ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: ಪರ್ತ್‌ನಲ್ಲಿ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ ಪಡೆ

T20 World Cup: Team India Begin Training Session At Western Australian Cricket Association

ರೋಹಿತ್ ಶರ್ಮಾ ಮತ್ತು ತಂಡ 14 ಜನರ ತಂಡದೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ರೋಹಿತ್ ಶರ್ಮಾ ನೇತೃತ್ವದ ಭಾರತ ಟಿ20 ವಿಶ್ವಕಪ್‌ಗಾಗಿ ಮೊದಲ ತರಬೇತಿ ಅವಧಿಯನ್ನು ಆರಂಭಿಸಿದೆ. ಭಾರತವು ಅಕ್ಟೋಬರ್ 6 ರಂದು ಪರ್ತ್ ತಲುಪಿದೆ ಮತ್ತು ಈಗ ಅದರ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳಿಗೆ ಸಜ್ಜಾಗಿದೆ.

ಮೀಸಲು ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು ಸರಣಿ ಮುಕ್ತಾಯವಾದ ನಂತರ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

ಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿ

ಬಿಸಿಸಿಐ ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ನಿಂದ ಅಭ್ಯಾಸ ಅವಧಿಯ ಚಿತ್ರಗಳನ್ನು ಹಂಚಿಕೊಂಡಿದೆ. ಭಾರತವು ಅಕ್ಟೋಬರ್ 10 ಮತ್ತು 13 ರಂದು ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ತಂಡ ತರಬೇತಿಯನ್ನು ಪ್ರಾರಂಭಿಸಿದ್ದಾರೆ ಮತ್ತು ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಆಡಲು ಸಿದ್ಧರಾಗಿದ್ದಾರೆ.

ಟಿ20 ವಿಶ್ವಕಪ್‌ಗೂ ಮುನ್ನ ಬಿಸಿಸಿಐ ಭಾರತಕ್ಕೆ ಎರಡು ಹೆಚ್ಚುವರಿ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸಿತ್ತು. ಪರ್ತ್‌ನಲ್ಲಿ ಭಾರತದ ಅಭ್ಯಾಸವನ್ನು ನಿಗದಿಪಡಿಸಲಾಯಿತು. ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಕ್ರಮವಾಗಿ ಅಕ್ಟೋಬರ್ 17 ಮತ್ತು 19 ರಂದು ಆಡಲಿದೆ.

ಮೀಸಲು ಆಟಗಾರರ ಪ್ರಯಾಣ

ಮೀಸಲು ಆಟಗಾರರ ಪ್ರಯಾಣ

ಟಿ20 ವಿಶ್ವಕಪ್‌ನಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿರುವುದರಿಂದ, ಬಿಸಿಸಿಐ ಇನ್ನೂ ಬದಲಿ ಆಟಗಾರನನ್ನು ಹೆಸರಿಸಿಲ್ಲ. ಮೀಸಲು ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು ಸರಣಿ ಮುಕ್ತಾಯವಾದ ನಂತರ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದಾರೆ.

ಮೀಸಲು ಆಟಗಾರರು ಇಲ್ಲದಿದ್ದರೂ, ಟೀಂ ಇಂಡಿಯಾ ನೆಟ್‌ ಬೌಲರ್ ಗಳ ಜೊತೆ ಪ್ರಯಾಣ ಮಾಡಲಿದೆ. ಪರ್ತ್‌ನ ಡಬ್ಲ್ಯೂಎಸಿಎ ಶಿಬಿರದಲ್ಲಿ ಟೀಂ ಇಂಡಿಯಾ ನೆಟ್‌ ಬೌಲರ್ ಗಳ ಜೊತೆ ಅಭ್ಯಾಸ ಮಾಡಲಿದೆ.

ಮತ್ತೊಮ್ಮೆ ಎಡವಿದ ವಿಂಡೀಸ್: 2ನೇ ಟಿ20 ಪಂದ್ಯದಲ್ಲಿಯೂ ಗೆದ್ದು ಬೀಗಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಾಯ

ಆಸ್ಟ್ರೇಲಿಯಾ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಾಯ

ಟಿ20 ವಿಶ್ವಕಪ್ ಆರಂಭದ ವೇಳೆಗೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ ಅವಧಿಗೂ ಮುನ್ನವೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದೆ.

"ಬಹಳಷ್ಟು ಆಟಗಾರರು ಆಸ್ಟ್ರೇಲಿಯಾಕ್ಕೆ ಹೋಗಿಲ್ಲ. ಅದಕ್ಕಾಗಿಯೇ ನಾವು ಆಸ್ಟ್ರೇಲಿಯಾಗೆ ಮೊದಲೇ ಬಂದಿದ್ದೇವೆ. ಪರ್ತ್‌ನಲ್ಲಿ ಬೌನ್ಸಿ ಪಿಚ್‌ಗಳಲ್ಲಿ ಅಭ್ಯಾಸ ಮಾಡುತ್ತೇವೆ. ಕೇವಲ 7-8 ಆಟಗಾರರು ಮಾತ್ರ ಆಸ್ಟ್ರೇಲಿಯಾದಲ್ಲಿ ಈ ಮೊದಲು ಆಡಿದ್ದಾರೆ. ನಾವು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿದ್ದೇವೆ ಜೊತೆಗೆ ಎರಡು ಐಸಿಸಿ ಅಭ್ಯಾಸ ಪಂದ್ಯಗಳಿವೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಾಣಬೇಕು

ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಾಣಬೇಕು

ಪ್ರಮುಖ ಬೌಲರ್ ಬುಮ್ರಾ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಅದರಲ್ಲೂ ಅಂತಿಮ ಓವರ್ ಗಳಲ್ಲಿ ಭಾರತದ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ಕೂಡ ತಲೆನೋವಾಗಿದೆ.

ಇತ್ತೀಚಿನ ಪಂದ್ಯಗಳಲ್ಲಿ ಫೀಲ್ಡಿಂಗ್ ವಿಭಾಗದಲ್ಲೂ ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಕಳಪೆ ಫೀಲ್ಡಿಂಗ್, ಕ್ಯಾಚ್‌ಗಳನ್ನು ಕೈಚೆಲ್ಲುವುದನ್ನು ಮಾಡುತ್ತಿದೆ. ಫೀಲ್ಡಿಂಗ್‌ನಲ್ಲಿ ಕೂಡ ರೋಹಿತ್ ಶರ್ಮಾ ಪಡೆ ಸುಧಾರಣೆ ಕಾಣಬೇಕಿದೆ.

ಯೂಟ್ಯೂಬ್‌ನಲ್ಲಿ ನೇರಪ್ರಸಾರ

ಯೂಟ್ಯೂಬ್‌ನಲ್ಲಿ ನೇರಪ್ರಸಾರ

ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧದ ಭಾರತದ ಅಭ್ಯಾಸ ಪಂದ್ಯಗಳನ್ನು ಪಶ್ಚಿಮ ಆಸ್ಟ್ರೇಲಿಯಾದ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಭಾರತದ ಅಭ್ಯಾಸ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

Story first published: Friday, October 7, 2022, 21:05 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X