ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಸಿಕ್ಸರ್ ಸುರಿಮಳೆ: ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ತಂಡಗಳು!

T20 world cup: These 5 teams are on top with most sixes in T20 World Cup history

ಟಿ20 ಮಾದರಿ ಅಂದರೆ ರನ್ ಸುರಿಮಳೆ ಸಾಮಾನ್ಯ. ಈ ಚುಟುಕು ಮಾದರಿಯಲ್ಲಿ ಅತ್ಯಂತ ಪ್ರತಿಷ್ಠಿತ ಟೂರ್ನಿ ಟಿ20 ವಿಶ್ವಕಪ್. ಈ ಟೂರ್ನಿಯಲ್ಲಿ ಮೇಲುಗೈ ಸಾಧಿಸಲು ಎಲ್ಲಾ ತಂಡಗಳು ಕೂಡ ಪ್ರತೀ ಬಾರಿಯೂ ಭಾರೀ ಪೈಪೋಟಿ ನಡೆಸಿಕೊಂಡು ಬರುತ್ತಿದ್ದು ಟ್ರೋಫಿ ಮುಡುಗೇರಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತವೆ. ಬ್ಯಾಟರ್‌ಗಳು ಹೆಚ್ಚಾಗಿ ಮಿಂಚುವ ಮಾದರಿ ಇದಾಗಿರುವ ಕಾರಣ ಇಲ್ಲಿ ಬೌಂಡರಿ ಸಿಕ್ಸರ್‌ಗಳ ಸುರಿಮಳೆ ಸಾಮಾನ್ಯವಾಗಿರುತ್ತದೆ.

ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು ಪ್ರಮುಖ ಘಟ್ಟವಾದ ಸೂಪರ್ 12 ಹಂತದ ಆರಂಭಕ್ಕೆ ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಈವರೆಗೆ ಅತ್ಯಂತ ಹೆಚ್ಚು ಸಿಕ್ಸರ್ ಸಿಡಿಸಿದ ಅಗ್ರ ಐದು ತಂಡಗಳು ಯಾವುದು ಎಂಬುದನ್ನು ನೋಡೋಣ. ಮುಂದೆ ಓದಿ..

T20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾT20 World Cup: ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಆಕಾಶ್ ಚೋಪ್ರಾ

5. ಶ್ರೀಲಂಕಾ

5. ಶ್ರೀಲಂಕಾ

ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಟಾಪ್ 5 ಸ್ಥಾನದಲ್ಲಿರುವ ತಂಡ ಶ್ರೀಲಂಕಾ. ಸದ್ಯ ಕೆಲ ವರ್ಷಗಳಿಂದ ಶ್ರೀಲಂಕಾ ತಂಡ ಕಳಗುಂದಿದಂತೆ ಇದ್ದರೂ ಹಲವಾರು ದಿಗ್ಗಜ ಆಟಗಾರರನ್ನು ಶ್ರೀಲಂಕಾ ತಂಡ ಒಳಗೊಂಡಿತ್ತು. ಹೀಗಾಗಿ ವಿಶ್ವಕಪ್‌ನಲ್ಲಿ ಅತೊ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ಒಟ್ಟು 172 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದೆ.

4. ಇಂಗ್ಲೆಂಡ್

4. ಇಂಗ್ಲೆಂಡ್

ಇನ್ನು ಚುಟುಕು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡ ಇಂಗ್ಲೆಂಡ್. ಕ್ರಿಕೆಟ್ ಜನಕರು ಎನಿಸಿರುವ ಇಂಗ್ಲೆಂಡ್ ಚುಟುಕು ಮಾದರಿಯಲ್ಲಿ ವಿಶ್ವಕಪ್ ಟ್ರೋಫಿಯನ್ನು ಒಂದು ಬಾರಿ ಎತ್ತಿ ಹಿಡಿಯಲು ಸಫಲವಾಗಿದೆ. ಆದರೆ ಪ್ರತಿ ಬಾರಿಯೂ ಅತ್ಯುತ್ತಮ ಆಟಗಾರರ ಪ್ರಬಲ ತಂಡದೊಂದಿಗೆ ಟೂರ್ನಿಯ ಕಣಕ್ಕೆ ಉಳಿಯುತ್ತಿದೆ. ಟಿ20 ವಿಉಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ಈವರೆಗೆ ಒಟ್ಟು 194 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಹೊಂದಿದೆ. ಈ ಪೈಕಿ 26 ಸಿಕ್ಸರ್ ಸಿಡಿಸಿರುವ ಜೋಸ್ ಬಟ್ಲರ್ ಅವರದ್ದು ದೊಡ್ಡ ಕೊಡುಗೆ ಎನಿಸಿಕೊಂಡಿದೆ.

3. ಪಾಕಿಸ್ತಾನ

3. ಪಾಕಿಸ್ತಾನ

ಟಿ20 ಮಾದರಿಯ ವಿಶ್ವಕಪ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿರುವ ತಂಡಗಳ ಪೈಕಿ ಪಾಕಿಸ್ತಾನ ಕೂಡ ಒಂದು. ಈ ಹಿಂದೆ ನಡೆದಿರುವ ಒಟ್ಟು 7 ಟಿ20 ವಿರ್ಶವಕಪ್‌ಗಳ ಪೈಕಿ ಪಾಕಿಸ್ತಾನ 5 ಬಾರಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಒಂದು ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದೆ. ಇನ್ನು ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ 3ನೇ ಸ್ಥಾನದಲ್ಲಿದ್ದು ಈವರೆಗೆ 195 ಸಿಕ್ಸರ್‌ಗಳನ್ನು ಬಾರಿಸಿದೆ. ಆಲ್‌ರೌಂಡರ್ ಶಾಹಿದ್ ಅಫ್ರಿದಿ 21 ಸಿಕ್ಸರ್ ಬಾರಿಸಿದ್ದು ಚುಟುಕು ವಿಶ್ವಕಪ್ ವೇದಿಕೆಯಲ್ಲಿ ಪಾಕ್ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

2. ವೆಸ್ಟ್ ಇಂಡೀಸ್

2. ವೆಸ್ಟ್ ಇಂಡೀಸ್

ವೆಸ್ಟ್ ಇಂಡೀಸ್ ತಂಡ ಯಾವಾಗಲೂ ಟಿ20 ಮಾದರಿಗೆ ಹೇಳಿ ಮಾಡಿಸಿದಂತಾ ಆಟಗಾರರ ಪಡೆಯನ್ನೇ ಹೊಂದಿದೆ. ಸಾಕಷ್ಟು ಸ್ಪೋಟಕ ಆಟಗಾರರನ್ನು ಹೊಂದಿದ ಇತಿಹಾಸ ಹೊಂದಿರುವ ವೆಸ್ಟ್ ಇಂಡೀಸ್ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಅಚ್ಚರಿಯ ವಿಷಯವೇನಲ್ಲ. ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ 210 ಸಿಕ್ಸರ್‌ಗಳನ್ನು ಸಿಡಿಸಿದ ಸಾಧನೆ ಮಾಡಿದೆ. ಟಿ20 ಮಾದರಿಯ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಟಿ20 ವಿಶ್ವಕಪ್‌ನಲ್ಲಿ ಒಟ್ಟು 63 ಸಿಕ್ಸರ್‌ಗಳನ್ನು ಬಾರಿಸಿದ್ದು ದಾಖಲೆಯಾಗಿದೆ. ವೆಸ್ಟ್ ಇಂಡೀಸ್ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದುಕೊಂಡಿದ್ದು ಟಿ20 ಮಾದರಿಯಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.

1. ಆಸ್ಟ್ರೇಲಿಯಾ

1. ಆಸ್ಟ್ರೇಲಿಯಾ

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ಆಸ್ಟ್ರೇಲಿಯಾ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಈವರೆಗೆ 211 ಸಿಕ್ಸರ್ ಸಿಡಿಸಿದ ಸಾಧನೆ ಹೊಂದಿದೆ. ಈ ಪೈಕಿ ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ಜೋಡಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಆಸ್ಟ್ರೇಲಿಯಾ ತಂಡದ ಪರವಾಗಿ ಹೊಂದಿದ್ದಾರೆ. ಈ ಜೋಡಿ ತಲಾ 31 ಸಿಕ್ಸರ್ ಸಿಡಿಸಿ ಸಾಧನೆ ಮಾಡಿದೆ.

Story first published: Tuesday, October 18, 2022, 15:28 [IST]
Other articles published on Oct 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X