ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಮೆಂಟರ್ ಆಗಲು ಹೊರಟಿದ್ದ ಧೋನಿ ವಿರುದ್ಧ ದೂರು!; ಧೋನಿ ಮೆಂಟರ್ ಆಗುವುದು ಅನುಮಾನ

T20 worldcup: MS Dhoni facing a big problem to become mentor of Team India

ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿದೆ. ಬರೋಬ್ಬರಿ 5 ವರ್ಷಗಳ ಬಳಿಕ ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಅದರಲ್ಲಿಯೂ ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಮೇಲೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ತುಸು ಹೆಚ್ಚೇ ಭರವಸೆ ಇದೆ ಎಂದು ಹೇಳಿದರೆ ತಪ್ಪಾಗಲಾರದು.

ಈ ತಂಡ ಇಟ್ಟುಕೊಂಡು ಟಿ20 ವಿಶ್ವಕಪ್‌ ಗೆಲ್ಲುತ್ತಾ ಇಂಗ್ಲೆಂಡ್?; 3 ಬಲಿಷ್ಠ ಆಟಗಾರರಿಗೆ ಇಲ್ಲ ಸ್ಥಾನ!ಈ ತಂಡ ಇಟ್ಟುಕೊಂಡು ಟಿ20 ವಿಶ್ವಕಪ್‌ ಗೆಲ್ಲುತ್ತಾ ಇಂಗ್ಲೆಂಡ್?; 3 ಬಲಿಷ್ಠ ಆಟಗಾರರಿಗೆ ಇಲ್ಲ ಸ್ಥಾನ!

ಇನ್ನು ಟೀಮ್ ಇಂಡಿಯಾ ಸದ್ಯ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದೆ. ಈ ಸರಣಿಯ ಕೊನೆಯ ಪಂದ್ಯ ಶುಕ್ರವಾರ ( ಸೆಪ್ಟೆಂಬರ್ 10 ) ಆರಂಭವಾಗಲಿದ್ದು ಇದಕ್ಕೂ ಮುನ್ನ ಬಿಸಿಸಿಐ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಣೆ ಮಾಡಿದೆ. ಹೌದು, ಸೆಪ್ಟೆಂಬರ್ 8ರ ಬುಧವಾರದಂದು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಘೋಷಣೆ ಮಾಡಿದ್ದು, ಇದರ ಜತೆಗೆ ತಂಡದ ಮಾರ್ಗದರ್ಶಕರಾಗಿ ಧೋನಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಣೆ ಮಾಡುವುದರ ಮೂಲಕ ಬಿಸಿಸಿಐ ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಶ್ಚರ್ಯವನ್ನು ಉಂಟು ಮಾಡಿತ್ತು.

ಐಪಿಎಲ್ 2022ಕ್ಕೆ ಹೊಸ ತಂಡಗಳು: ಈ 6 ನಗರಗಳನ್ನು ಪಟ್ಟಿ ಮಾಡಿದ ಬಿಸಿಸಿಐಐಪಿಎಲ್ 2022ಕ್ಕೆ ಹೊಸ ತಂಡಗಳು: ಈ 6 ನಗರಗಳನ್ನು ಪಟ್ಟಿ ಮಾಡಿದ ಬಿಸಿಸಿಐ

ಹೌದು, ಬಿಸಿಸಿಐ ಕಾರ್ಯದರ್ಶಿಯಾದ ಜಯ್ ಶಾ ಇತ್ತೀಚಿಗಷ್ಟೆ ದುಬೈಗೆ ತೆರಳಿ ಎಂಎಸ್ ಧೋನಿ ಅವರನ್ನು ಭೇಟಿ ಮಾಡಿ ಮುಂಬರಲಿರುವ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ನೀವು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತೀರಾ ಎಂದು ಮನವಿಯನ್ನು ಮಾಡಿಕೊಂಡಿದ್ದರು. ಜಯ್ ಶಾ ಮನವಿಗೆ ಸ್ಪಂದಿಸಿದ ಎಂಎಸ್ ಧೋನಿ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಇನ್ನು ಈ ವಿಷಯ ತಿಳಿದ ಎಂಎಸ್ ಧೋನಿ ಅಭಿಮಾನಿಗಳು ದೊಡ್ಡ ಮಟ್ಟದ ಸಂಭ್ರಮವನ್ನು ಪಟ್ಟರು, ಮತ್ತೆ ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಟೀಮ್ ಇಂಡಿಯಾದಲ್ಲಿ ನೋಡುವ ಅವಕಾಶ ಸನಿಹ ಬರುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆಯನ್ನು ಮಾಡಿದ್ದರು. ಆದರೆ ಇದೀಗ ಈ ಎಲ್ಲಾ ಖುಷಿಗಳಿಗೆ ತಣ್ಣೀರೆರಚುವ ಸುದ್ದಿಯೊಂದು ಹೊರಬಿದ್ದಿದ್ದು ಟೀಮ್ ಇಂಡಿಯಾ ಮೆಂಟರ್ ಆಗಲು ತಯಾರಾಗಿದ್ದ ಎಂಎಸ್ ಧೋನಿ ವಿರುದ್ಧ ದೂರೊಂದು ದಾಖಲಾಗಿದ್ದು ಅದರ ವಿವರ ಮುಂದೆ ಇದೆ ಓದಿ..

ಧೋನಿ ವಿರುದ್ಧ ದೂರು ನೀಡಿದ ಹಿತಾಸಕ್ತಿ ಸಂಘರ್ಷ

ಧೋನಿ ವಿರುದ್ಧ ದೂರು ನೀಡಿದ ಹಿತಾಸಕ್ತಿ ಸಂಘರ್ಷ

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರೆಂದು ಘೋಷಣೆ ಮಾಡಿರುವ ಬಿಸಿಸಿಐ ವಿರುದ್ಧ ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ಗೆ ಹಿತಾಸಕ್ತಿ ಸಂಘರ್ಷ ದೂರು ನೀಡಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಸದಸ್ಯ ಸಂಜೀವ್ ಗುಪ್ತಾ ಅಪೆಕ್ಸ್ ಕೌನ್ಸಿಲ್ ಸದಸ್ಯರಿಗೆ ಪತ್ರವನ್ನು ಬರೆದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಎಂಎಸ್ ಧೋನಿ ಭಾರತ ತಂಡದ ಮಾರ್ಗದರ್ಶಕನಾಗಿ ಕೆಲಸ ನಿರ್ವಹಿಸುವುದು ನಿಯಮದ ಪ್ರಕಾರ ತಪ್ಪು ಎಂದು ಬಿಸಿಸಿಐ ಕೈಗೊಳ್ಳಲು ಮುಂದಾಗಿರುವ ತೀರ್ಮಾನದ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

ಧೋನಿ ವಿರುದ್ಧದ ದೂರಿಗೆ ಕಾರಣವಿದು

ಧೋನಿ ವಿರುದ್ಧದ ದೂರಿಗೆ ಕಾರಣವಿದು

ಒಬ್ಬ ಕ್ರಿಕೆಟಿಗ ಏಕಕಾಲಕ್ಕೆ ಎರಡೆರಡು ಹುದ್ದೆಗಳನ್ನು ಹೊಂದುವಂತಿಲ್ಲ ಎಂಬುದು ಬಿಸಿಸಿಐನ ಕಠಿಣ ನಿಯಮಗಳಲ್ಲಿ ಒಂದು. ಹೀಗಾಗಿ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಎಸ್ ಧೋನಿ ಟೀಮ್ ಇಂಡಿಯಾದ ಮಾರ್ಗದರ್ಶಕನಾಗಿ ಕೆಲಸ ನಿರ್ವಹಿಸುವುದು ಬಿಸಿಸಿಐನ ಪ್ರಮುಖ ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ಗೆ ಎಂಎಸ್ ಧೋನಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ವಿರುದ್ಧ ದೂರನ್ನು ದಾಖಲಿಸಲಾಗಿದೆ.

ಟೀಮ್ ಇಂಡಿಯಾ ಮೆಂಟರ್ ಆಗುವುದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸುತ್ತಾರಾ ಧೋನಿ?

ಟೀಮ್ ಇಂಡಿಯಾ ಮೆಂಟರ್ ಆಗುವುದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ತ್ಯಜಿಸುತ್ತಾರಾ ಧೋನಿ?

ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಿದ್ದ ಎಂ ಎಸ್ ಧೋನಿ ವಿರುದ್ಧ ಇದೀಗ ದೂರು ದಾಖಲಾಗಿದ್ದು, ಎಂಎಸ್ ಧೋನಿ ಟೀಮ್ ಇಂಡಿಯಾ ಮೆಂಟರ್ ಆಗಿ ಕಾರ್ಯನಿರ್ವಹಿಸುವುದಕ್ಕೋಸ್ಕರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ನೀಡುತ್ತಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ..

Story first published: Thursday, September 9, 2021, 19:04 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X