ಟಿ20 ವಿಶ್ವಕಪ್‌ಗೆ ಆಯ್ಕೆ: ತಂಡವನ್ನು ಅಂತಿಮಗೊಳಿಸಲು ಆಯ್ಕೆಗಾರರಿಗೆ 3-4 ಅವಕಾಶಗಳು ಮಾತ್ರ ಬಾಕಿ!

ಮುಂಬರುವ ಟಿ-20 ವಿಶ್ವಕಪ್ ವಿಶ್ವಕಪ್‌ಲ್ಲಿ ಭಾಗಿಯಾಗುವ ತಂಡಗಳ ಪಟ್ಟಿಯ ಘೋಷಣೆಗೆ ಐಸಿಸಿ ಅಂತಿಮ ದಿನಾಂಕವನ್ನು ನಿಗದಿ ಪಡಿಸಿದೆ. ಸೆಪ್ಟೆಂಬರ್ 15 ರ ಒಳಗೆ ಎಲ್ಲ ತಂಡಗಳು ಕೂಡ ಸ್ಕ್ವಾಡ್‌ಅನ್ನು ಅಂತಿಮಗೊಳಿಸಲು ಐಸಿಸಿ ಗಡುವು ನೀಡಿದೆ. ಈ ಹಂತದಲ್ಲಿ ಭಾರತ ತಂಡದ ವಿಶ್ವಕಪ್ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಯಾವೆಲ್ಲ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಅವಕಾಶಗಳನ್ನು ಗಿಟ್ಟಿಕೊಳ್ಳಬಹುದು ಎಂಬ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಭಾರತ ತಂಡದಲ್ಲಿ ಸಾಕಷ್ಟು ಪೈಪೋಟಿಗಳು ಉಂಟಾಗಿದೆ. ಕೆಲ ಸ್ಥಾನಗಳಿಗೆ ಹಲವು ಆಟಗಾರರು ಸ್ಪರ್ಧೆಯಲ್ಲಿದ್ದಾರೆ. ಆದರೆ ಈ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ಭಾರತ ತಂಡದ ಸದಸ್ಯರನ್ನು ಆಯ್ಕೆಮಾಡಲು ಭಾರತದ ಆಯ್ಕೆಗಾರರಿಗೆ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಈಗ ಕೆಲವೇ ಅವಕಾಶಗಳು ಮಾತ್ರವೇ ಬಾಕಿ ಉಳಿದಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಮೂರರಿಂದ ನಾಲ್ಕು ಅವಕಾಶಗಳನ್ನು ಮಾತ್ರವೇ ಬಳಸಿಕೊಂಡು ಆಯ್ಕೆ ಮಾಡಬೇಕಾಗಿದೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರ

ಅವಕಾಶ 1, ಭಾರತ vs ಐರ್ಲೆಂಡ್ ಸರಣಿ

ಅವಕಾಶ 1, ಭಾರತ vs ಐರ್ಲೆಂಡ್ ಸರಣಿ

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅಂತ್ಯವಾಗಿದ್ದು ಸದ್ಯ ಭಾರತ ಐರ್ಲೆಂಡ್ ವಿರುದ್ಧ ಟಿ20 ಸರಣಿಯನ್ನಾಡಲು ಸಜ್ಜಾಗುತ್ತಿದೆ. ಎರಡು ಪಂದ್ಯಗಳ ಚುಟುಕು ಸರಣಿ ಇದಾಗಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳುವ ಈ ತಂಡದಲ್ಲಿ ಹೆಚ್ಚಾಗಿ ಯುವ ಆಟಗಾರರು ಅವಕಾಶ ಪಡೆದುಕೊಂಡಿದ್ದಾರೆ. ಭಾರತ ತಂಡದ ಮುಖ್ಯ ಸ್ಕ್ವಾಡ್ ಇಂಗ್ಲೆಂಡ್ ಸರಣಿಗೆ ತೆರಳಿರುವ ಕಾರಣ ಹೊಸಬರಿಗೆ ಅವಕಾಶ ದೊರೆತಿದೆ. ಈ ಅವಕಾಶವನ್ನು ಯಾವೆಲ್ಲಾ ಆಟಗಾರರು ಬಳಸಿಕೊಂಡು ಆಯ್ಕೆಗಾರರ ಗಮನಸೆಳೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಅವಕಾಶ 2, ಭಾರತ ಹಾಗೂ ಇಂಗ್ಲೆಂಡ್ ಸರಣಿ

ಅವಕಾಶ 2, ಭಾರತ ಹಾಗೂ ಇಂಗ್ಲೆಂಡ್ ಸರಣಿ

ಭಾರತ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಪೂರ್ಣ ಸಾಮರ್ಥ್ಯದ ಭಾರತ ತಂಡ ಕಣಕ್ಕಿಳಿಯಲಿದೆ. ಕಳೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದ ಇಂಗ್ಲೆಂಡ್‌ ತಂಡ ಭಾರತಕ್ಕೆ ಕಠಿಣ ಸವಾಲೊಡ್ಡಲಿದೆ. ಇನ್ನು ಈ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾರಣ ಇಂಗ್ಲೆಂಡ್ ಪಿಚ್ ಕೂಡ ವೇಗದ ಬೌಲಿಂಗ್‌ಗೆ ಹೆಚ್ಚು ಬೆಂಬಲ ನೀಡುವ ಕಾರಣ ಆ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆಗಾರರ ಬಳಗ ಅವಲೋಕಿಸಲಿದೆ.

ಅವಕಾಶ 3, ಭಾರತ vs ವೆಸ್ಟ್ ಇಂಡೀಸ್ ಸರಣಿ

ಅವಕಾಶ 3, ಭಾರತ vs ವೆಸ್ಟ್ ಇಂಡೀಸ್ ಸರಣಿ

ಇನ್ನು ಇಂಗ್ಲೆಂಡ್ ಪ್ರವಾಸ ಮುಗಿಸಿದ ಬಳಿಕ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ವೈಟ್‌ಬಾಲ್ ಸರಣಿ ಇದಾಗಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗಿಯಾದ ಬಳಿಕ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ಈ ಪ್ರವಾಸದಲ್ಲಿ ಆಡಲಿದೆ. ಇಂಗ್ಲೆಂಡ್‌ಗೆ ಪ್ರವಾಸ ನಡೆಸುವ ತಂಡವೇ ಈ ಸರಣಿಗೂ ತೆರಳುವ ಸಾಧ್ಯತೆಯಿದೆ. ಜುಲೈ 20ರಿಂದ ಈ ಸರಣಿ ಆರಂಭವಾಗಲಿದೆ.

ಅವಕಾಶಗಳನ್ನ ಕಳೆದುಕೊಂಡ ರಿಷಬ್ ಪಂತ್ !! | *Cricket | OneIndia Kannada
ಅವಕಾಶ 4, ಏಷ್ಯಾ ಕಪ್

ಅವಕಾಶ 4, ಏಷ್ಯಾ ಕಪ್

ಏಷ್ಯಾ ಕಪ್ ಟಿ20 ಟೂರ್ನಮೆಂಟ್‌ನ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಟಿ20 ವಿಶ್ವಕಪ್‌ ತಂಡಗಳ ಆಯ್ಕೆಗೆ ಸೆಪ್ಟೆಂಬರ್ 15ರ ಗಡುವು ಈಗಾಗಲೇ ನಿಗದಿಯಾಗಿರುವ ಕಾರಣ ಈ ಟೂರ್ನಿಗೆ ಮುನ್ನ ಭಾರತ ತಂಡವನ್ನು ಅಂತಿಮಗೊಳಿಸಬೇಕಾಗುತ್ತದೆ. ಹೀಗಾಗಿ ಈ ಟೂರ್ನಿಯನ್ನು ಟಿ20 ವಿಶ್ವಕಪ್‌ ತಯಾರಿಗಾಗಿ ಸಮರ್ಥವಾಗಿ ಬಳಸಿಕೊಳ್ಳಬಹುದು.

For Quick Alerts
ALLOW NOTIFICATIONS
For Daily Alerts
Story first published: Monday, June 20, 2022, 17:14 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X