ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಆತನ ನಾಯಕತ್ವದ ಗುಣ ನನಗೆ ತುಂಬಾ ಇಷ್ಟ ಎಂದ ಡರೇನ್ ಸಾಮಿ

T20 World Cup: West Indies Former Captain Darren Sammy Praises Rohit Sharma Captaincy

ವೆಸ್ಟ್ ಇಂಡೀಸ್‌ನ ಎರಡು ಬಾರಿ ಟಿ 20 ವಿಶ್ವಕಪ್ ವಿಜೇತ ನಾಯಕ ಡರೇನ್ ಸಾಮಿ ಪ್ರಸ್ತುತ ಭಾರತೀಯ ನಾಯಕ ರೋಹಿತ್ ಶರ್ಮಾರ ನಾಯಕತ್ವವನ್ನು ಪ್ರಶಂಸಿದ್ದಾರೆ. ಆತ ತಂಡ ಮೊದಲು ಅನ್ನುವ ನಾಯಕ ಎಂದು ಹೇಳಿದ್ದಾರೆ.

ಕಳೆದ ವರ್ಷ ಯುಎಇಯಲ್ಲಿ ನಡೆದ ವಿಶ್ವಕಪ್‌ನ ಮುಕ್ತಾಯದ ನಂತರ ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿದ ನಂತರ ರೋಹಿತ್ ಟಿ 20 ಪಂದ್ಯಗಳಲ್ಲಿ ಭಾರತ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. 35 ವರ್ಷ ವಯಸ್ಸಿನ ಅವರನ್ನು ನಂತರ ಟೀಮ್ ಇಂಡಿಯಾದ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಾಯಕ ಎಂದು ಹೆಸರಿಸಲಾಯಿತು.

2007 ರ ಉದ್ಘಾಟನಾ ಆವೃತ್ತಿಯ ನಂತರ ಭಾರತವು ತಮ್ಮ ಮೊದಲ ಟಿ 20 ವಿಶ್ವಕಪ್ ಗೆಲ್ಲಲು ನೋಡುತ್ತಿರುವಾಗ ರೋಹಿತ್ ಆಸ್ಟ್ರೇಲಿಯಾದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದ ಕೌಶಲ್ಯಕ್ಕಾಗಿ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾರನ್ನು ಸಾಮಿ ಶ್ಲಾಘಿಸಿದ್ದಾರೆ.

ಯುಟ್ಯೂಬ್ ಚಾನೆಲ್‌ನಲ್ಲಿ ಪತ್ರಕರ್ತ ವಿಮಲ್ ಕುಮಾರ್ ಅವರಿಗೆ ನೀಡಿದ ಸಂದರ್ಶನದಲ್ಲಿ ರೋಹಿತ್ ಶರ್ಮಾ ಬಗ್ಗೆ ವೆಸ್ಟ್ ಇಂಡೀಸ್ ಮಾಜಿ ನಾಯಕ ಡೇರನ್ ಸಾಮಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಂಡ ಮೊದಲು ಎನ್ನುವ ನಾಯಕ

ತಂಡ ಮೊದಲು ಎನ್ನುವ ನಾಯಕ

"ರೋಹಿತ್ ಶರ್ಮಾ ನಾಯಕತ್ವದ ರೀತಿಯನ್ನು ನಾನು ಪ್ರೀತಿಸುತ್ತೇನೆ. ಅದಕ್ಕಾಗಿಯೇ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ವೈಯಕ್ತಿಕ ಸಾಧನೆ ಮೊದಲಲ್ಲ, ತಂಡ ಮೊದಲು ಎನ್ನುವ ನಾಯಕ. ನೀವು ಆಟಗಾರರನ್ನು ಪ್ರೇರೇಪಿಸುವ ನಾಯಕನನ್ನು ಹೊಂದಿರುವಾಗ, ತಂಡಕ್ಕಾಗಿ ಯಾರು ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ, ತಂಡ ಮೊದಲು ಇರಬೇಕು. ರೋಹಿತ್ ಶರ್ಮಾ ನನಗೆ ಹಾಗೆ ಕಾಣಿಸುತ್ತಾನೆ." ಎಂದು ಅವರು ಹೇಳಿದ್ದಾರೆ.

'ಕಳೆದುಕೊಳ್ಳುವ ಧೈರ್ಯವಿದೆ': ಟಿ20 ವಿಶ್ವಕಪ್‌ನಿಂದ ಹೊರಗುಳಿದ ನಂತರ ಮೌನ ಮುರಿದ ಜಸ್ಪ್ರೀತ್ ಬುಮ್ರಾ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಉತ್ತಮ ಸಾಧನೆ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಉತ್ತಮ ಸಾಧನೆ

ಪೂರ್ಣ ಸಮಯದ ನಾಯಕರಾಗಿ ಅಧಿಕಾರ ವಹಿಸಿಕೊಂಡ ನಂತರ ರೋಹಿತ್ ಟಿ20 ಪಂದ್ಯದಲ್ಲಿ ನಾಯಕನಾಗಿ ಮಿಂಚಿದ್ದಾರೆ. ಅವರ ನೇತೃತ್ವದಲ್ಲಿ ಭಾರತ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ದಾಖಲಿಸಿದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2-0 ಮುನ್ನಡೆ ಸಾಧಿಸಿದೆ.

ಆದರೂ, ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು, ಸೂಪರ್ 4 ಸುತ್ತನ್ನು ದಾಟಲು ವಿಫಲರಾದರು. ಆದರೂ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಉತ್ತಮ ಗೆಲುವಿನ ಸರಾಸರಿಯನ್ನು ಹೊಂದಿದೆ.

ಆಕ್ರಮಣಕಾರಿ ವಿಧಾನಕ್ಕೆ ಸಾಮಿ ಬೆಂಬಲ

ಆಕ್ರಮಣಕಾರಿ ವಿಧಾನಕ್ಕೆ ಸಾಮಿ ಬೆಂಬಲ

ಕಳೆದ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ, ಭಾರತ ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಆಕ್ರಮಣಕಾರಿ ತಂತ್ರವನ್ನು ಅಳವಡಿಸಿಕೊಂಡಿದೆ. ರೋಹಿತ್ ಶರ್ಮಾ ನಾಯಕನಾಗಿ ಆಕ್ರಮಣಕಾರಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಕ್ರಮಣಕಾರಿ ಆಟವಾಡುವಲ್ಲಿ ರೋಹಿತ್ ಶರ್ಮಾ ಹಲವು ಬಾರಿ ಬೇಗನೆ ಔಟಾಗಿದ್ದಾರೆ.

ಟೀಮ್ ಇಂಡಿಯಾದ ಆಕ್ರಮಣಕಾರಿ ವಿಧಾನಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಆದರೆ ಡರೇನ್ ಸಾಮಿ, ರೋಹಿತ್ ಶರ್ಮಾ ಅವರಿಗೆ ಬೆಂಬಲ ವ್ಯಕ್ತಕಡಿಸಿದ್ದಾರೆ.

"ನಿಮ್ಮ ಫೋನ್‌ನಲ್ಲಿ ನೀವು ಅಪ್ಲಿಕೇಶನ್ ಅನ್ನು ಹೊಂದಿದ್ದೀರಿ ಮತ್ತು ನೀವು ಅದನ್ನು ನವೀಕರಿಸುತ್ತಿರಬೇಕು. ಅವರು ಗೆದ್ದಾಗ, ಆ (ಹಳೆಯ) ವಿಧಾನವು ಸರಿಯಾಗಿತ್ತು. ಆದರೆ ನೀವು ಬೌಂಡರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ತಂಡಗಳನ್ನು ಹೊಂದಿರುವಾಗ, ಅವರು ನಿಮಗಿಂತ ವೇಗವಾಗಿ ಸ್ಕೋರ್ ಮಾಡುವ ಸಾಧ್ಯತೆಗಳು ಯಾವಾಗಲೂ ಇರುತ್ತವೆ. ಹಳೆಯ ವಿಧಾನದಲ್ಲೇ ಇದ್ದರೆ ನೀವು ಹಿಂದೆ ಸರಿಯುತ್ತೀರಿ," ಎಂದು ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಅವರ ಆಟ ನೋಡಲು ಆಸಕ್ತನಾಗಿದ್ದೇನೆ

ವಿಶ್ವಕಪ್‌ನಲ್ಲಿ ಅವರ ಆಟ ನೋಡಲು ಆಸಕ್ತನಾಗಿದ್ದೇನೆ

"ನೀವು ಕಷ್ಟಪಟ್ಟು ಬೌಲರ್‌ಗಳನ್ನು ಬೇಗನೆ ಒತ್ತಡಕ್ಕೆ ಸಿಲುಕಿಸಲು ಪ್ರಯತ್ನಿಸಿದರೆ, ನೀವು ವಿಕೆಟ್ ಕಳೆದುಕೊಂಡರೂ ಸಹ, ನೀವು ರನ್-ರೇಟ್‌ನಲ್ಲಿ ತುಂಬಾ ಹೆಚ್ಚಿದ್ದೀರಿ, ನೀವು ಇನ್ನೂ ಒತ್ತಡ ಹಾಕಬಹುದು. ರೋಹಿತ್ ಶರ್ಮಾ ಮತ್ತು ಭಾರತ ಈಗ ಬದಲಾಗಿದೆ ಎಂದು ನಾನು ನೋಡುತ್ತೇನೆ. ಆಸ್ಟ್ರೇಲಿಯಾದಲ್ಲಿ ಈ ವರ್ಷದ ವಿಶ್ವಕಪ್‌ನಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಆಸಕ್ತನಾಗಿದ್ದೇನೆ" ಎಂದು ಹೇಳಿದ್ದಾರೆ.

ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ಭಾರತವು ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.

Story first published: Tuesday, October 4, 2022, 23:04 [IST]
Other articles published on Oct 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X