ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆರ್‌ಸಿಬಿ ಮಾಜಿ ಆಟಗಾರ ಭಾರತದ ಟ್ರಂಪ್ ಕಾರ್ಡ್; ಸಂಜಯ್ ಬಂಗಾರ್

 T20 World Cup: This Player Will Be Indias Trump Card Says Former Cricketer Sanjay Bangar

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ನಿರ್ಣಾಯಕ ಟಿ20 ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದ್ದರಿಂದ ನಿರಾಶಾದಾಯಕ ಅಂತ್ಯವನ್ನು ಕಂಡಿತು. ಆದರೆ ಸರಣಿಯು ಪ್ರವಾಸಿ ಮತ್ತು ಆತಿಥೇಯ ತಂಡಗಳ ನಡುವೆ ನೆಕ್-ಟು-ನೆಕ್ ಪೈಪೋಟಿಗೆ ಸಾಕ್ಷಿಯಾಗಿದ್ದು, ಸರಣಿ 2-2ರಲ್ಲಿ ಸಮಬಲಗೊಂಡಿತ್ತು.

Ind vs SA ಟಿ20: ಭಾರತ ತಂಡದ ಎಲ್ಲ ಆಟಗಾರರ ರಿಪೋರ್ಟ್ ಕಾರ್ಡ್ ಇಲ್ಲಿದೆInd vs SA ಟಿ20: ಭಾರತ ತಂಡದ ಎಲ್ಲ ಆಟಗಾರರ ರಿಪೋರ್ಟ್ ಕಾರ್ಡ್ ಇಲ್ಲಿದೆ

ಮೊದಲೆರಡು ಪಂದ್ಯಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಪ್ರಬಲವಾಗಿ ಸರಣಿ ಆರಂಭಿಸಿತು. ನಂತರ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾದಿಂದ ಸ್ಮರಣೀಯ ಪುನರಾಗಮನ ಮಾಡಿತು. ಬೆಂಗಳೂರಿನಲ್ಲಿ ಅಂತಿಮ ಪಂದ್ಯವು ನಡೆಯಲು ಸಾಧ್ಯವಾಗದಿದ್ದರೂ, ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ಈ ಸರಣಿಯು ಉಭಯ ತಂಡಗಳಿಗೆ ಉತ್ತಮ ಅವಕಾಶವನ್ನು ನೀಡಿತು.

ಯುಜ್ವೇಂದ್ರ ಚಹಾಲ್ ಟ್ರಂಪ್ ಕಾರ್ಡ್

ಯುಜ್ವೇಂದ್ರ ಚಹಾಲ್ ಟ್ರಂಪ್ ಕಾರ್ಡ್

"ಅಕ್ಟೋಬರ್- ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತದ ತಂಡಕ್ಕೆ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮಲಿದ್ದಾರೆ," ಎಂದು ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ ಅಭಿಪ್ರಾಯಪಟ್ಟಿದ್ದಾರೆ.

"ಯುಜ್ವೇಂದ್ರ ಚಾಹಲ್ 74 ವಿಕೆಟ್‌ಗಳೊಂದಿಗೆ ಟಿ20 ಪಂದ್ಯಗಳಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ ಮತ್ತು ಅವರ ಇತ್ತೀಚಿನ ಪ್ರದರ್ಶನಗಳನ್ನು ಗಮನಿಸಿದರೆ ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಬಹುತೇಕ ಖಚಿತವಾಗಿದ್ದಾರೆ," ಎಂದು ಸಂಜಯ್ ಬಂಗಾರ್ ತಿಳಿಸಿದರು.

ಭಾರತ ತಂಡಕ್ಕೆ ಉತ್ತಮ ಯಶಸ್ಸನ್ನು ನೀಡುತ್ತಾರೆ

ಭಾರತ ತಂಡಕ್ಕೆ ಉತ್ತಮ ಯಶಸ್ಸನ್ನು ನೀಡುತ್ತಾರೆ

"ಯುಜ್ವೇಂದ್ರ ಚಾಹಲ್ ಕಳೆದ ವಿಶ್ವಕಪ್‌ ಅನ್ನು ಹೆಚ್ಚು ಮಿಸ್ ಮಾಡಿಕೊಂಡ ಆಟಗಾರ. ಅವರು ಆಸ್ಟ್ರೇಲಿಯಾದಲ್ಲಿ ಟ್ರಂಪ್ ಕಾರ್ಡ್ ಆಗಿ ಹೊರಹೊಮ್ಮುತ್ತಾರೆ ಮತ್ತು ಭಾರತ ತಂಡಕ್ಕೆ ಉತ್ತಮ ಯಶಸ್ಸನ್ನು ನೀಡುತ್ತಾರೆ," ಎಂದು ಸಂಜಯ್ ಬಂಗಾರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ.

"ಯಾವುದೇ ಲೆಗ್ ಸ್ಪಿನ್ನರ್ ಭಾರತಕ್ಕಾಗಿ ದೀರ್ಘಕಾಲ ಸ್ಥಿರವಾಗಿ ಆಡಿದ್ದರೆ, ಅದು ಅನಿಲ್ ಕುಂಬ್ಳೆ. ಅನಿಲ್ ಕುಂಬ್ಳೆ ನಂತರ, ಯಾವುದೇ ಮಣಿಕಟ್ಟಿನ ಸ್ಪಿನ್ನರ್ ಭಾರತಕ್ಕಾಗಿ ಅಥವಾ ದೀರ್ಘಕಾಲದವರೆಗೆ ಸ್ಥಿರವಾಗಿ ಆಡಿದ್ದಾರೆಂದರೆ ಅದು ಯುಜ್ವೇಂದ್ರ ಚಾಹಲ್," ಎಂದು ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಚಾಹಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಚಾಹಲ್

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದು, ಯುಜ್ವೇಂದ್ರ ಚಾಹಲ್ ಟಿ20 ಬೌಲರ್ ಆಗಿ ಬೆಳೆಯಲು ಸಹಾಯ ಮಾಡಿತು ಎಂದು ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ಸಹ ಆಗಿರುವ ಸಂಜಯ್ ಬಂಗಾರ್ ತಿಳಿಸಿದರು.

ಐಪಿಎಲ್ 2022ರಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಪರ್ಪಲ್ ಕ್ಯಾಪ್ ಅನ್ನು ಗೆದ್ದ ಹಿನ್ನಲೆಯಲ್ಲಿ, ಚಾಹಲ್ ಟಿ20 ಸರಣಿಗೆ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಆದಾಗ್ಯೂ, ಅವರು ನಂತರದ 2 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಉತ್ತಮವಾಗಿ ಕಮ್ ಬ್ಯಾಕ್ ಮಾಡಿದರು.

"ಖಂಡಿತವಾಗಿಯೂ ಟಿ20 ವಿಶ್ವಕಪ್‌ನಲ್ಲಿ ಯುಜ್ವೇಂದ್ರ ಚಾಹಲ್ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ನಿಮ್ಮ ಹೃದಯ ಎಷ್ಟು ದೊಡ್ಡದಾಗಿದೆ ಎಂದು ಪರೀಕ್ಷಿಸಲಾಗುತ್ತದೆ. ನೀವು ಹೊಡೆಯಲು ಕಲಿತಾಗ ಮತ್ತು ಹೊಡೆತಕ್ಕೆ ಹೆದರುವುದಿಲ್ಲ, ನಂತರ ನೀವು ಹೇಗೆ ಬೌಲ್ ಮಾಡಬೇಕೆಂದು ಕಲಿಯುತ್ತೀರಿ. ಅವನು ತನ್ನ ಸೀಮ್ ಸ್ಥಾನವನ್ನು ಸ್ವಲ್ಪ ಬದಲಾಯಿಸುತ್ತಾನೆ, ವಿಭಿನ್ನವಾಗಿ ಬೌಲ್ ಮಾಡುತ್ತಾನೆ," ಎಂದು ಸಂಜಯ್ ಬಂಗಾರ ಶ್ಲಾಘಿಸಿದರು.

T20 WorldCupಗೆ DKಮತ್ತುPantನಡುವೆ ಪೈಪೋಟಿ!Rahul Dravidಯಾರಿಗೆ ಚಾನ್ಸ್ ಕೊಡ್ತಾರೆ? *Cricket|OneIndia Kannada
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಿಂಚಿದ ಯುಜ್ವೇಂದ್ರ ಚಾಹಲ್

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮಿಂಚಿದ ಯುಜ್ವೇಂದ್ರ ಚಾಹಲ್

ವಿಭಿನ್ನ ಸವಾಲುಗಳನ್ನು ಸ್ವೀಕರಿಸುವುದು ಅವರ ಶಕ್ತಿಯಾಗಿದೆ, ಅವರು ತಮ್ಮ ಆಟಕ್ಕೆ ಉತ್ತಮ ಅಂಶವನ್ನು ತಂದಿದ್ದಾರೆ. ಅದು ಬಲಗೈ ಮತ್ತು ಎಡಗೈ ಆಟಗಾರರಿಗೆ ವಿಶಾಲವಾದ ಲೈನ್‌ನಲ್ಲಿ ಬೌಲ್ ಮಾಡುವುದು. ಆ ಕಲಿಕೆಯು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಬಂದಿದೆ ಎಂದು ಯುಜ್ವೇಂದ್ರ ಚಾಹಲ್ ಬೌಲಿಂಗ್ ಶೈಲಿಯ ಬಗ್ಗೆ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವಿವರಿಸಿದರು.

ಯುಜ್ವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಭಾರತದ ಅತ್ಯುತ್ತಮ ಸ್ಪಿನ್ನರ್ ಆಗಿ ಮೂಡಿಬಂದರು. ಎರಡನೇ ಟಿ20 ಪಂದ್ಯದಲ್ಲಿ ಅವರು 1/49 ನೀಡಿದ್ದರೂ, ಅವರು ಇತರ ಪಂದ್ಯಗಳಲ್ಲಿ ಅದ್ಭುತವಾಗಿದ್ದರು. ಅವರು 14.1ರ ಒಟ್ಟಾರೆ ಸ್ಟ್ರೈಕ್-ರೇಟ್ ಮತ್ತು 8.18 RPOನ ಎಕಾನಮಿಯನ್ನು ಹೊಂದಿದ್ದರು.

Story first published: Wednesday, June 22, 2022, 14:42 [IST]
Other articles published on Jun 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X