ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್, ಸೆಮಿಫೈನಲ್: ಪಾಕಿಸ್ತಾನ ತಂಡಕ್ಕೆ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ವಿಶೇಷ ಸಂದೇಶ

T20 World Cup: PCB chief Ramiz Raja special message to Pakistan team for semi Final match

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲಿ ಅಜೇಯವಾಗುಳಿದ ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ಸೆಮಿಫೈನಲ್ ಕಾದಾಟದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಗುರುವಾರ ಈ ಮುಖಾಮುಖಿ ನಡೆಯಲಿದ್ದು ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ವಿಶೇಷ ಸಂದೇಶ ರವಾನಿಸಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರ ಹುದ್ದೆಯನ್ನು ವಹಿಸಿಕೊಂಡಿರುವ ರಮೀಜ್ ರಾಜಾ ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ತಂಡ ಉತ್ತಮವಾದ ಪ್ರದರ್ಶನ ನೀಡುತ್ತಿದೆ. ಇಡೀ ತಂಡ ಸ್ಥಿರವಾದ ಪ್ರದರ್ಶನ ನಿಡುತ್ತಿದ್ದು ನಾಯಕನಾಗಿ ಬಾಬರ್ ಅಜಂ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಗುರುವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕಾಗಿ ತಂಡ ವಿಶೇಷವಾದದ್ದೇನೂ ಮಾಡಬೇಕಾಗಿಲ್ಲ ಎಂದಿದ್ದಾರೆ ರಮೀಜ್ ರಾಜಾ.

ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಿದೆ: ಹಾರ್ದಿಕ್‌ ಪಾಂಡ್ಯಗೆ ಟಿ20ಯಿಂದ ಕೊಕ್

ಪಾಖಿಸ್ತಾನ ಸೂಪರ್ 12 ಹಂತದಲ್ಲಿ ಎಲ್ಲಾ ಐದು ಪಂದ್ಯಗಳನ್ನು ಕೂಡ ಅದ್ಭುತವಾದ ಜಯ ಸಾಧಿಸಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಗೆಲ್ಲುವ ನೆಚ್ಚಿನ ತಂಡವಾಗಿ ಪಾಕಿಸ್ತಾನ ಕಣಕ್ಕಿಳೀಯುತ್ತಿದೆ. ಆದರೆ ಆಸ್ಟ್ರೇಲಿಯಾ ಕೂಡ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತಿದೆ ಎಂಬುದು ಮರೆಯುವಂತಿಲ್ಲ.

"ಈವರೆಗೆ ಪಾಕಿಸ್ತಾನ ತಂಡ ನಿಡಿದ ಪ್ರದರ್ಶನ ನಿಜಕ್ಕೂ ಅದ್ಭುತವಾಗಿದೆ. ಆಟಗಾರರ ಸ್ಥಿರವಾದ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ಸೂಚಿಸಲೇಬೇಕಿದೆ. ಇದೇ ಸಂದರ್ಭದಲ್ಲಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ವಿಶೇಷವಾದ ರಣತಂತ್ರದ ಅಗತ್ಯವಿದೆ ಎಂದು ಅನಿಸುತ್ತಿಲ್ಲ. ಇದೇ ಸ್ಪೂರ್ತಿಯೊಂದಿಗೆ ಆಟಗಾರರು ನಿರ್ಭೀತವಾಗಿ ಪ್ರದರ್ಶನ ನೀಡಬೇಕಿದೆ" ಎಂದು ರಮೀಜ್ ರಾಜಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸೋಲನ್ನೇ ಕಾಣದ ಪಾಕಿಸ್ತಾನಕ್ಕೆ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಈ 3 ವೀಕ್ನೆಸ್ ಕಾಡುತ್ತಿದೆ!ಸೋಲನ್ನೇ ಕಾಣದ ಪಾಕಿಸ್ತಾನಕ್ಕೆ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಈ 3 ವೀಕ್ನೆಸ್ ಕಾಡುತ್ತಿದೆ!

ಈತನ ಎಂಟ್ರಿಯಿಂದ ಟೀಂ ಇಂಡಿಯಾದಲ್ಲಿ ಹಾರ್ದಿಕ್ ಭವಿಷ್ಯ ಅತಂತ್ರ | Oneindia Kannada

ಇನ್ನು ಪಾಕಿಸ್ತಾನ ತಂಡ ಅಸ್ಥರ ಪ್ರದರ್ಶನ ನೀಡುವ ತಂಡ ಎಂಬ ಹಣೆಪಟ್ಟಿಯಿಂದ ಹೊರಬಂದಿರುವುದಕ್ಕೆ ಸಂತಸವಾಗಿದೆ ಎಂದು ಕೂಡ ಇದೇ ಸಂದರ್ಭದಲ್ಲಿ ಬಾಬರ್ ಅಜಂ ಹೇಳಿದ್ದಾರೆ. "ಬಾರತದ ವಿರುದ್ಧ ಗೆಲುವು ಸಾಧಿಸಿದ್ದು ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿತು. ನಂತರ ನ್ಯೂಜಿಲೆಂಡ್ ವಿರುದ್ಧ ಉತ್ತಮ ರಣತಂತ್ರದೊಂದಿಗೆ ಆಡಿ ಜಯ ಸಾಧಿಸಿತು ಪಾಕಿಸ್ತಾನ. ನಂತರ ಅಫ್ಘಾನಿಸ್ತಾನದ ವಿರುದ್ಧ ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಪಾಕಿಸ್ತಾನ ತಂಡದ ಒಟ್ಟು ಪ್ರದರ್ಶನಕ್ಕೆ ರಮೀಜ್ ರಾಜಾ ಮೆಚ್ಚುಗೆ ಸೂಚಿಸಿದ್ದಾರೆ.

Story first published: Thursday, November 11, 2021, 9:56 [IST]
Other articles published on Nov 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X