ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!

ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯು ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನವೆಂಬರ್ 14ರಂದು ನಡೆಯಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಜೊತೆ ಸೆಣಸಾಡಿದ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಹಂತಕ್ಕೆ ಪ್ರವೇಶಿಸಿದ್ದರೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಿದ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!ಮ್ಯಾಥ್ಯೂ ವೇಡ್ ಕ್ಯಾಚ್ ಬಿಟ್ಟು ಪಾಕಿಸ್ತಾನದ ಸೋಲಿಗೆ ಕಾರಣನಾದ ಹಸನ್ ಅಲಿಗೆ ಬಂದ ಗತಿ ಇದು!

ಹೀಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಯಶಸ್ವಿಯಾಗಿ ಸೆಮಿಫೈನಲ್ ಹಂತವನ್ನು ತಲುಪಿದರೆ, ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮಾತ್ರ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಮೂಲಕ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿಯೂ ವಿಫಲವಾಯಿತು. ಹೌದು, ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಸೋಲುವುದರ ಮೂಲಕ ಆರಂಭದಿಂದಲೇ ಹಿನ್ನಡೆ ಅನುಭವಿಸಿದ ಟೀಮ್ ಇಂಡಿಯಾ ಅಂತಿಮವಾಗಿ ಸೆಮಿಫೈನಲ್ ಪ್ರವೇಶಿಸುವಷ್ಟು ಅಂಕಗಳನ್ನು ಗಳಿಸಲಾರದೇ ಟೂರ್ನಿಯಿಂದ ಹೊರಬಿತ್ತು.

ಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗಟೀಮ್ ಇಂಡಿಯಾ ಒಳಗೇ ಮುಂಬೈ ಗುಂಪಿದೆ, ಕೊಹ್ಲಿ ಆದಷ್ಟು ಬೇಗ ತಂಡವನ್ನೂ ತ್ಯಜಿಸಲಿದ್ದಾರೆ: ಮಾಜಿ ಕ್ರಿಕೆಟಿಗ

ಹೀಗೆ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳದೇ ಟೂರ್ನಿಯಿಂದ ಹೊರಬಿದ್ದ ಟೀಮ್ ಇಂಡಿಯಾ ಕುರಿತು ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಈ ಟೂರ್ನಿಗೆ ಆಯ್ಕೆಯಾದ ಆಟಗಾರರ ಕುರಿತು ಕೂಡ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಅದರಲ್ಲಿಯೂ ಗಾಯದ ಸಮಸ್ಯೆಯಿಂದ ಆರಂಭದ ಪಂದ್ಯಗಳಲ್ಲಿ ಬೌಲಿಂಗ್ ಮಾಡದೇ ಇದ್ದ ಹಾರ್ದಿಕ್ ಪಾಂಡ್ಯ ಆಯ್ಕೆಯ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಮತ್ತು ನೆಟ್ಟಿಗರು ಟೀಮ್ ಇಂಡಿಯಾ ಆಯ್ಕೆಗಾರರಿಗೆ ಯಾವ ಆಧಾರದ ಮೇಲೆ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದಿರಿ ಎಂದು ಪ್ರಶ್ನೆಗಳನ್ನು ಹಾಕಿದರು. ಇನ್ನು ಟೂರ್ನಿ ಎಲ್ಲಾ ಮುಗಿದ ನಂತರ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದಿರುವ ರವಿಶಾಸ್ತ್ರಿ ಇತ್ತೀಚೆಗಷ್ಟೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಟಗಾರರನ್ನು ಯಾವ ರೀತಿ ಆಯ್ಕೆ ಮಾಡಲಾಯಿತು ಎಂಬುದರ ಕುರಿತು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

15 ಆಟಗಾರರ ತಂಡವನ್ನು ಸಂಪೂರ್ಣವಾಗಿ ಆಯ್ಕೆ ಮಾಡಿದ್ದು ಆಯ್ಕೆಗಾರರೇ

15 ಆಟಗಾರರ ತಂಡವನ್ನು ಸಂಪೂರ್ಣವಾಗಿ ಆಯ್ಕೆ ಮಾಡಿದ್ದು ಆಯ್ಕೆಗಾರರೇ

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ 15 ಆಟಗಾರರ ತಂಡವನ್ನು ಆಯ್ಕೆಗಾರರು ಆಯ್ಕೆ ಮಾಡಿದ್ದರು. ಈ ತಂಡ ಪ್ರಕಟವಾದಾಗ ಶಿಖರ್ ಧವನ್ ಮತ್ತು ಯುಜುವೇಂದ್ರ ಚಾಹಲ್ ರೀತಿಯ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿಲ್ಲ ಎಂದು ಟೀಮ್ ಇಂಡಿಯಾ ಆಯ್ಕೆಗಾರರು, ನಾಯಕ ವಿರಾಟ್ ಕೊಹ್ಲಿ ಮತ್ತು ತರಬೇತುದಾರನಾದ ರವಿಶಾಸ್ತ್ರಿ ವಿರುದ್ಧ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಕಿಡಿಕಾರಿದ್ದರು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ರವಿಶಾಸ್ತ್ರಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಎಲ್ಲಾ ಆಟಗಾರರನ್ನು ಸಂಪೂರ್ಣವಾಗಿ ಆಯ್ಕೆ ಮಾಡಿದ್ದು ಆಯ್ಕೆಗಾರರೇ ಎಂದು ಹೇಳಿಕೆ ನೀಡಿದ್ದಾರೆ.

ಈ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿರಲಿಲ್ಲ

ಈ ಆಯ್ಕೆಯಲ್ಲಿ ವಿರಾಟ್ ಕೊಹ್ಲಿ ಕೂಡ ಭಾಗವಹಿಸಿರಲಿಲ್ಲ

ಇನ್ನೂ ಮುಂದುವರೆದು ಮಾತನಾಡಿರುವ ರವಿಶಾಸ್ತ್ರಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡುವಾಗ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತರಬೇತುದಾರನಾಗಿರುವ ತಾನೂ ಕೂಡ ಭಾಗಿಯಾಗಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಗೂ ಮತ್ತು ತಮಗೂ ಈ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುವ ಅವಕಾಶ ಇರಲಿಲ್ಲ ಎಂಬುದನ್ನು ರವಿಶಾಸ್ತ್ರಿ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.

ಆಯ್ಕೆಗಾರರು ಆಯ್ಕೆ ಮಾಡಿದ ಆಟಗಾರರನ್ನು ಕಣಕ್ಕಿಳಿಸುವುದಷ್ಟೇ ನನ್ನ ಕೆಲಸ

ಆಯ್ಕೆಗಾರರು ಆಯ್ಕೆ ಮಾಡಿದ ಆಟಗಾರರನ್ನು ಕಣಕ್ಕಿಳಿಸುವುದಷ್ಟೇ ನನ್ನ ಕೆಲಸ

ಇನ್ನೂ ಮುಂದುವರಿದು ಮಾತನಾಡಿರುವ ರವಿಶಾಸ್ತ್ರಿ 15 ಆಟಗಾರರ ತಂಡವನ್ನು ಆಯ್ಕೆಗಾರರು ಆಯ್ಕೆ ಮಾಡಿ ಕಳುಹಿಸಿದರು. ಹೀಗೆ ಆಯ್ಕೆ ಮಾಡಲಾದ ಆಟಗಾರರನ್ನು ಬಳಸಿಕೊಂಡು 11 ಆಟಗಾರರ ತಂಡವನ್ನು ರಚಿಸಿ ಕಣಕ್ಕಿಳಿಸುವುದು ನನ್ನ ಕೆಲಸವಾಗಿತ್ತು ಎಂದು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಗಳನ್ನು ನೀಡುವುದರ ಮೂಲಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಿದ್ದರ ಪ್ರಕ್ರಿಯೆಯಲ್ಲಿ ತಂಡದ ತರಬೇತುದಾರ ಹಾಗೂ ನಾಯಕ ಇಬ್ಬರದ್ದೂ ಯಾವುದೇ ರೀತಿಯ ಪಾಲಿರಲಿಲ್ಲ ಎಂಬುದನ್ನು ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, November 12, 2021, 18:34 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X