ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಇಂಗ್ಲೆಂಡ್ ಗೆಲುವಿನ ಹೊರತಾಗಿಯೂ ಭಾರತದ ಕಳವಳಕ್ಕೆ ಕಾರಣವಾಗಿದೆ ಈ 4 ಸಂಗತಿ!

T20 World cup: Team India should worry about 4 things after warm-up match against England

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಅಧಿಕೃತ ಅಭಿಯಾನ ಆರಂಭವಾಗುವುದಕ್ಕೂ ಮುನ್ನ ಟೀಮ್ ಇಂಡಿಯಾ 2 ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲಿದ್ದು ಒಂದು ಪಂದ್ಯ ಈಗಾಗಲೇ ಅಂತ್ಯವಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಅಂತರದ ಭರ್ಜರಿ ಜಯವನ್ನು ದಾಖಲಿಸಿದೆ. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ನೀಡಿದ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಭಾರತ ಅದ್ಭುತ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಅದ್ಭುತ ಲಯದಲ್ಲಿರುವುದು ಸ್ಪಷ್ಟವಾಗಿದೆ. ಆರಂಭಿಕರಾದ ಆಟಗಾರ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ನೀಡಿದ ಅಮೋಘ ಬ್ಯಾಟಿಂಗ್ ಪ್ರದರ್ಶನ, ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಸಾಧಿಸಿದ ಯಶಸ್ಸು ಪ್ರಮುಖ ಘಟ್ಟದಲ್ಲಿ ಹಣಾಹಣಿಗೆ ಇಳಿಯುವ ಮುನ್ನ ಟೀಮ್ ಇಂಡಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಟಿ20 ವಿಶ್ವಕಪ್: ರಾಹುಲ್, ಇಶಾನ್ ಕಿಶನ್ ಅಬ್ಬರ; ಅಭ್ಯಾಸ ಪಂದ್ಯದಲ್ಲಿ ಆಂಗ್ಲರಿಗೆ ಸೋಲುಣಿಸಿದ ಭಾರತಟಿ20 ವಿಶ್ವಕಪ್: ರಾಹುಲ್, ಇಶಾನ್ ಕಿಶನ್ ಅಬ್ಬರ; ಅಭ್ಯಾಸ ಪಂದ್ಯದಲ್ಲಿ ಆಂಗ್ಲರಿಗೆ ಸೋಲುಣಿಸಿದ ಭಾರತ

ಆದರೆ ಈ ಅದ್ಭುತ ಪ್ರದರ್ಶನದ ಜೊತೆಗೆ ಭಾರತದ ಕೆಲ ಆಟಗಾರರ ಪ್ರದರ್ಶನ ಚಿಂತೆಯನ್ನು ಹೆಚ್ಚಿಸಿದೆ. ಕಳೆದ ಐಪಿಎಲ್‌ನಲ್ಲಿ ಲಯ ಕಳೆದುಕೊಂಡಂತೆ ಭಾಸವಾಗಿದ್ದ ಈ ಆಟಗಾರರು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿಯೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್‌ನ ಚಿಂತೆ ಹೆಚ್ಚಿಸಿದ ಆ ಆಟಗಾರರು ಯಾರು? ಮುಂದೆ ಓದಿ..

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಟೀಮ್ ಇಂಡಿಯಾದ ಪರವಾಗಿ ಸೀಮಿತ ಓವರ್‌ಗಳಲ್ಲಿ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಯನ್ನು ಕೆಡವುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಈ ಭಾರಿಯ ಐಪಿಎಲ್ ಎರಡನೇ ಚರಣದಲ್ಲಿ ಭುವಿ ಮಂಕಾದಂತೆ ಕಂಡು ಬಂದಿದ್ದರು. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ ಭುವನೇಶ್ವರ್ ಪರಿಣಾಮಕಾರಿಯಾಗಿರಲಿಲ್ಲ. ಭುವನೇರ್ಶವರ್ ಕುಮಾರ್ ಅವರ ಈ ಪ್ರದರ್ಶನ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿಯೂ ಮುಂದುವರಿದಿದೆ.

ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ನಾಲ್ಕು ಓವರ್‌ಗಳ ತಮ್ಮ ಬೌಲಿಂಗ್ ಕೋಟಾದಲ್ಲಿ ಅತ್ಯಂತ ದುಬಾರಿಯಾಗಿದ್ದರು. ಯಾವುದೇ ವಿಕೆಟ್ ಪಡೆಯಲು ವಿಫಲವಾದ ಭುವಿ 13.50 ಎಕಾನಮಿಯಲ್ಲಿ 54 ರನ್‌ ನೀಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡದ ಬೃಹತ್ ಮೊತ್ತಕ್ಕೆ ದೊಡ್ಡ ಕೊಡುಗೆ ನೀಡಿದರು. ಇದು ಈಗ ತಂಡದ ಮ್ಯಾನೇಜ್‌ಮೆಂಟ್‌ಗೆ ನಿಜವಾಗಿಯೂ ತಲೆ ನೋವು ಉಂಟು ಮಾಡಿದೆ.

ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!

ವಿಕೆಟ್ ಪಡೆದರೂ ದುಬಾರಿಯಾದ ರಾಹುಲ್ ಚಹರ್

ವಿಕೆಟ್ ಪಡೆದರೂ ದುಬಾರಿಯಾದ ರಾಹುಲ್ ಚಹರ್

ಈ ಬಾರಿ ಟಿ20 ವಿಶ್ವಕಪ್‌ಗೆ ಅನುಭವಿ ಯುಜುವೇಂದ್ರ ಚಾಹಲ್ ಬದಲಿಗೆ ರಾಹುಲ್ ಚಹರ್ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಯುಎಇನಲ್ಲಿ ನಡೆದ ಐಪಿಎಲ್‌ಗೂ ಮುನ್ನ ಉತ್ತಮ ಲಯದಲ್ಲಿದ್ದ ಚಹರ್ ಯುಎಇ ಕ್ರೀಡಾಂಗಣದಲ್ಲಿ ಯಶಸ್ಸು ಸಾಧಿಸಲು ವಿಫಲವಾಗಿದ್ದರು. ಇದೀಗ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿಯೂ ಮುಂದುವರಿದಿದೆ. ರಾಹುಲ್ ಚಹರ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು ಕೂಡ ಹೇರಳವಾಗಿ ರನ್ ಬಿಟ್ಟುಕೊಟ್ಟಿದ್ದಾರೆ. ಚಹರ್ ಎಸೆದ 4 ಓವರ್‌ಗಳಲ್ಲಿ 43 ರನ್‌ಗಳನ್ನು ಎದುರಾಳಿ ತಂಡ ಗಳಿಸಿದೆ. ಇದು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ ಚಿಂತಿಸಬೇಕಾದ ಸಂಗತಿಯಾಗಿದೆ.

ರನ್ ನಿಯಂತ್ರಿಸಿದರೂ ಅಶ್ವಿನ್ ವಿಕೆಟ್ ಪಡೆಯಲು ವಿಫಲ

ರನ್ ನಿಯಂತ್ರಿಸಿದರೂ ಅಶ್ವಿನ್ ವಿಕೆಟ್ ಪಡೆಯಲು ವಿಫಲ

ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗುವ ಮೂಲಕ ಸುದೀರ್ಘ ಕಾಲದ ನಂತರ ಆರ್ ಅಶ್ವಿನ್ ಟೀಮ್ ಇಂಡಿಯಾದ ಸೀಮಿತ ಓವರ್‌ಗಳಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧಧ ಅಭ್ಯಾಸ ಪಮದ್ಯದಲ್ಲಿ ಆರ್ ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ಇಂಗ್ಲೆಂಡ್ ದಾಂಡಿಗರು ರನ್‌ಗಳಿಸಲು ಸಂಪೂರ್ಣವಾಗಿ ವಿಫಲವಾದರು. ಆದರೆ ಆರ್ ಅಶ್ವಿನ್ ಒಂದೂ ವಿಕೆಟ್ ಪಡೆಯಲು ವಿಫಲವಾಗಿರುವುದು ಇಲ್ಲಿ ಚಿಂತೆಗೆ ಕಾರಣವಾಗಿದೆ.

ಟಿ20 ವಿಶ್ವಕಪ್: ಪಾರ್ಥೀವ್ ಪಟೇಲ್ ಹೆಸರಿಸಿದ ಟೀಮ್ ಇಂಡಿಯಾದ ಪ್ಲೇಯಿಂಗ್ XI

ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ

ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾದ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಬೌಲಿಂಗ್‌ನಿಂದ ಹಿಂದಕ್ಕೆ ಸರಿದಿದ್ದಾರೆ. ಆದರೆ ವಿರ್ಶವಕಪ್‌ನಂತಾ ವೇದಿಕೆಯಲ್ಲಿ ಹಾರ್ದಿಕ್ ಪಾಂಡ್ಯ ಅವರಂತಾ ಆಟಗಾರನಿಂದ ಬೌಲಿಂಗ್‌ಅನ್ನು ತಂಡ ನಿರೀಕ್ಷೆ ಮಾಡುತ್ತಿದೆ. ವೇಗದ ಬೌಲಿಂಗ್ ಆಲ್‌ರೌಂಡರ್ ತಂಡದ ಸಮತೋಲನವನ್ನು ಮತ್ತಷ್ಟು ಬಲಪಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಟಿ20 ವಿಶ್ವಕೊ್‌ನ ವೇಳೆಗೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಡೆಯಲಿದ್ದಾರೆ ಎಂಬ ಮಾತುಗಳು ಮೂಲಗಳಿಂದ ಬಂದಿತ್ತು. ಆದರೆ ಟಿ20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿಯೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿಲ್ಲ. ಹೀಗಾಗಿ ಇದು ಕೂಡ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಕೇವಲ ಸ್ಪೆಶಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಡುವ ಬಳಗದಲ್ಲಿ ಉಳಿಸಿಕೊಳ್ಳುವುದರಿಂದಾಗಿ ತಂಡದ ಸಮತೋಲನಕ್ಕೆ ಹಿನ್ನಡೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತದ ಸ್ಕ್ವಾಡ್ ಹೀಗಿದೆ : ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆ), ಇಶಾನ್ ಕಿಶನ್ (ವಿಕೆ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ

ಮೀಸಲು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ದೀಪಕ್ ಚಾಹರ್

ಕೋಚ್ ಅವಧಿ ಅಂತ್ಯ: ಆರ್‌ಸಿಬಿ ಕೋಚ್ ಸಹಿತ ರವಿ ಶಾಸ್ತ್ರಿ ಮುಂದಿದೆ ಪ್ರಮುಖ ಆಯ್ಕೆಗಳು!ಕೋಚ್ ಅವಧಿ ಅಂತ್ಯ: ಆರ್‌ಸಿಬಿ ಕೋಚ್ ಸಹಿತ ರವಿ ಶಾಸ್ತ್ರಿ ಮುಂದಿದೆ ಪ್ರಮುಖ ಆಯ್ಕೆಗಳು!

ಶ್ರೇಯಸ್ ಐಯರ್ ನ ಬಿಟ್ಟು ಈತನನ್ನು ನಂಬಿದಕ್ಕೆ ಕೊಹ್ಲಿಗೆ ಮುಖಭಂಗ | Oneindia Kannada

Story first published: Tuesday, October 19, 2021, 13:36 [IST]
Other articles published on Oct 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X