ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಮಧ್ಯೆ ಹೊರ ಬಿತ್ತು ಟಿ20 ರ‍್ಯಾಂಕಿಂಗ್: ಕೊಹ್ಲಿ, ರಾಹುಲ್‌ಗೆ ನಿರಾಸೆ!

T20I Ranking List: Virat Kohli, KL Rahul drop; Rizwan, Markram make big rise

ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಪಂದ್ಯಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಟಿ20ಐನ ನೂತನ ಶ್ರೇಯಾಂಕ ಪಟ್ಟಿಯನ್ನು ಐಸಿಸಿ ಬಿಡುಗಡೆಗೊಳಿಸಿದೆ. ಬ್ಯಾಟರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡಿನ್ ಮಾರ್ಕ್ರಮ್ ಹಾಗೂ ಪಾಕಿಸ್ತಾನ ಆಟಗಾರ ಮೊಹಮ್ಮದ್ ರಿಜ್ವಾನ್ ಭಾರೀ ಏರಿಕೆ ಕಾಣುವಲ್ಲಿ ಯಶಸ್ವಿಯಾಗಿದ್ದು ವೃತ್ತಿ ಜೀವನದಲ್ಲಿ ತನ್ನ ಅತ್ಯುನ್ನತ ಶ್ರೇಯಾಂಕವನ್ನು ತಲುಪಿದ್ದಾರೆ.

ದಕ್ಷಿಣ ಆಫ್ರಿಕಾ ಪರವಾಗಿ ಚುಟುಕು ಕ್ರಿಕೆಟ್‌ನಲ್ಲಿ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಏಡಿನ್ ಮಾರ್ಕ್ರಮ್ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಈ ಆಟಗಾರರ ಕ್ರಮವಾಗಿ 40 ಹಾಗೂ 51 ರನ್‌ಗಳನ್ನು ಗಳಿಸಿದ್ದರು. 8 ಸ್ಥಾನಗಳ ಏರಿಕೆ ಕಂಡಿರುವ ದಕ್ಷಿಣ ಆಫ್ರಿಕಾದ ಈ ಆಟಗಾರ ಈಗ ಚುಟುಕು ಕ್ರಿಕೆಟ್‌ನಲ್ಲಿ ಈಗ ಅಗ್ರ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗ ಮಾರ್ಕ್ರಮ್ ಕೇವಲ ಡೇವಿಡ್ ಮಲನ್ ಹಾಗೂ ಬಾಬರ್ ಅಜಂ ಅವರಿಗಿಂತ ಹಿಂದುಳಿದಿದ್ದಾರೆ. ಇದಕ್ಕೂ ಮುನ್ನ 9ನೇ ಸ್ಥಾನ ಅತ್ಯುತ್ತಮ ಶ್ರೇಯಾಂಕವಾಗಿತ್ತು.

'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!

ಇನ್ನು ಭಾರತ ವಿರುದ್ಧ ಟಿ20 ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನದ ಆರಂಭಿಕ ಆಟಗಾರ ರಿಜ್ವಾನ್ ಕೂಡ ಉತ್ತಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಭಾರತದ ವಿರುದ್ಧ ಅಜೇಯ 79 ರನ್‌ಗಳಿಸಿದ್ದ ರಿಜ್ವಾನ್ ನಂತರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 33 ರನ್‌ಗಳಿಸಿದ್ದರು. ಈ ಪ್ರದರ್ಶನದೊಂದಿಗೆ ಎರಡು ಸ್ಥಾನಗಳ ಏರಿಕೆ ಕಂಡಿರುವ ರಿಜ್ವಾನ್ 4ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ.

ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಶ್ರೇಯಾಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದು ಭಾರತದ ಇನ್ನೋರ್ವ ಸ್ಟಾರ್ ಆಟಗಾರ ಕೆಎಲ್ ರಾಹುಲ್ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ಭಾರತದ ಇಬ್ಬರು ಅಗ್ರ ಶ್ರೇಯಾಂಕದ ಆಟಗಾರರು ಕೂಡ ನಿರಾಸೆ ಅನುಭವಿಸಿದ್ದಾರೆ.

ಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿಹರ್ಭಜನ್ ವಿರುದ್ಧ ಟ್ವೀಟ್ ದಾಳಿ ನಡೆಸಿದ ಪಾಕ್ ಮಾಜಿ ಆಟಗಾರ: ಅಮಿರ್‌ಗೆ 'ಸ್ಪಾಟ್ ಫಿಕ್ಸಿಂಗ್' ನೆನಪಿಸಿದ ಭಜ್ಜಿ

ಇನ್ನು ಅಫ್ಘಾನಿಸ್ತಾನದ ರಹ್ಮನುಲ್ಲಾಹ್ ಗರ್ಬಾಜ್ 9 ಸ್ಥಾನಗಳ ಏರಿಕೆ ಕಂಡಿದ್ದು ವೃತ್ತಿ ಜೀವನದ ಅತ್ಯುತ್ತಮ 12ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ ಉತ್ತಮ ಪ್ರದರ್ಶನ ನಿಡಿದ ಬಾಂಗ್ಲಾದೇಶದ ಆರಂಭಿಕ ಆಟಗಾರ ಮಿಹಮ್ಮದ್ ನಯೀಮ್ 11 ಸ್ಥಾನಗಳ ಏರಿಕೆ ಕಂಡಿದ್ದು ಕೆರಿಯರ್ ಬೆಸ್ಟ್ 13ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಡೇವಿಡ್ ಮಲನ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದರೆ ಎರಡನೇ ಸ್ಥಾನದಲ್ಲಿ ಬಾಬರ್ ಅಜಂ ಮುಂದುವರಿದಿದ್ದಾರೆ.

ಭಾರತ vs ನ್ಯೂಜಿಲೆಂಡ್‌: ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಉಂಟಾಗಿರುವ ಈ 2 ಸಮಸ್ಯೆಗಳಿಂದ ಭಾರತಕ್ಕೆ ಲಾಭಭಾರತ vs ನ್ಯೂಜಿಲೆಂಡ್‌: ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಉಂಟಾಗಿರುವ ಈ 2 ಸಮಸ್ಯೆಗಳಿಂದ ಭಾರತಕ್ಕೆ ಲಾಭ

Hardik Pandya ಮುಂದಿನ ಪಂದ್ಯದಲ್ಲಿ ಆಡೇ ಆಡ್ತಾರೆ | Oneindia Kannada

ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳೇನೂ ಆಗಿಲ್ಲ. ದಕ್ಷಿಣ ಆಫ್ರಿಕಾದ ತಬ್ರೇಜ್ ಶಂಸಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದರೆ ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ವನಿಂದು ಹಸರಂಗ ಮುಂದುವರಿದಿದ್ದಾರೆ. ರಶೀದ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತೀಯ ಬೌಲರ್‌ಗಳ ಪೈಕಿ 15ನೇ ಶ್ರೇಯಾಂಕದಲ್ಲಿರುವ ಭುವನೇಶ್ವರ್ ಕುಮಾರ್ ಉತ್ತಮ ಶ್ರೇಯಾಂಕ ಪಡೆದಿರುವ ಬೌಲರ್ ಆಗಿದ್ದಾರೆ.

Story first published: Thursday, October 28, 2021, 10:07 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X