ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ನಡೆಯದ ಆಟ ವಿಶ್ವಕಪ್‌ನಲ್ಲಿ ನಡಿಯುತ್ತಾ?: ಐಪಿಎಲ್‌ನಲ್ಲಿ ಫ್ಲಾಪ್ ಆದ ಈ 5 ಕ್ರಿಕೆಟಿಗರು ವಿಶ್ವಕಪ್ ತಂಡಕ್ಕೆ ಆಯ್ಕೆ

T20 World Cup: These Top 5 cricketers played poor performence in IPL 2022 but find place in national squad for world cup

ಟಿ20 ವಿಶ್ವಕಪ್ ಸನಿಹದಲ್ಲಿದೆ. ಈಗಾಗಲೇ ಬಹುತೇಕ ಎಲ್ಲಾ ತಂಡಗಳು ಕೂಡ ವಿಶ್ವಕಪ್‌ನ ತಂಡಗಳನ್ನು ಘೋಷಣೆ ಮಾಡಿದೆ. ಈ ಮೂಲಕ ಪ್ರತಿಷ್ಠಿತ ಟೂರ್ನಿಗೆ ಅಂತಿಮ ಹಂತದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲಾ ತಂಡಗಳು ಕೂಡ ತನ್ನದೇ ಆದ ಲೆಕ್ಕಾಚಾರಗಳನ್ನು ನಡೆಸಿ ವಿಶ್ವಕಪ್‌ನಲ್ಲಿ ಆಡುವ ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು ಟ್ರೋಫಿ ಗೆಲ್ಲಲು ಪೈಪೋಟಿ ನಡೆಸಲಿದೆ. ಆಸ್ಟ್ರೇಲಿಯಾದಲ್ಲಿ ಈ ಬಾರಿಯ ಚುಟುಕು ವಿಶ್ವಕಪ್ ನಡೆಯಲಿರುವ ಕಾರಣ ಕುತೂಹಲ ಹೆಚ್ಚಾಗಿದೆ.

ಇನ್ನು ಟಿ20 ಮಾದರಿಯಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಹೊಂದಿರುವ ಕ್ರಿಕೆಟ್ ಲೀಗ್ ಐಪಿಎಲ್ ವಿಶ್ವ ಕ್ರಕೆಟ್‌ನಲ್ಲಿ ಸಾಕಷ್ಟು ಪ್ರಭಾವವನ್ನು ಬೀರುವ ಟೂರ್ನಿಯಾಗಿದ್ದು ಈ ಟೂರ್ನಿಯ ಫಾರ್ಮ್ ಅದೆಷ್ಟೋ ಆಟಗಾರರ ಸಾಮರ್ಥ್ಯಕ್ಕೆ ವೇದಿಕೆಯನ್ನು ಒದಗಿಸಿಕೊಡುತ್ತದೆ. ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೆ ಅದೆಷ್ಟೋ ವಿದೇಶಿ ಕ್ರಿಕೆಟಿಗರು ಕೂಡ ಇಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸುವ ಮೂಲಕ ತಮ್ಮ ರಾಷ್ಟ್ರೀಯ ತಂಡಗಳಿಗೆ ಆಯ್ಕೆಯಾಗಿ ಸ್ಥಾನವನ್ನು ಗಟ್ಟಿಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳು ಇದೆ.

ರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳುರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳು

ಆದರೆ ಇಂದು ಇದಕ್ಕೆ ವ್ಯತಿರಿಕ್ತವಾದ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನಿಡಿದ್ದ ವಿಶ್ವ ಕ್ರಿಕೆಟ್‌ನ ಕೆಲ ಸ್ಟಾರ್ ಆಟಗಾರರು ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದ ಪರವಾಗಿ ಮಿಂಚುವ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ. ಹಾಗಾದರೆ ಆ ಐವರು ಆಟಗಾರರು ಯಾರು? ಮುಂದೆ ಓದಿ..

ಆಸಿಸ್ ದಾಂಡಿಗ ಮ್ಯಾಥ್ಯೂ ವೇಡ್

ಆಸಿಸ್ ದಾಂಡಿಗ ಮ್ಯಾಥ್ಯೂ ವೇಡ್

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ 2021ರಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಆಸ್ಟ್ರೇಲಿಯಾ ತಂಡದಲ್ಲಿಯೂ ಪ್ರಮುಖ ಭಾಗವಾಗಿದ್ದರು. ಆದರೆ ಕಳೆದ ಐಪಿಎಲ್ ಆವೃತ್ತಿಯಲ್ಲಿ ಮ್ಯಾಥ್ಯೂ ವೇಡ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. 34ರ ಹರೆಯದ ಈ ಆಸಿಸ್ ಆಟಗಾರನ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನಗಳು ಇಲ್ಲದಿದ್ದರೂ ಐಪಿಎಲ್ 2022ರ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಒಂದೇ ಒಂದು ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬಾರಲಿಲ್ಲ. ಆಡಿದ 10 ಪಂದ್ಯಗಳಲ್ಲಿ ಮ್ಯಾಥ್ಯೂ ವೇಡ್ ಗಳಿಸಿದ್ದು 157 ರನ್ ಮಾತ್ರ. ಅದು ಕೂಡ 113.77ರ ಸ್ಟ್ರೈಕ್‌ರೇಟ್‌ನಲ್ಲಿ. ಆದರೆ ಆಸ್ಟ್ರೇಲಿಯಾ ತಂಡದ ಪರವಾಗಿ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ವೇಡ್ ಅನೇಕ ಅದ್ಭುತ ಇನ್ನಿಂಗ್ಸ್‌ಗಳನ್ನು ನೀಡಿದ್ದಾರೆ. ಭಾರತದ ವಿರುದ್ಧದ ಸರಣಿಯ ಮೊಹಾಲಿ ಪಂದ್ಯದಲ್ಲಿಯೂ ಮ್ಯಾಥ್ಯೂ ವೇಡ್ ಆಸಿಸ್ ತಂಡದ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಸಹಜವಾಗಿಯೇ ಟಿ20 ತಂಡದಲ್ಲಿಯೂ ಮ್ಯಾಥ್ಯೂ ವೇಡ್ ಸ್ಥಾನ ಗಿಟ್ಟಿಸಿಕೊಂಡಿದ್ದು ಆಸಿಸ್ ಪರವಾಗಿ ಮುಂಬರುವ ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ.

ವಿಂಡೀಸ್ ಆಲ್‌ರೌಂಡರ್ ಓಡಿಯನ್ ಸ್ಮಿತ್

ವಿಂಡೀಸ್ ಆಲ್‌ರೌಂಡರ್ ಓಡಿಯನ್ ಸ್ಮಿತ್

ಕಳೆದ ಐಪಿಎಲ್‌ಗೂ ಮುನ್ನ ಭಾರತದಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಓಡಿಯನ್ ಸ್ಮಿತ್ ಐಪಿಎಲ್‌ನಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿದ್ದರು. ಪಂಜಾಬ್ ಕಿಂಗ್ಸ್ ತಂಡ ತನಗೆ ಅಗತ್ಯವಿದ್ದ ಸಮತೋಲನವನ್ನು ಕಂಡುಕೊಳ್ಳುವ ದೃಷ್ಟಿಯಿಂದ 6 ಕೋಟಿ ಮೊತ್ತಕ್ಕೆ ಈ ಆಟಗಾರನನ್ನು ತನ್ನ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಆದರೆ ಐಪಿಎಲ್‌ನಲ್ಲಿ 25ರ ಹರೆಯದ ಈ ಯುವ ಆಟಗಾರ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲವಾದರು. ಇದರ ಪರಿಣಾಮವಾಗಿ ಪಂಜಾಬ್ ಕಿಂಗ್ಸ್ ತಂಡದ ಆಡುವ ಬಳಗದಿಂದಲೂ ಓಡಿಯನ್ ಸ್ಮಿತ್ ಹೊರಬೀಳುವಂತಾಯಿತು. ಆದರೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದಾರೆ ಈ ಯುವ ಆಲ್‌ರೌಂಡರ್. ಅದರಲ್ಲೂ ಸ್ಟಾರ್ ಆಲ್‌ರೌಂಡರ್ ಆಂಡ್ರೆ ರಸೆಲ್ ಈ ಬಾರಿಯ ವಿಶ್ವಕಪ್‌ಗೆ ಆಯ್ಕೆಯಾಗದಿರುವ ಕಾರಣ ವೆಸ್ಟ್ ಇಂಡೀಸ್ ಪರವಾಗಿ ಓಡಿಯನ್ ಸ್ಮಿತ್ ಮಹತ್ವದ ಪಾತ್ರವಹಿಸುವ ಅಗತ್ಯವಿದೆ. ಇದನ್ನು ಯಾವ ರೀತಿಯಲ್ಲಿ ಯುವ ಆಲ್‌ರೌಮಡರ್ ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್

ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್

ಕಳೆದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆತ್ ಓವರ್‌ನಲ್ಲಿ ಪ್ರಮುಖ ಅಸ್ತ್ರವನ್ನಾಗಿ ಕ್ರಿಸ್ ಜೋರ್ಡನ್ ಮೇಲೆ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿತ್ತು. ಆದರೆ ಸಿಕ್ಕ ಸೀಮಿತ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಜೋರ್ಡನ್ ವಿಫಲವಾದರು. ಡೆತ್ ಓವರ್ ಸ್ಪೆಶಲಿಸ್ಟ್ ಎಂದು ಕರೆಸಿಕೊಂಡಿದ್ದರು ಕೂಡ ಅಂಥಾ ಪ್ರದರ್ಶನ ಬಾರದಿದ್ದ ಕಾರಣ ಕ್ರಿಸ್ ಜೋರ್ಡನ್ ನಂತರ ಬೆಂಚ್ ಕಾಯುವಂತಾಯಿತು. ಆದರೆ ಇಂಗ್ಲೆಂಡ್ ತಂಡದ ಪರವಾಗಿ ಕ್ರಿಸ್ ಜೋರ್ಡನ್ ಪ್ರದರ್ಶನ ಕಳೆದ ಕೆಲ ವರ್ಷಗಳಿಂದ ಅದ್ಭುತವಾಗಿದೆ. ಆಡಿರುವ 81 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಜೋರ್ಡನ್ 90 ವಿಕೆಟ್ ಪಡೆದುಕೊಂಡಿದ್ದು 8.67ರಷ್ಟು ಪರಿಣಾಮಕಾರಿ ಎಕಾನಮಿಯನ್ನು ಹೊಂದಿದ್ದಾರೆ. ಹೀಗಾಗಿ ಮುಂಬರುವ ವಿಶ್ವಕಪ್ ತಂಡದಲ್ಲಿಯೂ ಸ್ಥಾನವನ್ನು ಸಂಪಾದಸಿರುವ ಕ್ರಿಸ್ ಜೋರ್ಡನ್ ಇಂಗ್ಲೆಂಡ್ ಪಾಲಿಗೆ ಪ್ರಮುಖ ಅಸ್ತ್ರವಾಗಿರಲಿದ್ದಾರೆ.

ಕಿವೀಸ್ ಆಲ್‌ರೌಂಡರ್ ಜಿಮ್ಮಿ ನೀಶಮ್

ಕಿವೀಸ್ ಆಲ್‌ರೌಂಡರ್ ಜಿಮ್ಮಿ ನೀಶಮ್

ನ್ಯೂಜಿಲೆಂಡ್ ತಂಡದ ಯುವ ಆಲ್‌ರೌಂಡರ್ ಜಿಮ್ಮಿ ನೀಶಮ್ ತಮ್ಮ ರಾಷ್ಟ್ರೀಯ ತಂಡದ ಪರವಾಗಿ ಕಳೆದ ಕೆಲ ವರ್ಷಗಳಿಂದ ಸತತವಾಗಿ ಉತ್ತಮ ಪ್ರದರ್ಶನ ನೀಡಿಕೊಂಡು ಬರುತ್ತಿದ್ದಾರೆ. ಆದರೆ ಐಪಿಎಲ್ ವಿಚಾರಕ್ಕೆ ಬಂದರೆ ಜಿಮ್ಮಿ ನೀಶಮ್ ಪ್ರದರ್ಶನ ನೀರಸವಾಗಿದೆ. ಹೀಗಾಗಿಯೇ ಅವರಿಗೆ ಐಪಿಎಲ್‌ನಲ್ಲಿ ಆಡಲು ಹೆಚ್ಚಿನ ಅವಕಾಶಗಳು ಕೂಡ ದೊರೆತಿಲ್ಲ. ಅದರಲ್ಲೂ ಐಪಿಎಲ್ 2022ರಲ್ಲಿ ನೀಶಮ್ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಎರಡು ಪಂದ್ಯಗಳಲ್ಲಷ್ಟೇ ಆಡಿದ್ದು ಕೇವಲ ಮೂರು ಓವರ್‌ಗಳ ಬೌಲಿಂಗ್ ಮಾತ್ರವೇ ನಡೆಸಿದ್ದಾರೆ. ಅವರಿಂದ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಇನ್ನು ಬ್ಯಾಟಿಂಗ್‌ನಲ್ಲಿ 114.81ರ ಸ್ಟ್ರೈಕ್‌ರೇಟ್‌ನಲ್ಲಿ 31 ರನ್ ಮಾತ್ರವೇ ಬಾರಿಸಿದ್ದರು. ಹಾಗಿದ್ದರೂ ನ್ಯೂಜಿಲೆಂಡ್‌ನ ವಿಶ್ವಕಪ್ ತಂಡದಲ್ಲಿ ಜಿಮ್ಮಿ ನೀಶಮ್ ಪ್ರಮುಖ ಭಾಗವಾಗಿದ್ದಾರೆ. ಕಳಪೆ ಐಪಿಎಲ್‌ನ ಹೊರತಾಗಿಯೂ ಜಿಮ್ಮಿ ನೀಶಮ್ ಅವರ ಸಾಮರ್ಥ್ಯದ ಮೇಲೆ ಕಿವೀಸ್ ನಂಬಿಕೆಯಿಟ್ಟಿದ್ದು ಆಸ್ಟ್ರೇಲಿಯಾದಲ್ಲಿ ಪ್ರಮುಖ ಪಾತ್ರವಹಿಸುವ ವಿಶ್ವಾಸ ಹೊಂದಿದೆ.

ಆಸಿಸ್ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್

ಆಸಿಸ್ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್

ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಐಪಿಎಲ್‌ಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರ. ತಂಡ ಪ್ಯಾಟ್ ಕಮ್ಮಿನ್ಸ್ ಮೇಲ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೂ ಕಳೆದ 2022ರ ಐಪಿಎಲ್ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದು 7 ವಿಕೆಟ್ ಮಾತ್ರ ಪಡೆಯಲು ಶಕ್ತವಾಗಿದ್ದರು. ಆದರೆ 10.69ರ ಎಕಾನಮಿಯಲ್ಲಿ ಎನ್ ಬಿಟ್ಟುಕೊಟ್ಟಿದ್ದು ದುಬಾರಿಯೆನಿಸಿತ್ತು. ಹೀಗಾಗಿ ಆಡುವ ಬಳಗದಿಂದ ಪ್ಯಾಟ್ ಕಮ್ಮಿನ್ಸ್ ಹೊರಗುಳಿಯಬೇಕಾದ ಸ್ಥಿತಿ ಬಂದಿತ್ತು. ಹಾಗಿದ್ದರೂ ಪ್ಯಾಟ್ ಕಮ್ಮಿನ್ಸ್ ಬ್ಯಾಟಿಂಗ್‌ನಲ್ಲಿ ಎರಡು ಸ್ಮರಣೀಯ ಪ್ರದರ್ಶನ ನೀಡಿದ್ದರು ಎಂಬುದು ಗಮನಾರ್ಹ. 7.25 ಕೊಟಿ ನೀಡಿದ್ದರೂ ಕೆಕೆಆರ್ ಪರವಾಗಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಪ್ಯಾಟ್ ಕಮ್ಮಿನ್ಸ್ ಈ ಬಾರಿಯ ಟಿ20 ವಿಶ್ವಕಪ್‌ನಲ್ಲೊ ಆಸ್ಟ್ರೇಲಿಯಾ ತಂಡದ ಪರವಾಗಿ ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆಯಿದೆ. ಅದರಲ್ಲೂ ಆಸ್ಟ್ರೇಲಿಯಾದಲ್ಲಿಯೇ ಈ ಬಾರಿಯ ವಿಶ್ವಕಪ್ ನಡೆಯುತ್ತಿದ್ದು ಪ್ಯಾಟ್ ಕಮ್ಮಿನ್ಸ್ ಪ್ರದರ್ಶನ ಸಾಕಷ್ಟು ಕುತೂಹಲ ಮೂಡಿಸಿದೆ.

Story first published: Thursday, September 22, 2022, 14:35 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X