದನಿಯೆತ್ತಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಆಕಾಶ್ ಚೋಪ್ರ ಸೇರಿದಂತೆ ಅನೇಕರು ಈ ವರ್ತನೆಯನ್ನು ಖಂಡಿಸಿದ್ದಾರೆ. ಇಂತಾ ದುಷ್ಟ ವರ್ತನೆಗಳು ನಿಲ್ಲಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ನಾನು ಕೂಡ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸೋತ ತಂಡದ ಭಾಗವಾಗಿದ್ದೆ. ಆದರೆ ಆಗ ಯಾರು ಕೂಡ ನನಗೆ ಪಾಕಿಸ್ತಾನಕ್ಕೆ ಹೋಗಲು ಹೇಳಿಲ್ಲ! ನಾನು ಕೆಲವು ವರ್ಷಗಳ ಹಿಂದಿನ ಗಟನೆಯ ಬಗ್ಗೆ ಮಾತನಾಡುತ್ತಿದ್ದೇನೆ. ಇಂತಾ ದುಷ್ಟತನಗಳು ನಿಲ್ಲಬೇಕಿದೆ" ಎಂದಿದ್ದಾರೆ ಇರ್ಫಾನ್ ಪಠಾಣ್.

ಇನ್ನು ಆಕಾಶ್ ಚೋಪ್ರ ತಮ್ಮ ಟ್ವಿಟ್ಟರ್‌ನಲ್ಲಿ "ಮೊದಲೆಲ್ಲಾ ಆಟಗಾರರ ಮನೆಗಳಿಗೆ ಕಲ್ಲೆಸೆಯುವುದು ಪ್ರತಿಕೃತಿಗಳನ್ನು ಸುಡುವಂತಾ ಕೃತ್ಯಗಳನ್ನು ಮಾಡುತ್ತಿದ್ದ ಮನಸ್ಥಿತಿಯವರೇ ಈಗ ಆನ್‌ಲೈನ್‌ನಲ್ಲಿ ತಮ್ಮ ಭಾವಚಿತ್ರವನ್ನೂ ಬಳಸಲು ಯೋಗ್ಯತೆಯಿಲ್ಲದೆ ಇಂತಾ ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ" ಎಂದು ಚೋಪ್ರ ಕಿಡಿ ಕಾರಿದ್ದಾರೆ.

ಭಾರತ vs ಪಾಕ್: ಭಾರತ vs ಪಾಕ್: "ಪಾಕಿಸ್ತಾನ ಗೆಲ್ಲಬೇಕೆಂದರೆ ಈ ಒಬ್ಬ ಆಟಗಾರನನ್ನು ತಂಡದಿಂದ ಹೊರಗಿಡಲೇಬೇಕು!"

ಇನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಮೊಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿನ ನಿಂದನೆಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. "ಮೊಹಮ್ಮದ್ ಶಮಿ ವಿರುದ್ಧ ಆನ್‌ಲೈನ್ ದಾಳಿ ಆಘಾತಕಾರಿಯಾಗಿದೆ. ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ. ಆತನೋರ್ವ ಚಾಂಪಿಯನ್ ಆಟಗಾರ. ಭಾರತೀಯ ತಂಡದ ಕ್ಯಾಪ್ ಧರಿಸಿದ ಪ್ರತಿಯೊಬ್ಬರು ಕೂಡ ಆನ್‌ಲೈನ್‌ನಲ್ಲಿನ ಇಂತಾ ದುಷ್ಕರ್ಮಿಗಳಿಗಿಂತ ಹೆಚ್ಚಿನ ದೇಶ ಪ್ರೇಮವನ್ನು ಹೊಂದಿದ್ದಾರೆ. ಶಮಿ ನಿಮ್ಮೊಂದಿಗೆ ನಾವಿದ್ದೇವೆ" ಎಂದು ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ vs ಪಾಕ್: ಭಾರತ ಈ ಒಂದು ತಪ್ಪನ್ನೇನಾದರೂ ಮಾಡಿದರೆ ಪಾಕಿಸ್ತಾನಕ್ಕೆ ಗೆಲುವು: ಕಪಿಲ್ ದೇವ್ಭಾರತ vs ಪಾಕ್: ಭಾರತ ಈ ಒಂದು ತಪ್ಪನ್ನೇನಾದರೂ ಮಾಡಿದರೆ ಪಾಕಿಸ್ತಾನಕ್ಕೆ ಗೆಲುವು: ಕಪಿಲ್ ದೇವ್

ಇನ್ನು ಮೊಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆದ ಈ ನಿಂದನೆಗಳಿಗೆ ವಿರುದ್ಧವೂ ಅಭಿಯಾನ ನಡೆದಿದೆ. #Istandwithshami ಎಂದು ಟೀಮ್ ಇಂಡಿಯಾದ ವೇಗಿಯ ಪರವಾಗಿಯೂ ಭಾರೀ ಪ್ರಮಾಣದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

Story first published: Monday, October 25, 2021, 17:49 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X