ಟಿ20 ವಿಶ್ವಕಪ್: ಟೀಮ್ ಇಂಡಿಯಾದ 6ನೇ ಬೌಲರ್‌ನ ಸಮಸ್ಯೆಗೆ ಸಿಕ್ಕಿತು ಉತ್ತರ!

Hardik Pandya ಮುಂದಿನ ಪಂದ್ಯದಲ್ಲಿ ಆಡೇ ಆಡ್ತಾರೆ | Oneindia Kannada

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 10 ವಿಕೆಟ್‌ಗಳ ಅಂತರದಿಂದ ಆಘಾತಕಾರಿಯಾಗಿ ಸೋಲು ಅನುಭವಿಸಿದ ನಂತರ ಭಾರತದ ಪ್ರದರ್ಶನದ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅದರಲ್ಲೂ ತಂಡದ ಸಂಯೋಜನೆಯ ಬಗ್ಗೆ ಪ್ರಶ್ನೆಗಳು ಎದ್ದಿತ್ತು. ಆರನೇ ಬೌಲರ್ ಆಡುವ ಬಳಗದಲ್ಲಿ ಇಲ್ಲದಿರುವುದು ತಂಡದ ಸೋಲಿಗೆ ಕಾರಣ ಎಂಬ ಅಭಿಪ್ರಾಯಗಳು ದಟ್ಟವಾಗಿ ವ್ಯಕ್ತವಾಗಿತ್ತು. ಅದರಲ್ಲೂ ಆಲ್‌ರೌಂಡರ್ ಆಗಿ ಆಯ್ಕೆಯಾಗಿದ್ದರೂ ಬೌಲಿಂಗ್ ಮಾಡಲು ಅಸಮರ್ಥರಾಗಿದ್ದ ಹಾರ್ದಿಕ್ ಪಾಂಡ್ಯ ಬಗ್ಗೆ ಸಾಕಷ್ಟು ಕಟು ಮಾತುಗಳು ಕೇಳಿ ಬಂದಿತ್ತು.

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಅಸ್ತ್ರ ಎಂದು ಪರಿಗಣಿಸಲ್ಪಟ್ಟಿರುವ ಹಾರ್ದಿಕ್ ಪಾಂಡ್ಯ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ಅನುಮಾನಗಳು ಎದ್ದಿತ್ತು. ಬೆನ್ನು ನೋವಿನ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಲ್ಲಿಯೂ ಬೌಲಿಂಗ್ ಮಾಡುತ್ತಾರಾ ಎಂಬ ಪ್ರಶ್ನೆಗಳು ಉಳಿದುಕೊಂಡಿತ್ತು. ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ ಆಡುವ ಬಳಗದಲ್ಲಿ ಇರಲು ಅಸಾಧ್ಯ ಎಂಬ ಅಭಿಪ್ರಾಯಗಳು ಜೋರಾಗಿ ವ್ಯಕ್ತವಾಗಿತ್ತು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಕಣಕ್ಕಿಳಿದು ವಿಫಲವಾದ ನಂತರ ಹಾರ್ದಿಕ್ ಪಾಂಡ್ಯ ಬಗ್ಗೆ ಟೀಕೆಗಳು ಹೆಚ್ಚಾಗಿದೆ.

ಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿ

ಹಾರ್ದಿಕ್ ಪಾಂಡ್ಯ ಬಗ್ಗೆ ಟೀಕೆಯ ಜೊತೆಗೆ ಆರನೇ ಬೌಲರ್ ಕೊರತೆ ಬಗ್ಗೆಯೂ ಭಾರೀ ಚರ್ಚೆಯಾಗಿದೆ. ಇದೀಗ ಈ ಎರಡು ಚರ್ಚೆಗಳಿಗೂ ತೆರೆ ಬೀಳುವ ಬೆಳವಣಿಗೆ ನಡೆದಿದೆ. ಇದು ಟೀಮ್ ಇಂಡಿಯಾ ಪಾಲಿಗೆ ಆಶಾದಾಯಕ ಬೆಳವಣಿಗೆ

ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಬಗ್ಗೆ ಅಪ್‌ಡೇಟ್

ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಬಗ್ಗೆ ಅಪ್‌ಡೇಟ್

ಇದೀಗ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ವಿಚಾರವಾಗಿ ಪ್ರಮುಖ ಅಪ್‌ಡೇಟ್ ಲಭ್ಯವಾಗಿದೆ. ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಫಿಟ್‌ನೆಸ್‌ನಲ್ಲಿ ಪಾಸ್ ಆಗಿದ್ದಾರೆ ಎಮದು ತಿಳಿದು ಬಂದಿದೆ. ಅಲ್ಲದೆ ಹಾರ್ದಿಕ್ ಪಾಂಡ್ಯ ನೆಟ್‌ನಲ್ಲಿ ಬೌಲಿಂಗ್ ಅಭ್ಯಾಸವನ್ನು ಕೂಡ ಆರಂಭಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪೂರ್ಣ ಪ್ರಮಾಣದ ಆಲ್‌ರೌಂಡರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಸಾಧ್ಯತೆ

ನ್ಯೂಜಿಲೆಂಡ್ ವಿರುದ್ಧ ಬೌಲಿಂಗ್ ಸಾಧ್ಯತೆ

ಇನ್ನು ಹಾರ್ದಿಕ್ ಪಾಂಡ್ಯ ಬೌಲಿಂಗ್ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಇನ್ನೂ ಮೂರು ದಿನಗಳ ಕಾಲಾವಕಾಶವಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಈ ಅವಧಿಯನ್ನು ಬೌಲಿಂಗ್ ಸಿದ್ಧತೆಗಾಗಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಬೌಲಿಂಗ್ ದಾಳಿಗಿಳಿಯಲು ಸಜ್ಜಾಗಲಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ತಂಡದ ವಿಡುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಟೀಮ್ ಇಂಡಿಯಾಗೂ ತಂಡದ ಸಂಯೋಜನೆ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುವ ಅಗತ್ಯ ಇರುವುದರಿಂದಾಗಿ ಸಾಧ್ಯವಾದಷ್ಟು ಶೀಘ್ರವಾಗಿ ಪಾಂಡ್ಯ ಬೌಲಿಂಗ್‌ನತ್ತ ಗಮನ ಹರಿಸುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ವಿರುದ್ಧ ಕನಿಷ್ಠ 2 ಓವರ್‌ಗಳ ಬೌಲಿಂಗ್ ಮಾಡದರೆ 6ನೇ ಬೌಲರ್ ಆಗಿ ತಂಡಕ್ಕೆ ಸಮರ್ಥವಾಗಿ ನೆರವಾಗುವ ನಿರೀಕ್ಷೆಯಿದೆ.

ಐಪಿಎಲ್‌ನಲ್ಲಿ ಬೌಲಿಂಗ್ ಮಾಡದ ಪಾಂಡ್ಯ

ಐಪಿಎಲ್‌ನಲ್ಲಿ ಬೌಲಿಂಗ್ ಮಾಡದ ಪಾಂಡ್ಯ

ಬೆನ್ನು ನೋವಿನ ಕಾರಣದಿಂದಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಅಸಮರ್ಥರಾಗಿದ್ದರು. ಕಳೆದ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಕೆಲ ಓವರ್‌ಗಳ ಬೌಲಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯ ನಂತರ ಐಪಿಎಲ್‌ನಲ್ಲಿ ಒಂದು ಓವರ್ ಕೂಡ ಬೌಲಿಂಗ್ ಮಾಡಿರಲಿಲ್ಲ. ಅವರ ಫಿಟ್‌ನೆಸ್ ಬೌಲಿಂಗ್ ಮಾಡಲು ಸಮರ್ಥವಾಗಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ವೈದ್ಯಕೀಯ ಮೂಲಗಳು ತಿಳಿಸಿತ್ತು. ಆದರೆ ವಿಶ್ವಕಪ್‌ನ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಸಂಪೂರ್ಣವಾಗಿ ಫಿಟ್ ಆಗುವ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದರು.

ಭಾರತ vs ನ್ಯೂಜಿಲೆಂಡ್‌: ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಉಂಟಾಗಿರುವ ಈ 2 ಸಮಸ್ಯೆಗಳಿಂದ ಭಾರತಕ್ಕೆ ಲಾಭ

ಕಳೆಗುಂದಿಗೆ ಹಾರ್ದಿಕ್ ಬ್ಯಾಟಿಂಗ್ ಫಾರ್ಮ್

ಕಳೆಗುಂದಿಗೆ ಹಾರ್ದಿಕ್ ಬ್ಯಾಟಿಂಗ್ ಫಾರ್ಮ್

ಇನ್ನು ಹಾರ್ದಿಕ್ ಪಾಂಡ್ಯ ಸದ್ಯ ಪೂರ್ಣ ಪ್ರಮಾಣದ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಬ್ಯಾಟರ್ ಆಗಿ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಹಾರ್ದಿಕ್ ಪಾಂಡ್ಯ ವಿಫಲವಾಗುತ್ತಾ ಬಂದಿದ್ದಾರೆ. ಕಳೆದ ಐಪಿಎಲ್‌ನಲ್ಲಿಯೂ ಹಾರ್ದಿಕ್ ಪಾಂಡ್ಯ ಬ್ಯಾಟರ್ ಆಗಿ ವಿಫಲವಾಗಿದ್ದರು. ಹಾರ್ದಿಕ್ ಪಾಂಡ್ಯ ವೈಫಲ್ಯ ತಂಡದ ಒಟ್ಟಾರೆ ಪ್ರದರ್ಶನದ ಮೇಲೂ ಪರಿಣಾಮ ಬೀರಿತ್ತು. ಹೀಗಾಗಿ ಟೀಮ್ ಇಂಡಿಯಾ ಪರವಾಗಿಯೂ ಆದಷ್ಟು ಶೀಘ್ರವಾಗಿ ಹಾರ್ದಿಕ್ ಪಾಂಡ್ಯ ತಮ್ಮ ಫಾರ್ಮ್ ಕಂಡುಕೊಳ್ಳಬೇಕಿದೆ. ಅಲ್ಲದೆ 6ನೇ ಬೌಲರ್ ಆಗಿ ಪಾಂಡ್ಯ ಅವರತ್ತ ಹೆಚ್ಚಿನ ನಿರೀಕ್ಷೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 27, 2021, 23:56 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X