ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಶಾಹಿದ್ ಅಫ್ರಿದಿ ದಾಖಲೆ ಸಮಗೊಳಿಸಿದ ಶಕೀಬ್ ಅಲ್ ಹಸನ್

T20 World Cup: Shakib Al Hasan equals Shahid Afridis record for most T20 World Cup wicket

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಇದೀಗ ಮತ್ತೊಂದು ಮಹತ್ವದ ದಾಖಲೆಗೆ ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್ ವೇದಿಕೆಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಲ್ಲಿಯೂ ದಾಖಲೆಗೆ ಶಕೀಬ್ ಸನಿಹದಲ್ಲಿದ್ದಾರೆ. ಇದಕ್ಕಾಗಿ ಈಗಾಗಲೇ ಶಕೀಬ್ ಸದ್ಯ ಈ ದಾಖಲೆ ಹೊಂದಿರುವ ಶಾಹಿದ್ ಅಫ್ರಿದಿ ದಾಖಲೆಯನ್ನು ಬಾಂಗ್ಲಾದೇಶದ ಆಲ್‌ರೌಂಡರ್ ಸಮಬಲಗೊಳಿಸಿದ್ದು ಇನ್ನೊಂದು ವಿಕೆಟ್ ಪಡೆದರೆ ಅದನ್ನು ಮೀರಿ ನಿಲ್ಲಲಿದ್ದಾರೆ.

ಪಪುವಾ ನ್ಯೂಗಿನಿ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಶಕೀಬ್ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಬಾಂಗ್ಲಾದೇಶ ಸೂಪರ್ 12 ಹಂತದಲ್ಲಿ ಯಶಸ್ವಿಯಾಗಿ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್‌ನಲ್ಲಿ ಒಟ್ಟಾರೆಯಾಗಿ ಶಾಹಿದ್ ಅಫ್ರಿದಿ ಪಡೆದಿರುವ 39 ವಿಕೆಟ್‌ಗಳ ಸಾಧನೆಯನ್ನು ಸರಿಗಟ್ಟಿದ್ದಾರೆ.

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?

ಟಿ20 ವಿಶ್ವಕಪ್‌ನಲ್ಲಿ ಶಕೀಬ್ ಅಲ್ ಹಸನ್ 39 ವಿಕೆಟ್‌ಗಳನ್ನು ಕೇವಲ 28 ಪಂದ್ಯಗಳಲ್ಲಿ ಪಡೆದುಕೊಂಡಿದ್ದಾರೆ. 6.38ರ ಎಕಾನಮಿಯಲ್ಲಿ ಬೌಲಿಂಗ್ ದಾಳಿ ನಡೆಸಿರುವ ಶಕೀಬ್ ಈ ವಿಚಾರದಲ್ಲಿಯೂ ಶಾಹಿದ್ ಅಫ್ರಿದಿಗಿಂತ ಮುಂದಿದ್ದಾರೆ. ಶಾಹಿದ್ ಅಫ್ರಿದಿ 34 ಪಂದ್ಯಗಳಲ್ಲಿ 39 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈಗ ಬಾಂಗ್ಲಾದೇಶ ಸೂಪರ್ 12 ಹಂತಕ್ಕೆ ಪ್ರವೇಶ ಪಡೆದುಕೊಂಡಿರಿರುವುದರಿಂದಾಗಿ ಮತ್ತೆ ಕನಿಷ್ಠ 5 ಪಂದ್ಯಗಳಲ್ಲಿ ಆಡಲಿದೆ. ಈ ಮೂಲಕ ಶಾಹಿದ್ ಅಫ್ರಿದಿಯ ದಾಖಲೆಯನ್ನು ಹಿಂದಿಕ್ಕುವುದು ಖಚಿತವಾಗಿದೆ.

ಸದ್ಯ ಸಕ್ರಿಯವಾಗಿರುವ ಯಾವ ಆಟಗಾರರು ಕೂಡ 30ಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿಲ್ಲ. ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸದ್ಯ ಸಕ್ರಿಯವಾಗಿರುವ ಡ್ವೇಯ್ನ್ ಬ್ರಾವೋ 9ನೇ ಸ್ಥಾನದಲ್ಲಿದ್ದು 25 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.

ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್

ಇನ್ನು ಗೆಲ್ಲಲೇ ಬೇಕಾಗಿದ್ದ ಪಪುವಾ ನ್ಯೂಗಿನಿ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಮೊದಲಿಗೆ ಬ್ಯಾಟಿಂಗ್‌ನಲ್ಲಿ 37 ಎಸೆತಗಳಲ್ಲಿ 46 ರನ್‌ಗಳಿಸಿ ಮಿಂಚಿದ್ದರು. ಈ ಮೂಲಕ ಬಾಂಗ್ಲಾ 181/7 ರನ್‌ಗಳನ್ನು ಗಳಿಸಿತ್ತು. ನಂತರ ಬೌಲಿಂಗ್‌ನಲ್ಲಿ ಶಕೀಬ್ ಕೇವಲ 9 ರನ್‌ಗಳನ್ನು ನೀಡಿ 4 ವಿಕೆಟ್ ಪಡೆದುಕೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದ ಪಪುವಾ ನ್ಯೂಗಿನಿ ಈ ಪಂದ್ಯದಲ್ಲಿ 19.3 ಓವರ್‌ಗಳಲ್ಲಿ ಕೇವಲ 97 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬಾಂಗ್ಲಾಗೆ ಶರಣಾಗಿದೆ. ಶಕೀಬ್ ಅಲ್ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ನೀಡಿದ ಪ್ರದರ್ಶನ ಟಿ20 ವಿಶ್ವಕಪ್‌ನಲ್ಲಿ ಅವರು ಅತ್ಯುತ್ತಮ ಪ್ರದರ್ಶನವಾಗಿದೆ.

ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್

ಪಪುವಾ ನ್ಯೂಗಿನಿ ವಿರುದ್ಧದ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಹೊರತುಪಡಿಸಿ ಬಾಂಗ್ಲಾದೇಶ ತಂಡದ ನಾಯಕ ಮಹಮ್ಮದುಲ್ಲಾ ಕೂಡ ಸ್ಪೋಟಕ ಪ್ರದರ್ಶನ ನೀಡಿದರು. ಕೇವಲ 28 ಎದುರಿಸಿದ ಮಹ್ಮದುಲ್ಲಾ 50 ರನ್‌ಗಳಿಸಿದ್ದಾರೆ. ಅಂತಿಮ ಹಂತದಲ್ಲಿ ಸೈಫುದ್ದೀನ್ 6 ಎಸೆತಗಳಲ್ಲಿ 19 ರನ್‌ಗಳಿಸಿ ಬಾಂಗ್ಲಾ ಬೃಹತ್ ಮೊತ್ತ ದಾಖಲಿಸಲು ಕಾರಣರಾದರು. ಈ ಪಂದ್ಯವನ್ನು ಬಾಂಗ್ಲಾದೇಶ 84 ರನ್‌ಗಳ ಬೃಹತ್ ಅಂತರದಿಂದ ಗೆದ್ದು ಬೀಗಿದೆ.

ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನೈಮ್, ಲಿಟನ್ ದಾಸ್, ಮಹೇದಿ ಹಸನ್, ಶಕೀಬ್ ಅಲ್ ಹಸನ್, ನೂರುಲ್ ಹಸನ್ (ವಿಕೆಟ್ ಕೀಪರ್), ಅಫೀಫ್ ಹೊಸೇನ್, ಮಹ್ಮದುಲ್ಲಾ (ನಾಯಕ), ಮುಷ್ಫಿಕರ್ ರಹೀಮ್, ಮೊಹಮ್ಮದ್ ಸೈಫುದ್ದೀನ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್
ಬೆಂಚ್: ಶೊರಿಫುಲ್ ಇಸ್ಲಾಂ, ಶಮೀಮ್ ಹೊಸೇನ್, ನಸುಮ್ ಅಹ್ಮದ್, ಸೌಮ್ಯ ಸರ್ಕಾರ್

ಪಾಕಿಸ್ತಾನದ ಈ ಆಟಗಾರರ ಮೇಲೆ ಒಂದು ಕಣ್ಣಿಡಿ | Oneindia Kannada

Story first published: Friday, October 22, 2021, 12:38 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X