ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

T20 worldcup 2021: KL Rahul given out on a no ball in India vs Pakistan match says Netizen

ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯ ಇಂದು ( ಅಕ್ಟೋಬರ್ 24 ) ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಫೀಲ್ಡಿಂಗ್ ಆಯ್ದುಕೊಳ್ಳುವ ಮೂಲಕ ಟೀಮ್ ಇಂಡಿಯಾಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು.

ಹೀಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಪರ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಕಣಕ್ಕಿಳಿದರು. ಆದರೆ, ಟೀಮ್ ಇಂಡಿಯಾ ಆರಂಭದಲ್ಲಿಯೇ ಆರಂಭಿಕ ಆಟಗಾರರ ವಿಕೆಟ್‍ಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇಬ್ಬರೂ ಸಹ ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಅಫ್ರಿದಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಭಾರತ vs ಪಾಕ್: ಸಂಕಷ್ಟದಲ್ಲಿದ್ದ ಭಾರತಕ್ಕೆ ಕೊಹ್ಲಿ ಆಸರೆ; ಅರ್ಧಶತಕದ ಜೊತೆ ಹಲವಾರು ದಾಖಲೆ ಸೃಷ್ಟಿಭಾರತ vs ಪಾಕ್: ಸಂಕಷ್ಟದಲ್ಲಿದ್ದ ಭಾರತಕ್ಕೆ ಕೊಹ್ಲಿ ಆಸರೆ; ಅರ್ಧಶತಕದ ಜೊತೆ ಹಲವಾರು ದಾಖಲೆ ಸೃಷ್ಟಿ

ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮೊದಲನೇ ಓವರ್‌ನಲ್ಲಿಯೇ ಶಾಹೀನ್ ಅಫ್ರಿದಿಗೆ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು. ಹೀಗೆ ರೋಹಿತ್ ಶರ್ಮಾ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರೆ, ತಂಡದ ಮತ್ತೋರ್ವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದರು. ಹೀಗೆ ಕೆಎಲ್ ರಾಹುಲ್ ಕೂಡ ಉತ್ತಮ ಆಟವನ್ನು ಆಡುವಲ್ಲಿ ಎಡವಿ 3 ರನ್ ಗಳಿಸಿ ನಿರಾಸೆ ಮೂಡಿಸಿದರು.

ಭಾರತ vs ಪಾಕ್: ಟಾಸ್ ಬೆನ್ನಲ್ಲೇ ನಿರಾಸೆ ಮೂಡಿಸಿದ ಹಾರ್ದಿಕ್ ಹೇಳಿಕೆ; ಭಾರತಕ್ಕಿದು ದೊಡ್ಡ ಹಿನ್ನಡೆ!ಭಾರತ vs ಪಾಕ್: ಟಾಸ್ ಬೆನ್ನಲ್ಲೇ ನಿರಾಸೆ ಮೂಡಿಸಿದ ಹಾರ್ದಿಕ್ ಹೇಳಿಕೆ; ಭಾರತಕ್ಕಿದು ದೊಡ್ಡ ಹಿನ್ನಡೆ!

ಆದರೆ, ಕೆಎಲ್ ರಾಹುಲ್ ಔಟ್ ಆಗುತ್ತಾ ಇದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ನೆಟ್ಟಿಗರು ಕೆಎಲ್ ರಾಹುಲ್ ಔಟ್ ಆದ ಎಸೆತ ನೋಬಾಲ್ ಎಂದು ವಾದಕ್ಕಿಳಿದಿದ್ದಾರೆ. ಆ ಎಸೆತವನ್ನು ಎಸೆದ ಶಾಹೀನ್ ಅಫ್ರಿದಿ ತಮ್ಮ ಕಾಲನ್ನು ಸಂಪೂರ್ಣವಾಗಿ ಕ್ರೀಸ್‌ನಿಂದ ಹೊರಹಾಕಿದ್ದರು, ಆದರೂ ಸಹ ಅದನ್ನು ತೀರ್ಪುಗಾರರು ಗಮನಿಸದೇ ಔಟ್ ಕೊಟ್ಟಿದ್ದು ಸರಿಯಲ್ಲ ಎಂದು ಟ್ವಿಟ್ಟರ್ ಮೂಲಕ ವಾದ ಶುರು ಮಾಡಿದ್ದಾರೆ.

Hardik Pandya ಅವರಿಗೆ ನಿನ್ನೆ ಪಂದ್ಯದಲ್ಲಿ ಗಾಯ | Oneindia Kannada

ಈ ರೀತಿಯ ಆರೋಪಗಳನ್ನು ಮಾಡುತ್ತಿರುವ ನೆಟ್ಟಿಗರು ಶಾಹೀನ್ ಅಫ್ರಿದಿ ಎಸೆದಿರುವ ನೋಬಾಲ್ ಚಿತ್ರಗಳನ್ನು ಕೂಡ ಸಾಕ್ಷಿ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವಿವಾದವನ್ನು ಸೃಷ್ಟಿಸುತ್ತಿದ್ದು ಈ ವಿಚಾರ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆಯೋ ಕಾದು ನೋಡಬೇಕಿದೆ.

ಪಂದ್ಯ ಸೋತ ಟೀಂ ಇಂಡಿಯಾ

ಪಂದ್ಯ ಸೋತ ಟೀಂ ಇಂಡಿಯಾ

ಇನ್ನು ಕೆಎಲ್ ರಾಹುಲ್ ವಿಕೆಟ್ ವಿಚಾರವಾಗಿ ಗೊಂದಲಕ್ಕೆ ಕಾರಣವಾಗಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಭರ್ಜರಿ ಗೆಲುವನ್ನು ದಾಖಲಿಸುವುದರ ಮೂಲಕ ತನ್ನ ಹಣೆಗೆ ಅಂಟಿಕೊಂಡಿದ್ದ ಸೋಲಿನ ಸರಪಳಿಯ ಕಳಂಕವನ್ನು ಕಿತ್ತುಹಾಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 151 ರನ್ ಗಳಿಸಿ ಎದುರಾಳಿ ಪಾಕಿಸ್ತಾನ ತಂಡಕ್ಕೆ 152 ರನ್‌ಗಳ ಗುರಿಯನ್ನು ನೀಡಿತು. ಭಾರತ ತಂಡ ನೀಡಿದ 152 ರನ್‌ಗಳ ಗುರಿಯನ್ನು ಪಾಕಿಸ್ತಾನ ಯಾವುದೇ ವಿಕೆಟ್ ಕಳೆದುಕೊಳ್ಳದೇ ಯಶಸ್ವಿಯಾಗಿ ಬೆನ್ನಟ್ಟಿತು. ನಾಯಕ ಬಾಬರ್ ಅಜಮ್ ಅಜೇಯ 68 ರನ್ ಗಳಿಸಿದರೆ, ಮಹಮ್ಮದ್ ರಿಜ್ವಾನ್ ಅಜೇಯ 79 ರನ್ ಗಳಿಸಿದರು. ಹೀಗೆ ಪಾಕಿಸ್ತಾನ 17.5 ಓವರ್‌ಗಳಲ್ಲಿ 152 ರನ್ ಕಲೆಹಾಕಿ ಭಾರತದ ವಿರುದ್ಧ 10 ವಿಕೆಟ್‍ಗಳ ಗೆಲುವನ್ನು ಸಾಧಿಸುವುದರ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿತು.

ಪಂದ್ಯ ಸೋತರೂ ದಾಖಲೆ ಬರೆದ ವಿರಾಟ್ ಕೊಹ್ಲಿ

ಪಂದ್ಯ ಸೋತರೂ ದಾಖಲೆ ಬರೆದ ವಿರಾಟ್ ಕೊಹ್ಲಿ

ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ಸಹ ಮಾಡಿದ್ದಾರೆ. ಈ ಹಿಂದೆ ಈ ದಾಖಲೆಯನ್ನು 9 ಅರ್ಧಶತಕಗಳನ್ನು ಬಾರಿಸಿದ್ದ ಕ್ರಿಸ್ ಗೇಲ್ ಜೊತೆ ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್‌ನ ತಮ್ಮ ಹತ್ತನೇ ಅರ್ಧಶತಕವನ್ನು ಬಾರಿಸುವುದರ ಮೂಲಕ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಸೋಲಿಗೆ ವಿರಾಟ್ ಕೊಹ್ಲಿ ಕೊಟ್ಟ ಕಾರಣವಿದು

ಸೋಲಿಗೆ ವಿರಾಟ್ ಕೊಹ್ಲಿ ಕೊಟ್ಟ ಕಾರಣವಿದು

ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಾವು ಮಾಡಿದೆವು, ಆದರೆ ನಮ್ಮ ತಂಡ ಆರಂಭದಲ್ಲಿಯೇ ವೇಗವಾಗಿ 3 ವಿಕೆಟ್ ಕಳೆದುಕೊಂಡದ್ದು ಮತ್ತು 15ರಿಂದ 20 ರನ್ ಕಡಿಮೆಯಾದದ್ದು ಪಂದ್ಯದ ಮೇಲೆ ದೊಡ್ಡ ಹೊಡೆತವನ್ನು ನೀಡಿತು. ಅಷ್ಟೇ ಅಲ್ಲದೆ ಬೌಲಿಂಗ್ ಸಮಯದಲ್ಲಿ ಇಬ್ಬನಿ ಇದ್ದ ಕಾರಣ ನಾವೆಂದುಕೊಂಡ ರೀತಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಎದುರಾಳಿ ತಂಡ ನಮ್ಮ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡಿತು ಎಂಬುದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ನಾಚಿಕೆ ಇಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದರು.

Story first published: Monday, October 25, 2021, 16:15 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X