ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ತಾಣ, ಆರಂಭ-ಅಂತ್ಯದ ದಿನಾಂಕ ಅಧಿಕೃತ ಘೋಷಣೆ!

T20 World Cup Venue: UAE & Oman To Host T20 Cricket World Cup Confirms ICC
ಭಾರತೀಯರ ಮತ್ತೊಂದು ಕ್ರಿಕೆಟ್ ಕನಸನ್ನು ಧ್ವಂಸ ಮಾಡಿದ ಕೊರೋನ | Oneindia Kannada

ನವದೆಹಲಿ: ಭಾರತದಲ್ಲಿ ನಡೆಯಲಿದ್ದ ಪ್ರತಿಷ್ಠಿತ ಟಿ20 ವಿಶ್ವಕಪ್‌ 2021 ಟೂರ್ನಿ ಭಾರತಕ್ಕೆ ಬದಲು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿದೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಂಗಳವಾರ (ಜೂನ್ 29) ಖಾತರಿಪಡಿಸಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳಿರುವುದರಿಂದ ವಿದೇಶದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯುತ್ತಿರುವುದಾಗಿ ಐಸಿಸಿ ಹೇಳಿದೆ.

WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!

2021ರ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿರುವ ತಾಣಗಳನ್ನೂ ಐಸಿಸಿ ಹೆಸರಿಸಿದೆ. ಯುಎಇಯ ಅಬುಧಾಬಿಯಲ್ಲಿರುವ ಶೈಕ್ ಝಾಯೆದ್ ಸ್ಟೇಡಿಯಂ, ಶಾರ್ಜಾ ಸ್ಟೇಡಿಯಂ, ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ಮತ್ತು ಓಮನ್ ಕ್ರಿಕೆಟ್ ಅಕಾಡೆಮಿಯಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ.

'ಅತೀವ ಬೇಸರವಾಗುತ್ತಿದೆ'

'ಅತೀವ ಬೇಸರವಾಗುತ್ತಿದೆ'

"ಇಂಥ ಪ್ರಸ್ತುತ ಪರಿಸ್ಥಿತಿಯಲ್ಲೂ ಸುರಕ್ಷಿತವಾಗಿ ಐಸಿಸಿ ಪುರುಷರ ಟಿ20 ವಿಶ್ವಕಪ್‌ ನಡೆಸೋದು ನಮ್ಮ ಆದ್ಯತೆಯಾಗಿದೆ. ಟೂರ್ನಿಯನ್ನು ಭಾರತದಲ್ಲಿ ನಡೆಸಲಾಗುತ್ತಿಲ್ಲ ಎನ್ನಲು ಅತೀವ ಬೇಸರವಾಗುತ್ತಿದೆ. ಅಂತಾರಾಷ್ಟ್ರೀಯ ಬಹು ತಂಡಗಳ ಈ ಟೂರ್ನಿಯನ್ನು ಜೈವಿಕ ಸುರಕ್ಷಿತ ವಾತಾವರಣದಲ್ಲಿ ನಡೆಸುವ ಅಗತ್ಯತೆಯನ್ನು ಸಂದರ್ಭ ಸೃಷ್ಠಿಸಿದೆ," ಎಂದು ಐಸಿಸಿ ಹಂಗಾಮಿ ಸಿಇಒ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.

ಯಾವಾಗ ಆರಂಭ-ಅಂತ್ಯ

ಯಾವಾಗ ಆರಂಭ-ಅಂತ್ಯ

ಚುಟುಕು ಕ್ರಿಕೆಟ್ ಮಾದರಿಯ ವಿಶ್ವಕಪ್‌ ಟೂರ್ನಿಯ ಆರಂಭ ಮತ್ತು ಅಂತ್ಯದ ದಿನಾಂಕವನ್ನೂ ಐಸಿಸಿ ಅಧಿಕೃತವಾಗಿ ಹೇಳಿದೆ. ಅಕ್ಟೋಬರ್‌ 17ರಂದು ಆರಂಭಗೊಳ್ಳುವ ಟೂರ್ನಿ, ನವೆಂಬರ್ 14ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಇನ್ನುಳಿದ ಪಂದ್ಯಗಳು ಮುಗಿದ ಬಳಿಕ ಟಿ20 ವಿಶ್ವಕಪ್‌ ನಡೆಯಲಿದೆ.

ಐಪಿಎಲ್ ಯಾವಾಗ ಆರಂಭ?

ಐಪಿಎಲ್ ಯಾವಾಗ ಆರಂಭ?

ಭಾರತದಲ್ಲಿ ಅರ್ಧದಲ್ಲಿ ನಿಲ್ಲಿಸಲ್ಪಟ್ಟಿದ್ದ 2021ರ ಐಪಿಎಲ್ ಟೂರ್ನಿ ಯುಎಇಯಲ್ಲಿ ಮುಂದುವರೆಯಲಿದೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಯಲಿದೆ. ಒಟ್ಟು 29 ಪಂದ್ಯಗಳು ನಡೆದಿದ್ದು, ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್‌ 15ರ ವರೆಗೆ ನಡೆಯುವ ನಿರೀಕ್ಷೆಯಿದೆ.

Story first published: Tuesday, June 29, 2021, 18:14 [IST]
Other articles published on Jun 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X