ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಪ್ರಿಯರಿಗೆ 'ಕೂ' ಸಾಮಾಜಿಕ ಜಾಲತಾಣದಿಂದ ಭರ್ಜರಿ ಅವಕಾಶ

By ಪ್ರತಿನಿಧಿ
t20 world cup: special opportunity for cricket lovers from the Koo creater cup

ಬೆಂಗಳೂರು: ಟಿ20 ವಿಶ್ವಕಪ್‌ನ ಈ ಸಂದರ್ಭದಲ್ಲಿ ದಿನದಿಂದ ದಿನಕ್ಕೆ ಕ್ರಿಕೆಟ್ ಫೀವರ್ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಭಾರತದ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಆಪ್ ಕ್ರಿಕೆಟ್‌ನ #SabseBadaStadium ಅಡಿಯಲ್ಲಿ ನಡೆಯುತ್ತಿರುವ 'ಕೂ ಕ್ರಿಯೇಟರ್ ಕಪ್' ನಲ್ಲಿ ಭಾಗವಹಿಸಲು ಕಂಟೆಂಟ್ ಕ್ರಿಯೇಟರ್ ಗಳನ್ನೂ ಆಹ್ವಾನಿಸುತ್ತಿದೆ. ಈ ಬಗ್ಗೆ ಪ್ರಕಟಣೆ ಕೂ ಸಾಮಾಜಿಕ ಜಾಲತಾಣ ಪ್ರಟಣೆಯನ್ನು ಹೊರಡಿಸಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಮಾಡಬೇಕಿರುವುದು ಇಷ್ಟೇ, ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ 2021ರ ಸಮಯದಲ್ಲಿ ಪಂದ್ಯಗಳಿಗೆ ಸಂಬಂಧಿಸಿದ ಉಲ್ಲಾಸಕರ ಮೀಮ್‌ಗಳು, ಟ್ರೋಲ್ ಬರಹಗಳು, ವೀಡಿಯೊಗಳು ಅಥವಾ ನೈಜ-ಸಮಯದ #Koomentary ಅನ್ನು ಹಂಚಿಕೊಳ್ಳಬೇಕು ಎಂದು ಈ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೂ ಕ್ರಿಯೇಟರ್ ಕಪ್‌ನಲ್ಲಿ ಭಾಗವಹಿಸಲು ಮಾಡಬೇಕಿರುವುದೇನು ಎಂಬುದನ್ನು ಮುಂದೆ ಓದಿ..

* Koo ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಹ್ಯಾಂಡಲ್/ಅಕೌಂಟ್ ಅನ್ನು ರಚಿಸಿ
* ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಬಹು ಭಾಷಾ ಸೌಲಭ್ಯವನ್ನು ಬಳಸಿ ಕ್ರಿಕೆಟ್ ಗೆ ಸಂಬಂಧಿಸಿದ ಮೀಮ್‌ಗಳು, ವೀಡಿಯೊಗಳು ಇತ್ಯಾದಿಗಳ ವಿಷಯವನ್ನು ಅಪ್ಲಿಕೇಶನ್‌ನಲ್ಲಿ ಪ್ರತಿದಿನ ಪೋಸ್ಟ್ ಮಾಡಿ. ಗರಿಷ್ಠ ವೀಕ್ಷಕರನ್ನು ಖಚಿತಪಡಿಸಿಕೊಳ್ಳಲು ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಪೋಸ್ಟ್ ಗಳನ್ನು ಹಾಕಬೇಕು
*ನಿಮ್ಮ ಸಾಮಾಜಿಕ ವಲಯದೊಂದಿಗೆ ನಿಮ್ಮ Koos ಅನ್ನು ಹಂಚಿಕೊಳ್ಳಿ ಮತ್ತು Koo ನಲ್ಲಿ ನಿಮ್ಮ ಹ್ಯಾಂಡಲ್ ಅನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸಿ.
*ಅಕ್ಟೋಬರ್ 20 - ನವೆಂಬರ್ 20, 2021 ರ ಅವಧಿಯಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ Koo ಹ್ಯಾಂಡಲ್ ಅನ್ನು Koo ಕ್ರಿಯೇಟರ್ ಕಪ್‌ನ ವಿಜೇತ ಎಂದು ಘೋಷಿಸಲಾಗುತ್ತದೆ ಮತ್ತು ಮಾಲ್ಡೀವ್ಸ್‌ ಪ್ರವಾಸ ಅಥವಾ ಮ್ಯಾಕ್‌ಬುಕ್ ಏರ್ ಬಹುಮಾನವನ್ನು ಪಡೆಯುತ್ತಾರೆ.

ಕ್ರಿಕೆಟ್ ಪ್ರಿಯರು ವರ್ಕ್ ಫ್ರಮ್ ಹೋಂ ಜಂಜಾಟದಿಂದ ತಪ್ಪಿಸಿಕೊಂಡು ಮಾಲ್ಡೀವ್ಸ್ ಪ್ರವಾಸಕ್ಕೆ ಟಿಕೆಟ್ ಗೆಲ್ಲುವ ಸುವರ್ಣಾವಕಾಶ ಇದು ಎಂದು ಕೂ ಆಪ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Story first published: Wednesday, October 27, 2021, 15:25 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X