ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ರೋಚಕ ಪಂದ್ಯದಲ್ಲಿ ಹರಿಣಗಳಿಗೆ ಸೋಲುಣಿಸಿದ ಆಸ್ಟ್ರೇಲಿಯಾ

T20 worldcup 2021, Match 13: Australia Won against South Africa by 5 wickets

ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೊದಲನೇ ಪಂದ್ಯದಲ್ಲಿ ಇಂದು ( ಅಕ್ಟೋಬರ್ 23 ) ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಸೆಣಸಾಟ ನಡೆಸಿದವು. ಅಬುಧಾಬಿಯ ಶೈಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‍ಗಳ ಗೆಲುವನ್ನು ಸಾಧಿಸುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದ ಮೊದಲನೇ ತಂಡವೆನಿಸಿಕೊಂಡಿದೆ.

ಟಿ20 ವಿಶ್ವಕಪ್: ಅರ್ಹತಾ ಸುತ್ತಿನ ಮುಕ್ತಾಯದ ನಂತರ ಪಾಕ್ ಸೇಫ್, ಈ ಬಲಿಷ್ಠ ತಂಡಗಳಿಗೆ ಹೆಚ್ಚಾಯ್ತು ಕಷ್ಟ!ಟಿ20 ವಿಶ್ವಕಪ್: ಅರ್ಹತಾ ಸುತ್ತಿನ ಮುಕ್ತಾಯದ ನಂತರ ಪಾಕ್ ಸೇಫ್, ಈ ಬಲಿಷ್ಠ ತಂಡಗಳಿಗೆ ಹೆಚ್ಚಾಯ್ತು ಕಷ್ಟ!

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಆ್ಯರೋನ್ ಫಿಂಚ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಸೌತ್ ಆಫ್ರಿಕಾ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿದರು. ಆ್ಯರೊನ್ ಫಿಂಚ್ ಲೆಕ್ಕಾಚಾರದಂತೆಯೇ ಸೌತ್ ಆಫ್ರಿಕಾ ತಂಡ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲವಾಯಿತು. 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಕಲೆಹಾಕಿದ ಸೌತ್ ಆಫ್ರಿಕಾ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 119 ರನ್‌ಗಳ ಸುಲಭ ಗುರಿಯನ್ನು ನೀಡಿತು.

ಕೊಹ್ಲಿ ನಾಯಕತ್ವದ ಆರ್‌ಸಿಬಿ ಪರ ಆಡಿದ್ದ ಈತ ಇಂದು ಕ್ರಿಕೆಟ್ ಶಿಶು ನಮೀಬಿಯಾವನ್ನು ಸೂಪರ್12ಗೆ ಕರೆತಂದ!ಕೊಹ್ಲಿ ನಾಯಕತ್ವದ ಆರ್‌ಸಿಬಿ ಪರ ಆಡಿದ್ದ ಈತ ಇಂದು ಕ್ರಿಕೆಟ್ ಶಿಶು ನಮೀಬಿಯಾವನ್ನು ಸೂಪರ್12ಗೆ ಕರೆತಂದ!

ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ 5 ವಿಕೆಟ್‍ಗಳ ಜಯವನ್ನು ಸಾಧಿಸಿದೆ. ಅಂತಿಮ ಓವರ್‌ನಲ್ಲಿ 3 ಎಸೆತಗಳಿಗೆ 2 ರನ್ ಬೇಕಿದ್ದಾಗ ಆಸ್ಟ್ರೇಲಿಯಾ ತಂಡದ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್ ವಿವರ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ಪರ ಟೆಂಬಾ ಬವುಮಾ 12, ಕ್ವಿಂಟನ್ ಡಿ ಕಾಕ್ 7, ವಾನ್ ಡರ್ ಡುಸೆನ್ 2, ಏಡನ್ ಮಾರ್ಕ್ರಮ್ 40, ಹೆನ್ರಿಚ್ ಕ್ಲಸೇನ್ 13, ಡೇವಿಡ್ ಮಿಲ್ಲರ್ 16, ಡ್ವೈನ್ ಪ್ರಿಟೋರಿಯಸ್ 1, ಕೇಶವ್ ಮಹಾರಾಜ್ 0, ಕಗಿಸೋ ರಬಾಡ ಅಜೇಯ 19, ಆನ್ರಿಕ್ ನೋರ್ಕಿಯಾ 2 ಮತ್ತು ತಬ್ರೇಜ್ ಸಂಶಿ ಅಜೇಯ 0 ರನ್ ಗಳಿಸಿದರು. ಈ ಮೂಲಕ ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು.

ಆಸ್ಟ್ರೇಲಿಯಾ ಪರ ಆ್ಯಡಮ್ ಜಂಪಾ 2 ವಿಕೆಟ್, ಜೋಶ್ ಹೇಜಲ್ ವುಡ್ 2 ವಿಕೆಟ್, ಮಿಚೆಲ್ ಸ್ಟಾರ್ಕ್ 2 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಮತ್ತು ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದರು.

ಕೊಹ್ಲಿ ತನ್ನನ್ನು ಮಾತ್ರ ನೋಡಿಕೊಂಡರೆ ಆಗದು; ಧೋನಿ ಮೇಲೆ ಭಾರ ಹಾಕುವುದು ಸರಿಯಲ್ಲ: ಗವಾಸ್ಕರ್ಕೊಹ್ಲಿ ತನ್ನನ್ನು ಮಾತ್ರ ನೋಡಿಕೊಂಡರೆ ಆಗದು; ಧೋನಿ ಮೇಲೆ ಭಾರ ಹಾಕುವುದು ಸರಿಯಲ್ಲ: ಗವಾಸ್ಕರ್

ಹೀಗೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಸೌತ್ ಆಫ್ರಿಕಾ ತಂಡ ನೀಡಿದ 119 ರನ್‌ಗಳ ಸುಲಭ ಗುರಿಯನ್ನು ನಿಧಾನಗತಿಯಲ್ಲಿ ಬೆನ್ನಟ್ಟಿತು. ಆಸ್ಟ್ರೇಲಿಯಾ ತಂಡದ ಪರ ತಂಡದ ನಾಯಕ ಆ್ಯರೋನ್ ಫಿಂಚ್ 0 ರನ್ ಗಳಿಸಿ ನಿರಾಸೆ ಮೂಡಿಸಿದರು. ಇನ್ನುಳಿದಂತೆ ಡೇವಿಡ್ ವಾರ್ನರ್ 14, ಮಿಚೆಲ್ ಮಾರ್ಷ್ 11, ಸ್ಟೀವನ್ ಸ್ಮಿತ್ 35, ಗ್ಲೆನ್ ಮ್ಯಾಕ್ಸ್‌ವೆಲ್ 18, ಮಾರ್ಕಸ್ ಸ್ಟೊಯ್ನಿಸ್ ಅಜೇಯ 24 ಮತ್ತು ಮ್ಯಾಥ್ಯೂ ವೇಡ್ ಅಜೇಯ 15 ರನ್ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ 5 ವಿಕೆಟ್‍ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡಿದ ಜೋಶ್ ಹೇಜಲ್ ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Story first published: Saturday, October 23, 2021, 20:19 [IST]
Other articles published on Oct 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X