ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಈ ಕಾರಣದಿಂದ ಹಿನ್ನಡೆಯಾಗಬಹುದು: ಪಾಕ್ ಮಾಜಿ ಆಲ್‌ರೌಂಡರ್

T20 world cup: Pakistan fielding could be their downfall in T20 World Cup match against India

ಟಿ20 ವಿಶ್ವಕಪ್‌ ಭಾನುವಾರದಿಂದ ಆರಂಭವಾಗುತ್ತಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಗೆ ಇನ್ನು ಕೇವಲ ಒಂದು ವಾರಗಳಷ್ಟೇ ಬಾಕಿಯಿದೆ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಈ ರೋಮಾಂಚನಕಾರಿ ಕದನದ ಮೇಲಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಎರಡು ದೇಶಗಳ ತಂಡಗಳ ಆಟಗಾರರು ಹಾಗೂ ಅಭಿಮಾನಿಗಳಿಗೆ ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರು ಕೂಡ ಈ ಪಂದ್ಯದ ಮೇಲಿನ ನಿರೀಕ್ಷೆಯನ್ನು ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಟಿ20 ವಿಶ್ವಕಪ್‌ನಲ್ಲಿ ಭಾರತ ಸತತವಾಗಿ ಮೇಲುಗೈ ಸಾಧಿಸುತ್ತಾ ಬಂದಿದ್ದು ಆಡಿದ ಐದು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿರುವುದು ಭಾರತೀಯ ಕ್ರಿಕೆಟ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಈ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಈ ಪಂದ್ಯದ ಮೇಲಿರುವ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ ಸೋಲುವ ಸಾಧ್ಯತೆಯಿದ್ದು ಅದಕ್ಕೆ ಕಾರಣವಾಗಬಹುದಾದ ಸಂಗತಿಯಲ್ಲಿ ಮಹಮೂದ್ ಹೇಳಿದ್ದಾರೆ.

ರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿರವಿಶಾಸ್ತ್ರಿ ನಂತರ ಯಾರು ಟೀಮ್ ಇಂಡಿಯಾ ಕೋಚ್ ಆಗುತ್ತಿದ್ದಾರೋ ಗೊತ್ತಿಲ್ಲ!: ವಿರಾಟ್ ಕೊಹ್ಲಿ

ಹಿನ್ನಡೆಗೆ ಕಾರಣವಾಗಲಿದೆ ಫೀಲ್ಡಿಂಗ್ ಎಂದ ಪಾಕ್ ಮಾಜಿ ಆಟಗಾರ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜರ್ ಮಹಮೂದ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಸೋಲು ಕಾಣಲು ಫೀಲ್ಡಿಂಗ್ ವಿಭಾಗದ ಕಳಪೆ ಪ್ರದರ್ಶನ ಕಾರಣವಾಗಬಹುದು ಎಂದಿದ್ದಾರೆ. ಈ ವಿಭಾಗದಲ್ಲಿ ಪಾಕಿಸ್ತಾನ ಉತ್ತಮಪ್ರದರ್ಶನ ನೀಡಲು ಸಾಧ್ಯವಾದರೆ ಮಾತ್ರವೇ ಪಾಕಿಸ್ತಾನಕ್ಕೆ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ ಅಜರ್ ಮಹಮೂದ್.

ಅಗತ್ಯ ಸಂದರ್ಭಗಳಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲಿದರೆ, ನಿರ್ಣಾಯಕ ಹಂತದಲ್ಲಿ ರನ್‌ಔಟ್‌ ಅವಕಾಶಗಳಲ್ಲಿ ವಿಫಲವಾದರೆ ಅದು ಪಾಕಿಸ್ತಾನ ತಂಡದ ಹಿನ್ನಡೆಗೆ ಕಾರಣವಾಗಲಿದೆ. ಇದು ಪಾಕಿಸ್ತಾನಕ್ಕೆ ಕೇವಲ ಭಾರತದ ವಿರುದ್ಧ ಮಾತ್ರ ಹಿನ್ನಡೆಯುಂಟು ಮಾಡಲಾರದು. ಯಾವುದೇ ತಮಡಗಳು ಎದುರಾಳಿಯಾಗಿದ್ದರೂ ಇಂತಾ ಸಂದರ್ಭದಲ್ಲಿ ಪಾಕಿಸ್ತಾನ ಹಿನ್ನಡೆಯನ್ನು ಅನುಭವಿಸಲಿದೆ ಎಂದಿದ್ದಾರೆ ಅಜರ್ ಮಹಮೂದ್.

ಫಿಲ್ಡಿಂಗ್ ಸಂದರ್ಭದಲ್ಲಿ ಉತ್ತಮ ಪರಿಶ್ರಮ ಹಾಕಿದರೆ ಹಾಗೂ ಅನಗತ್ಯ ರನ್‌ಗಳನ್ನು ಬಿಟ್ಟುಕೊಡುವುದನ್ನು ನಿಯಂತ್ರಿಸುವುದು ಪಾಕಿಸ್ತಾನ ಗಮನಹರಿಸಬೇಕಾದ ಎರಡು ಪ್ರಮುಖ ಸಂಗತಿಗಳಾಗಿದೆ. ಯುವ ಆಟಗಾರರಾದ ಹೈದರ್ ಅಲಿ ಹಾಗೂ ಶದಾಬ್ ಖಾನ್ ಉತ್ತಮ ಫೀಲ್ಡಿಂಗ್ ಪ್ರದರ್ಶನ ನೀಡುತ್ತಾರೆ. ಇದು ತಂಡದ ಯಶಸಸ್ಸಿಗೆ ಕಾರಣವಾಗಲಿದೆ ಎಂಬ ವಿರ್ಶವಾಸ ನನಗಿದೆ ಎಂದಿದ್ದಾರೆ ಅಜರ್ ಮಹಮೂದ್.

ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!ಟಿ20 ವಿಶ್ವಕಪ್‌: ಚಾಹಲ್‌ಗೆ ಅವಕಾಶ ಸಿಗದಿರಲು ಆ ಆಟಗಾರ ಕಾರಣ; ಕೊನೆಗೂ ಸತ್ಯ ಬಿಚ್ಚಿಟ್ಟ ಕೊಹ್ಲಿ!

ವಿಶ್ವಕಪ್ ಅಭಿಯಾನದಲ್ಲಿ ತಂಡಕ್ಕೆ ಸಹಾಯಕವಾಗಲು ವಿಶ್ವ ಕ್ರಿಕೆಟ್‌ನ ಕೆಲ ಪ್ರಮುಖ ಮಾಜಿ ಕ್ರಿಕೆಟಿಗರನ್ನು ತರಬೇತದಾರರಾಗಿ ನೇಮಿಸಿದೆ ಎಂದಿರುವ ಮಹಮೂದ್ ವಿಶೇಷವಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಿದೆ ಎಂದಿದ್ದಾರೆ ಅಜರ್ ಮಹಮೂದ್. \

ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿರಾಟ್ ಕೊಹ್ಲಿ), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್
ಮೀಸಲು: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್,
ವೇಳಾಪಟ್ಟಿ: 24 ಅಕ್ಟೋಬರ್‌ vs ಪಾಕಿಸ್ತಾನ, 31 ಅಕ್ಟೋಬರ್‌ vs ನ್ಯೂಜಿಲೆಂಡ್, 3 ನವೆಂಬರ್‌ vs ಅಫ್ಘಾನಿಸ್ತಾನ, 5 ನವೆಂಬರ್‌ vs ಬಿ1, 8 ನವೆಂಬರ್‌ vs ಎ2.

ಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಟೀಮ್ ಇಂಡಿಯಾಕ್ಕೆ ಹೆಡ್ ಕೋಚ್ ಆಗಿ ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆ

ಇಂಡೋ-ಪಾಕ್ ಬದ್ಧವೈರಿಗಳ ಮಹಾಸಮರಕ್ಕೆ ಭಾರತೀಯರಿಂದ ವಿರೋಧ | Oneindia Kannada

ವಿಶ್ವಕಪ್‌ನಲ್ಲಿ ಭಾಗವಹಿಸುವ ಪಾಕಿಸ್ತಾನ ತಂಡ: ಬಾಬರ್ ಅಝಾಮ್ (ನಾಯಕ), ಶಾದಬ್ ಖಾನ್, ಆಸಿಫ್ ಅಲಿ, ಅಜಮ್ ಖಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಮದ್ ವಾಸಿಂ, ಖುಷ್ದಿಲ್ ಶಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ಶಾಹೀನ್ ಶಾ ಅಫ್ರಿದಿ, ಸೊಹೈಬ್ ಮಕ್ಸೂದ್
ವೇಳಾಪಟ್ಟಿ: 24 ಅಕ್ಟೋಬರ್‌ vs ಭಾರತ, 26 ಅಕ್ಟೋಬರ್‌ vs ನ್ಯೂಜಿಲೆಂಡ್, 29 ಅಕ್ಟೋಬರ್‌ vs ಅಫ್ಘಾನಿಸ್ತಾನ, 2 ನವೆಂಬರ್‌ vs ಎ2, 7 ನವೆಂಬರ್ vs ಬಿ1

Story first published: Sunday, October 17, 2021, 12:58 [IST]
Other articles published on Oct 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X