ಟೀಂ ಇಂಡಿಯಾದ ಅಗ್ರೆಸ್ಸಿವ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮತ್ತೊಮ್ಮೆ ತಾನೆಷ್ಟು ಅಪಾಯಕಾರಿ ಅನ್ನೋದನ್ನ ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಪಾರ್ಲ್ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವೇಗದ 85 ರನ್ ಕಲೆಹಾಕುವ ಮೂಲಕ ರಿಷಭ್ ಪಂತ್, ದಕ್ಷಿಣ ಆಫ್ರಿಕಾ ಬೌಲರ್ಗಳನ್ನ ದಂಡಿಸಿದರು.
ಮೊದಲ ವಿಕೆಟ್ಗೆ ಕೆ.ಎಲ್ ರಾಹುಲ್ ಮತ್ತು ಶಿಖರ್ ಧವನ್ 63 ರನ್ಗಳ ಜೊತೆಯಾಟ ಬೇರ್ಪಟ್ಟ ಬಳಿಕ, ಒಂದರ ಹಿಂದೆ ಮತ್ತೊಂದರಂತೆ ವಿಕೆಟ್ ಉರುಳಿದವು. ಮೊದಲಿಗೆ ಶಿಖರ್ ಧವನ್ 29ರನ್ಗೆ ಏಡನ್ ಮಕ್ರಾಮ್ಗೆ ವಿಕೆಟ್ ಒಪ್ಪಿಸಿದ್ರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಕೇಶವ್ ಮಹಾರಾಜಗೆ ವಿಕೆಟ್ ಒಪ್ಪಿಸಿದ್ರು. ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಸ್ಪಿನ್ನರ್ಗೆ ವಿಕೆಟ್ ನೀಡಿದ್ದಾರೆ.
ಇದಾದ ಬಳಿಕ ಕೆ.ಎಲ್ ರಾಹುಲ್ ಜೊತೆಗೆ ಮೂರನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ ರಿಷಭ್ ಪಂತ್ ಹಾಗೂ ಕೆ.ಎಲ್ ರಾಹುಲ್ ಟೀಂ ಇಂಡಿಯಾ 200ರ ಗಡಿ ದಾಟಲು ನೆರವಾದ್ರು. ಅದ್ರಲ್ಲೂ ತನ್ನ ಅಗ್ರೆಸ್ಸಿವ್ ಇನ್ನಿಂಗ್ಸ್ ಆಡಿದ ಪಂತ್ 43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ರು.
ವೆಂಕಟೇಶ್ ಅಯ್ಯರ್ಗೆ ಏಕೆ ಬೌಲಿಂಗ್ ಕೊಡಲಿಲ್ಲ ಎಂದು ಕ್ಯಾಪ್ಟನ್ ಉತ್ತರಿಸಲಿ: ಗವಾಸ್ಕರ್
10 ಬೌಂಡರಿ ಮತ್ತು 2 ಅಮೋಘ ಸಿಕ್ಸರ್ಗಳಿಂದ 71 ಎಸೆತಗಳಲ್ಲಿ 85 ರನ್ ಕಲೆಹಾಕಿದ್ದ ರಿಷಭ್ ಪಂತ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕದತ್ತ ಹೆಜ್ಜೆ ಹಾಕಿದ್ರು. ಈ ವೇಳೆ ಪಂತ್ ಕನಸಿಗೆ ತಣ್ಣೀರೆರಚಿದ್ದು, ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ
33ನೇ ಓವರ್ನಲ್ಲಿ ಎಡಗೈ ಚೈನಾಮೆನ್ ಬೌಲರ್ ಶಮ್ಸಿ ರಿಷಭ್ ಪಂತ್ರನ್ನ ತನ್ನ ಬಲೆಯಲ್ಲಿ ಕೆಡವುವಲ್ಲಿ ಯಶಸ್ವಿಯಾದ್ರು. ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದ ಪಂತ್ ಏಡನ್ ಮಕ್ರಾಮ್ ಹಿಡಿದ ಉತ್ತಮ ಕ್ಯಾಚ್ಗೆ ಬಲಿಯಾದ್ರು. ಹೀಗೆ ದಕ್ಷಿಣ ಆಫ್ರಿಕಾಗೆ ಮಾರಕವಾಗಿದ್ದ ಪಂತ್ ವಿಕೆಟ್ ಉರುಳಿತ್ತಿದ್ದಂತೆ ತಬ್ರೈಜ್ ಶಮ್ಸಿ ಅಗ್ರೆಸ್ಸಿವ್ ಆಗಿ ವಿಕೆಟ್ ಸಂಭ್ರಮಿಸಿದ್ರು.
#SAvIND
— The Field (@thefield_in) January 21, 2022
A big moment in the game as Tabraiz Shamsi gets Rishabh Pant.
📹: OfficialCSApic.twitter.com/2v4wPdyRIC
ಹೀಗೆ ತಬ್ರೈಜ್ ಶಮ್ಸಿ ತನ್ನ ಅಗ್ರೆಸ್ಸಿವ್ ಸಂಭ್ರಮಾಚರಣೆ ಬಳಿಕ ಪೆವಿಲಿಯನ್ನತ್ತ ಸಾಗುತ್ತಿದ್ದ ರಿಷಭ್ ಪಂತ್ ಬಳಿ ಹೋಗಿ ಅವರ ಉತ್ತಮ ಇನ್ನಿಂಗ್ಸ್ಗೆ ಶುಭಾಶಯ ಕೂಡ ತಿಳಿಸಿದ್ರು.
ಕೆ.ಎಲ್ ರಾಹುಲ್ ಮತ್ತು ರಿಷಭ್ ಪಂತ್ ಮೂರನೇ ವಿಕೆಟ್ಗೆ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ರು. ಆದ್ರೆ ಉಳಿದ ಬ್ಯಾಟ್ಸ್ಮನ್ಗಳು ದಕ್ಷಿಣ ಆಫ್ರಿಕಾ ಬೌಲರ್ಗಳ ಎದುರು ವಿಫಲಗೊಂಡ್ರು.
ಭಾರತ ಪ್ಲೇಯಿಂಗ್ 11
ಕೆ.ಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಹಾಲ್
ಬೆಂಚ್: ದೀಪಕ್ ಚಹಾರ್, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ನವದೀಪ್ ಸೈನಿ, ಇಶಾನ್ ಕಿಶನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ರುತುರಾಜ್ ಗಾಯಕ್ವಾಡ್
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಟೆಂಬಾ ಬವುಮಾ (ಸಿ), ಏಡನ್ ಮಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಸಿಸಂದ ಮಗಲಾ, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ತಬ್ರೈಜ್ ಶಮ್ಸಿ
ಬೆಂಚ್: ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಜುಬೇರ್ ಹಮ್ಜಾ, ಕೈಲ್ ವೆರ್ರೆನ್ನೆ, ಜಾರ್ಜ್ ಲಿಂಡೆ, ಮಾರ್ಕೊ ಯಾನ್ಸೆನ್