ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ವಿಶ್ವಕಪ್ ಆಯೋಜನೆ ವಿಚಾರವಾಗಿ ಬಿಸಿಸಿಐ ಮಹತ್ವದ ಹೇಳಿಕೆ

T20 World Cup venues could be reduce from 9 to 5 but too early to look at UAE shift: BCCI

ಭಾರತದಲ್ಲಿ ಕೊರೊನಾ ವೈರಸ್ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ಆಯೋಜನೆ ಬಗ್ಗೆ ಗೊಂದಲ ಅನುಮಾನಗಳು ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಐಸಿಸಿ ಕೂಡ ವಿಶ್ವಕಪ್ ಆಯೋಜನೆಗೆ ಯುಎಇಯನ್ನು ಮೀಸಲು ಕೇಂದ್ರವಾಗಿ ಗುರುತಿಸಿದೆ. ಈ ವಿಚಾರವಾಗಿ ಬಿಸಿಸಿಐ ಮಹತ್ವದ ಹೇಳಿಕೆಯನ್ನು ನೀಡಿದೆ.

ಮುಂಬರುವ ಅಕ್ಟೋಬರ್ ಸಮಯದಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿಯೇ ಆಯೋಜನೆಯಾಗುವ ವಿಶ್ವಾಸವನ್ನು ಬಿಸಿಸಿಐ ವ್ಯಕ್ತಪಡಿಸಿದೆ. ಆದರೆ ಇದಕ್ಕಾಗಿ ಈಗಾಗಲೇ ನಿಗದಿ ಪಡಿಸಿರುವ ಒಂಬತ್ತು ತಾಣಗಳ ಬದಲಿಗೆ ಐದು ತಾಣಗಳಲ್ಲಿ ವಿಶ್ವಕಪ್ ಆಯೋಜನೆ ಮಾಡಬಹುದು ಎಂದು ಬಿಸಿಸಿಐ ಹೇಳಿದೆ.

ಐಪಿಎಲ್ 2021 : ಮೂರನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಐಪಿಎಲ್ 2021 : ಮೂರನೇ ವಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ

"ವಿಶ್ವಕಪ್‌ಗೆ ಐದು ತಿಂಗಳು ಇರುವ ಹಿನ್ನೆಲೆಯಲ್ಲಿ ನಾವು ಇನ್ನು ಕೂಡ ಸಾಕಷ್ಟು ಭರವಸೆಯನ್ನು ಹೊಂದಿದ್ದೇವೆ. ಆ ಸಮದರ್ಭದಲ್ಲಿ ಭಾರತದಲ್ಲಿ ಮಹತ್ವದ ಸಂಖ್ಯೆಯಲ್ಲಿ ಜನರು ಲಸಿಕೆಯನ್ನು ಪಡೆದುಕೊಳ್ಳಲಿದ್ದಾರೆ. ಹಾಗಾಗಿ ನಾವು ವಿಶ್ವಕಪ್ ಆಯೋಜನೆ ಮಾಡುವ ಸ್ಥಾನದಲ್ಲಿರಲಿದ್ದೇವೆ. ಆದರೆ ಈಗ ನಿಗದಿಯಾಗಿರುವಂತೆ ಒಂಬತ್ತು ತಾಣಗಳ ಬದಲಿಗೆ ಐದು ತಾಣಗಳಲ್ಲಿ ಆಯೋಜನೆ ಮಾಡುವ ಆಯ್ಕೆಯನ್ನು ಹೊಂದಿದ್ದೇವೆ" ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ವಿಶ್ವಕಪ್ ಆಯೋಜನೆಯ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಕೈಗೊಂಡಿರುವ ಬಯೋಬಬಲ್ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಐಸಿಸಿ ಅಧಿಕಾರಿಗಳ ತಂಡ ಈ ವಾರ ಭಾರತಕ್ಕೆ ಬರುವ ನಿರೀಕ್ಷೆಯಿತ್ತು. ಈ ಬಗ್ಗೆಯೂ ಬಿಸಿಸಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ. "ಈ ವಾರದ ಆರಂಭದಲ್ಲಿ ಐಸಿಸಿ ಅಧಿಕಾರುಗಳ ತಂಡ ಭಾರತಕ್ಕೆ ಆಗಮಿಸಬೇಕಾಗಿತ್ತು. ಆದರೆ ಪ್ರಯಾಣಕ್ಕೆ ನಿರ್ಬಂದವಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಅವರು ಆಗಮಿಸಲಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ

Story first published: Sunday, May 2, 2021, 7:36 [IST]
Other articles published on May 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X