ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೇಶಕ್ಕಾಗಿ ಆಡಿದ್ದೇನೆ ಸ್ವಲ್ಪವಾದರೂ ಗೌರವ ಕೊಡಿ; ಹಿರಿಯ ಕ್ರಿಕೆಟಿಗರಿಂದ ಆದ ಅವಮಾನ ಬಿಚ್ಚಿಟ್ಟ ತಾಹಿರ್

T20 worldcup: I have played for the country so i need some respect says Imran Tahir

ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಹೆಚ್ಚಾಗಿ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಇದೇ ತಿಂಗಳ 19ರಿಂದ ಯುಎಇಯಲ್ಲಿ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸುದ್ದಿ. ಇದರ ಜತೆಗೆ ಸದ್ಯ ಅತಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಕ್ರಿಕೆಟ್ ವಿಷಯವೆಂದರೆ ಅದು ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ.

ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ನಂತರ ಯು ಎ ಇ ಯಲ್ಲಿ ಅಕ್ಟೋಬರ್ 17 ರಿಂದ ನವೆಂಬರ್‌ 14ರವರೆಗೆ ನಡೆಯಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು ಇತ್ತೀಚೆಗಷ್ಟೇ ಟೂರ್ನಿಯಲ್ಲಿ ಭಾಗವಹಿಸಲಿರುವ ವಿವಿಧ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿದ ನಂತರ ಈ ಟೂರ್ನಿಯ ಕುರಿತಾಗಿ ನಡೆಯುತ್ತಿದ್ದ ಚರ್ಚೆಗಳು ಮತ್ತಷ್ಟು ಹೆಚ್ಚಾದವು. ಹೀಗೆ ವಿವಿಧ ದೇಶಗಳು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತಮ್ಮ ತಂಡಗಳನ್ನು ಪ್ರಕಟಿಸಿದ ನಂತರ ಹಲವಾರು ಮಾಜಿ ಕ್ರಿಕೆಟಿಗರು ಪ್ರತಿಕ್ರಿಯೆಗಳನ್ನು ನೀಡಿದ್ದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!ಮ್ಯಾಂಚೆಸ್ಟರ್ ಟೆಸ್ಟ್ ರದ್ದಾದ ಕೋಪವನ್ನು ಐಪಿಎಲ್ ಮೇಲೆ ಹಾಕಿದ ಸ್ಟಾರ್ ಆಟಗಾರ!

ಇದೀಗ ದಕ್ಷಿಣ ಆಫ್ರಿಕಾ ತಂಡದ ಖ್ಯಾತ ಬೌಲರ್ ಇಮ್ರಾನ್ ತಾಹಿರ್ ಕೂಡ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಕುರಿತಾಗಿ ಮಾತನಾಡಿದ್ದು ತಮ್ಮದೇ ಆದ ದಕ್ಷಿಣ ಆಫ್ರಿಕಾ ತಂಡದ ಹಿರಿಯ ಆಟಗಾರರಿಂದ ತಮಗಾದ ಅವಮಾನವನ್ನು ಹೊರಹಾಕುವುದರ ಮೂಲಕ ಕಿಡಿಕಾರಿದ್ದಾರೆ. ಹೌದು ಎಲ್ಲಾ ದೇಶಗಳಂತೆ ದಕ್ಷಿಣ ಆಫ್ರಿಕಾ ಕೂಡ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತನ್ನ ತಂಡವನ್ನು ಪ್ರಕಟ ಮಾಡಿದೆ. ಹೀಗೆ ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ತಂಡವನ್ನು ಘೋಷಣೆ ಮಾಡಿದ ನಂತರ ಆಟಗಾರರ ಆಯ್ಕೆಯ ಕುರಿತಾಗಿ ಮಾತನಾಡಿರುವ ಇಮ್ರಾನ್ ತಾಹಿರ್ ಈ ಕೆಳಕಂಡಂತೆ ಕಿಡಿಕಾರುವ ಮೂಲಕ ಆಯ್ಕೆಗಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿಮಗೂ, ಎಬಿಡಿಗೂ ಅವಕಾಶ ನೀಡುತ್ತೇವೆ ಎಂದಿದ್ದ ಗ್ರೇಮ್ ಸ್ಮಿತ್

ನಿಮಗೂ, ಎಬಿಡಿಗೂ ಅವಕಾಶ ನೀಡುತ್ತೇವೆ ಎಂದಿದ್ದ ಗ್ರೇಮ್ ಸ್ಮಿತ್

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳದೇ ಇರುವ ಇಮ್ರಾನ್ ತಾಹಿರ್ ಈ ಹಿಂದೆ ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಗ್ರೇಮ್ ಸ್ಮಿತ್ ತಮಗೆ ನೀಡಿದ್ದ ಆಶ್ವಾಸನೆಯೊಂದನ್ನು ನೆನಪಿಸಿಕೊಂಡಿದ್ದಾರೆ. 'ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಿಮಗೆ ಆಡುವ ಅವಕಾಶ ಸಿಕ್ಕೇ ಸಿಗುತ್ತದೆ, ಎಬಿ ಡಿವಿಲಿಯರ್ಸ್ ಮತ್ತು ಫಾಫ್ ಡು ಪ್ಲೆಸಿಸ್ ಜೊತೆ ಕೂಡ ಮಾತುಕತೆ ನಡೆಸಿ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಿದ್ದೇವೆ' ಎಂದು ಗ್ರೇಮ್ ಸ್ಮಿತ್ ಇಮ್ರಾನ್ ತಾಹೀರ್ ಅವರಿಗೆ ಆಶ್ವಾಸನೆಯನ್ನು ನೀಡಿದ್ದರಂತೆ.

ತಂಡದಲ್ಲಿ ಸ್ಥಾನ ನೀಡದೇ ಇರುವುದಕ್ಕಿಂತ ಮರ್ಯಾದೆ ನೀಡದೇ ಕಡೆಗಣಿಸಿದ್ದು ಹೆಚ್ಚಿನ ಬೇಸರ ತಂದಿದೆ

ತಂಡದಲ್ಲಿ ಸ್ಥಾನ ನೀಡದೇ ಇರುವುದಕ್ಕಿಂತ ಮರ್ಯಾದೆ ನೀಡದೇ ಕಡೆಗಣಿಸಿದ್ದು ಹೆಚ್ಚಿನ ಬೇಸರ ತಂದಿದೆ

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾದ ನಂತರ ತಂಡದಲ್ಲಿ ಸ್ಥಾನ ಪಡೆದುಕೊಳ್ಳದೇ ಹೊರಬಿದ್ದು ಮನನೊಂದಿರುವ ಇಮ್ರಾನ್ ತಾಹಿರ್ 'ನನ್ನನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಿಲ್ಲ ಎನ್ನುವುದರ ಕುರಿತು ನನಗೆ ಬೇಸರವಾಗುತ್ತಿಲ್ಲ, ಬದಲಾಗಿ ನನ್ನ ಕರೆ ಮತ್ತು ಸಂದೇಶಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಿರುವುದು ತುಂಬಾ ಬೇಸರ ತಂದಿದೆ. ಈ ಹಿಂದೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ನೀಡುತ್ತೇವೆ ಎಂದು ಹೇಳಿದ್ದ ಗ್ರೇಮ್ ಸ್ಮಿತ್ ನಾನು ಕಳುಹಿಸಿದ ಹಲವಾರು ಮೊಬೈಲ್ ಸಂದೇಶಗಳಿಗೆ ಉತ್ತರವನ್ನು ನೀಡಿಲ್ಲ ಹಾಗೂ ಕೋಚ್ ಆಗಿ ಆಯ್ಕೆಯಾದ ಮಾರ್ಕ್ ಬೌಷರ್ ಕೂಡ ನನ್ನ ಕರೆಯನ್ನು ಸ್ವೀಕರಿಸದೇ ಕಡೆಗಣಿಸಿದರು. ದೇಶಕ್ಕಾಗಿ ನಾನು ಹತ್ತು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ, ಅದಕ್ಕಾದರೂ ನನಗೆ ನೀಡಬೇಕಾದ ಗೌರವವನ್ನು ನೀಡಿ' ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.

ಅಮೆರಿಕ ಧ್ವಜ ಬಳಸಿ ಬೀಳುತ್ತಿದ್ದ ಬೆಕ್ಕನ್ನ ರಕ್ಷಿಸಿದ ಫುಟ್ಬಾಲ್ ವೀಕ್ಷಕರು ! | Oneindia Kannada
ತಾಹಿರ್ ಇಲ್ಲದ ದಕ್ಷಿಣ ಆಫ್ರಿಕಾ ತಂಡ ಹೀಗಿದೆ

ತಾಹಿರ್ ಇಲ್ಲದ ದಕ್ಷಿಣ ಆಫ್ರಿಕಾ ತಂಡ ಹೀಗಿದೆ


ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಇತ್ತೀಚೆಗಷ್ಟೇ ಪ್ರಕಟವಾದ ದಕ್ಷಿಣ ಆಫ್ರಿಕಾದ ತಂಡದಲ್ಲಿ ಹಿರಿಯ ಬೌಲರ್ ಆಗಿರುವ ಇಮ್ರಾನ್ ತಾಹಿರ್‌ಗೆ ಅವಕಾಶವನ್ನು ನೀಡದೇ ಕಡೆಗಣಿಸಲಾಗಿದ್ದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟವಾಗಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದುಕೊಂಡ ಆಟಗಾರರ ಪಟ್ಟಿ ಹೀಗಿದೆ: ತೆಂಬಾ ಬಾವುಮಾ (ನಾಯಕ), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜಾರ್ನ್ ಫೋರ್ಟುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಡಬ್ಲ್ಯೂ ಮುಲ್ಡರ್, ಲುಂಗಿ ನ್ಗಿಡಿ, ಅನ್ರಿಚ್ ನಾರ್ಟ್ಜೆ, ದ್ವಾಯಿನ್ ಪ್ರಿಟೋರಿಯಸ್, ಕಗಿಸೊ ರಬಾಡಿ ಟಾಬ್ ವ್ಯಾನ್ ಡೆರ್ ಡುಸೆನ್

Story first published: Monday, September 13, 2021, 19:27 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X