ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ರೀತಿಯ ಆಟಗಾರನನ್ನು ಯಾವ ತಂಡವೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಶಂಸಿ ಹೇಳಿದ್ದು ಯಾರ ಬಗ್ಗೆ ಗೊತ್ತಾ!

Tabraiz Shamsi on RCB star AB de Villiers international return

ಈ ಬಾರಿಯ ಐಪಿಎಲ್ ಆವೃತ್ತಿ ಈಗ ಅರ್ಧಕ್ಕೆ ಮುಂದೂಡಿಕೆಯಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಟೂರ್ನಿ ರದ್ದಾಗುವ ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಆರ್‌ಸಿಬಿ ತಂಡದ ಈ ಪ್ರದರ್ಶನದಲ್ಲಿ ಓರ್ವ ಆಟಗಾರನ ಪಾತ್ರ ಅತ್ಯಂತ ಗಮನಾರ್ಹವಾಗಿದೆ.

ಅದು ಬೇರೆ ಯಾರೂ ಅಲ್ಲ ಆರ್‌ಸಿಬಿ ಪಾಲಿನ ಆಪತ್ಬಾಂಧವ ಎಬಿ ಡಿವಲಿಯರ್ಸ್. ಪ್ರತಿ ಬಾರಿಯಂತೆ ಎಬಿ ಡಿವಲಿಯರ್ಸ್ ಈ ಬಾರಿಯ ಆವೃತ್ತಿಯಲ್ಲಿಯೂ ಶ್ರೇಷ್ಠ ಪ್ರದರ್ಶವನ್ನು ನೀಡಿದ್ದಾರೆ. ಈ ಪ್ರದರ್ಶನದ ಬಳಿಕ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಟಬ್ರೈಜ್ ಶಂಸಿ ಪ್ರತಿಕ್ರಿಯೆ ನೀಡಿದ್ದು ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಡಿವಿಲಿಯರ್ಸ್ ಪುನರಾಗಮನದ ಬಗ್ಗೆ ಮಾತನಾಡಿದ್ದಾರೆ.

ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್

ವಿಶ್ವ ದರ್ಜೆಯ ಕ್ರಿಕೆಟಿಗ

ವಿಶ್ವ ದರ್ಜೆಯ ಕ್ರಿಕೆಟಿಗ

ಎಬಿ ಡಿವಿಲಿಯರ್ಸ್ ಓರ್ವ ವಿಶ್ವದರ್ಜೆಯ ಆಟಗಾರ. ಆತ ಯಾವುದೇ ತಂಡವನ್ನು ಕೂಡ ಸೇರಿಕೊಳ್ಳಲು ಸಮರ್ಥ ಕ್ರಿಕೆಟಿಗ. ಅಷ್ಟು ಉತ್ತಮ ಆಟಗಾರ ಎಬಿ ಡಿವಿಲಿಯರ್ಸ್. ಅದು ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ಆಗಿರಬಹುದು. ಆದರೆ ಎಬಿ ಡಿವಲಿಯರ್ಸ್ ಅವರ ಪರಿಸ್ಥಿತಿ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಇದು ಅವರು ಹೇಗೆ ಯೋಚಿಸುತ್ತಾರೆ ಮತ್ತು ಕೋಚ್ ಹೇಗೆ ಯೋಚಿಸುತ್ತಾರೆ ಜೊತೆಗೆ ಆಯ್ಕೆಗಾರರು ಹೇಗೆ ಯೋಚನೆ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಆದರೆ ಅವರಂತಾ ಆಟಗಾರನನ್ನು ಯಾವುದೇ ತಂಡವಾದರೂ ಕಡೆಗಣಿಸಲು ಸಾಧ್ಯವಿಲ್ಲ ಎಂದು ಶಂಸಿ ಪ್ರತಿಕ್ರಿಯಿಸಿದ್ದಾರೆ.

ನಿವೃತ್ತಿಯ ನಂತರವೂ ರನ್‌ ಮಳೆ

ನಿವೃತ್ತಿಯ ನಂತರವೂ ರನ್‌ ಮಳೆ

ಎಬಿ ಡಿವಿಲಿಯರ್ಸ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಆದರೆ ಅದಾದ ಬಳಿಕವೂ ಲೀಗ್ ಕ್ರಿಕೆಟ್‌ನಲ್ಲಿ ಅವರು ಸಕ್ರಿಯವಾಗಿದ್ದು ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ವಿಶ್ವದರ್ಜೆಯ ಬೌಲಿಂಗ್ ದಾಳಿಯನ್ನು ಲೀಲಾಜಾಲವಾಗಿ ದಂಡಿಸುತ್ತಾ ರನ್‌ ಮಳೆ ಸುರಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ?

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ?

ಡಿವಿಲಿಯರ್ಸ್ ಅವರ ಈ ಅದ್ಭುತವಾದ ಫಾರ್ಮ್‌ನ ಕಾರಣದಿಂದಾಗಿ 2020ರ ವರ್ಷಾಂತ್ಯದ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಾಸ್ ಕರೆತರುವ ಪ್ರಯತ್ನಗಳು ನಡೆಯುತ್ತಿದೆ. ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ನಿಂತ ಬಳಿಕ ಈಗ ಮತ್ತೆ ಈ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು ಐಪಿಎಲ್ ಬಳಿಕ ಈ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸ್ವತಃ ಡಿವಿಲಿಯರ್ಸ್ ಬಹಿರಂಗ ಪಡಿಸಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆದರೆ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡವನ್ನು ಮತ್ತೆ ಪ್ರತಿನಿಧಿಸುವ ಸಾಧ್ಯತೆಯಿದೆ

ಈ ಬಾರಿಯ ಐಪಿಎಲ್‌ನಲ್ಲಿಯೂ ಮಿಂಚು

ಈ ಬಾರಿಯ ಐಪಿಎಲ್‌ನಲ್ಲಿಯೂ ಮಿಂಚು

ಈ ಬಾರಿಯ ಐಪಿಎಲ್‌ನಲ್ಲಿ ಎಬಿ ಡಿವಿಲಿಯರ್ಸ್ 4-5ನೇ ಕ್ರಮಾಂಕದಲ್ಲಿ ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಅದಾಗ್ಯೂ ಎಬಿಡಿ 7 ಪಂದ್ಯಗಳಲ್ಲಿ 3 ಅರ್ಧ ಶತಕವನ್ನು ಸಿಡಿಸಿ 207 ರನ್‌ಗಳಿಸಿದ್ದಾರೆ. ಈ ಮೂಲಕ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ.

Story first published: Wednesday, May 5, 2021, 14:33 [IST]
Other articles published on May 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X