ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಆಯ್ಕೆ ಸರಿಯೇ?; ತುಟಿ ಬಿಚ್ಚಿದ ವಿರೇಂದ್ರ ಸೆಹ್ವಾಗ್

T20 worldcup: MS Dhoni will be a perfect mentor to the young team India says Virender Sehwag

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಇದೇ ಸೆಪ್ಟೆಂಬರ್ 19ರ ಭಾನುವಾರದಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯ ಮೂಲಕ ಪುನಾರಂಭವಾಗುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ. ಹೌದು ಇದೇ ಭಾನುವಾರದಿಂದ ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ದ್ವಿತೀಯ ಭಾಗದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ.

ಟಿ20 ವಿಶ್ವಕಪ್‌ನಲ್ಲಿ ಈ ಆಟಗಾರನಿಗೆ ಸ್ಥಾನ ನೀಡಿರುವುದು ಆತನ ಸಮಾಧಾನಕ್ಕಷ್ಟೇ!; ಗವಾಸ್ಕರ್ ವ್ಯಂಗ್ಯಟಿ20 ವಿಶ್ವಕಪ್‌ನಲ್ಲಿ ಈ ಆಟಗಾರನಿಗೆ ಸ್ಥಾನ ನೀಡಿರುವುದು ಆತನ ಸಮಾಧಾನಕ್ಕಷ್ಟೇ!; ಗವಾಸ್ಕರ್ ವ್ಯಂಗ್ಯ

ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾದ ಚರ್ಚೆಗಳ ನಡುವೆಯೂ ಭಾರೀ ಚರ್ಚೆಗೆ ಕಾರಣವಾಗಿರುವ ವಿಷಯವೆಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ನಂತರ ಯು ಎ ಇ ಯಲ್ಲಿಯೇ ಆರಂಭವಾಗಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ. ಹೌದು ಬರೋಬ್ಬರಿ 5 ವರ್ಷಗಳ ಅಂತರದ ನಂತರ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಪುನಃ ಆರಂಭವಾಗುತ್ತಿದ್ದು ಭಾರಿ ಕುತೂಹಲ ಮತ್ತು ನಿರೀಕ್ಷೆಯನ್ನು ಕ್ರೀಡಾಭಿಮಾನಿಗಳಲ್ಲಿ ಹುಟ್ಟುಹಾಕಿದೆ. ಭಾರತದಲ್ಲಿಯೇ ನಡೆಯಬೇಕಿದ್ದ ಈ ಟೂರ್ನಿಯನ್ನು ಕೂಡ ಕೊರೋನಾವೈರಸ್ ಭೀತಿಯಿಂದ ಯುಎಇಗೆ ಸ್ಥಳಾಂತರಿಸಲಾಗಿದ್ದು ಅಕ್ಟೋಬರ್ 17ರಿಂದ ನವೆಂಬರ್‌ 14ರವರೆಗೆ ಈ ಪ್ರತಿಷ್ಠಿತ ಟೂರ್ನಿ ನಡೆಯಲಿದೆ.

ಟೀಮ್ ಇಂಡಿಯಾಗೆ ಈ ಆಟಗಾರರು ನೂತನ ನಾಯಕ ಮತ್ತು ಉಪನಾಯಕರಾಗಬೇಕೆಂದು ಸೂಚಿಸಿದ ಕೊಹ್ಲಿಟೀಮ್ ಇಂಡಿಯಾಗೆ ಈ ಆಟಗಾರರು ನೂತನ ನಾಯಕ ಮತ್ತು ಉಪನಾಯಕರಾಗಬೇಕೆಂದು ಸೂಚಿಸಿದ ಕೊಹ್ಲಿ

ಹೀಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ವಿವಿಧ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸುವುದರ ಮೂಲಕ ಸಂಚಲವನ್ನು ಸೃಷ್ಟಿಸಿದ್ದವು. ಅದರಲ್ಲಿಯೂ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಭಾರತ ತಂಡದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದಾಗ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳು ನಡೆದವು. ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾದಾಗ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯಲು ಪ್ರಮುಖವಾಗಿ ಕಾರಣವಾದದ್ದು ಟೀಮ್ ಇಂಡಿಯಾ ಮೆಂಟರ್ ಆಗಿ ಎಂಎಸ್ ಧೋನಿ ಅವರ ಹೆಸರನ್ನು ಘೋಷಣೆ ಮಾಡಿದ್ದು. ಹೌದು, ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡಕ್ಕೆ ಮಾರ್ಗದರ್ಶಕನಾಗಿ ಬಿಸಿಸಿಐ ನೇಮಕ ಮಾಡಿ ಘೋಷಣೆಯನ್ನು ಹೊರಡಿಸಿತ್ತು. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರದ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ಈಗಾಗಲೇ ಪ್ರತಿಕ್ರಿಯೆಯನ್ನು ನೀಡಿದ್ದು ಇದೀಗ ಟೀಮ್ ಇಂಡಿಯಾದ ಸ್ಪೋಟಕ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ಈ ಕುರಿತಾಗಿ ಈ ಕೆಳಕಂಡಂತೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಆಯ್ಕೆಯನ್ನು ಶ್ಲಾಘಿಸಿದ ವಿರೇಂದ್ರ ಸೆಹ್ವಾಗ್

ಬಿಸಿಸಿಐ ಆಯ್ಕೆಯನ್ನು ಶ್ಲಾಘಿಸಿದ ವಿರೇಂದ್ರ ಸೆಹ್ವಾಗ್

ಈ ಬಾರಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡಕ್ಕೆ ಎಂಎಸ್ ಧೋನಿ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿರುವ ಬಿಸಿಸಿಐ ಆಯ್ಕೆ ಕುರಿತು ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರೇ ತುಂಬಿರುವ ತಂಡಕ್ಕೆ ಎಂಎಸ್ ಧೋನಿಯಂತಹ ಅನುಭವಿ ಕ್ರಿಕೆಟಿಗ ಮೆಂಟರ್ ಆಗಿ ನೇಮಕವಾಗಿರುವುದು ಉತ್ತಮವಾದ ಆಯ್ಕೆ ಎಂದು ವಿರೇಂದ್ರ ಸೆಹ್ವಾಗ್ ಶ್ಲಾಘಿಸಿದ್ದಾರೆ.

ಮಾರ್ಗದರ್ಶಕನಾಗಿ ಎಂಎಸ್ ಧೋನಿ ಆಯ್ಕೆ ಪರ್ಫೆಕ್ಟ್

ಮಾರ್ಗದರ್ಶಕನಾಗಿ ಎಂಎಸ್ ಧೋನಿ ಆಯ್ಕೆ ಪರ್ಫೆಕ್ಟ್

ಎಂ ಎಸ್ ಧೋನಿಗೆ ಯಾವ ಆಟಗಾರನನ್ನು ಯಾವ ಸಮಯದಲ್ಲಿ ಕಣಕ್ಕಿಳಿಸಬೇಕು, ಯಾವ ಆಟಗಾರನನ್ನು ಯಾವ ಸ್ಥಳದಲ್ಲಿ ಫೀಲ್ಡ್ ಮಾಡಲು ಬಿಡಬೇಕು ಮತ್ತು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಯಾವ ರೀತಿಯ ಬೌಲಿಂಗ್ ಮಾಡಿಸಬೇಕು ಎಂಬುದರ ಕುರಿತು ಸಂಪೂರ್ಣ ಜ್ಞಾನವಿದೆ. ಅಷ್ಟೇ ಅಲ್ಲದೆ ಆಟಗಾರರು ಯಾವುದೇ ಸಂಕೋಚವಿಲ್ಲದೆ ಎಂಎಸ್ ಧೋನಿ ಅವರನ್ನು ಭೇಟಿಯಾಗಿ ಮುಕ್ತವಾಗಿ ಮಾತನಾಡುವ ಅವಕಾಶವನ್ನು ಧೋನಿ ಆಟಗಾರರಿಗೆ ನೀಡಲಿದ್ದಾರೆ. ಹೀಗೆ ಮಾಡುವುದರಿಂದ ಆಟಗಾರರು ತಮಗಿರುವ ಗೊಂದಲಗಳ ಕುರಿತು ತಮ್ಮ ಮಾರ್ಗದರ್ಶಕನ ಜೊತೆ ಮುಕ್ತವಾಗಿ ಮಾತುಕತೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬಹುದು. ಹೀಗಾಗಿ ಎಂಎಸ್ ಧೋನಿ ಮೆಂಟರ್ ಆಗಿ ಆಯ್ಕೆಯಾಗಿರುವುದು ನಿಖರವಾದ ಆಯ್ಕೆಯಾಗಿದೆ ಎಂದು ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡ ಹೀಗಿದೆ

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡ ಹೀಗಿದೆ

ಇದೇ ಅಕ್ಟೋಬರ್ ತಿಂಗಳಿನಿಂದ ಯುಎಇಯಲ್ಲಿ ಆರಂಭವಾಗಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ.

Story first published: Saturday, September 18, 2021, 17:26 [IST]
Other articles published on Sep 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X