ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!

ICC World Cup 2019 : ಕ್ರಿಕೆಟ್ ಆಡುವುದಕ್ಕಿನ್ನ ಬೇಕರಿಯಲ್ಲಿ ಕೆಲಸ ಮಾಡುವುದು ಬೆಸ್ಟ್..? | James Neesham
Take up baking, not sport: Neesham to kids post WC loss

ಲಂಡನ್‌, ಜುಲೈ 15: ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ ಸೋಲನುಭವಿಸಿದ ಬಳಿಕ ಬೇಸರ ಹೊರ ಹಾಕಿರುವ ಆಲ್‌ರೌಂಡರ್‌ ಜಿಮ್ಮಿ ನೀಶಮ್‌ ಕ್ರೀಡೆಗಿಂತಲೈ ಬೇಕರಿ ಕೆಲಸ ಆಯ್ದುಕೊಳ್ಳುವುದು ಸೂಕ್ತ ಎಂದಿದ್ದಾರೆ.

ಭಾನುವಾರ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯ ಅತ್ಯಂತ ರೋಚಕ ಅಂತ್ಯ ಕಂಡಿತು. ಸೀಮಿತ ಓವರ್‌ಗಳು ಮತ್ತು ಸೂಪರ್‌ ಓವರ್‌ ಎರಡರಲ್ಲೂ ಇತ್ತಂಡಗಳು ಸಮಬಲದ ಮೊದಲ ದಾಖಲಿಸಿದ ಪರಿಣಾಮ ಎರಡರಲ್ಲೂ ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ ತಂಡಕ್ಕೆ ಗೆಲುವು ಪ್ರಾಪ್ತಿಯಾಗಿ ಟ್ರೋಫಿ ಎತ್ತಿ ಹಿಡಿಯುವ ಸೌಭಾಗ್ಯ ಒಲಿಯಿತು.

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!

ಇತಿಹಾಸದ ಪ್ರಸಿದ್ಧ ಕ್ರಿಕೆಟ್‌ ಖಾಶಿ ಎಂದೇ ಕರೆಸಿಕೊಳ್ಳುವ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 241/8 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 241 ರನ್‌ಗಳನ್ನು ಗಳಿಸುವ ಮೂಲಕ ಪಂದ್ಯವನ್ನು ಟೈ ಮಾಡಿಕೊಂಡಿತು.

ಬಳಿಕ ಫಲಿತಾಂಶ ಸಲುವಾಗಿ ಸೂಪರ್‌ ಓವರ್‌ ಸ್ಪರ್ಧೆ ನಡೆಸಲಾಯಿತು ಇದರಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 15 ರನ್‌ಗಳನ್ನು ಗಳಿಸಿದರೆ, ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಕೂಡ 15/1 ರನ್‌ಗಳಿಸಿತು. ಬಳಿಕ ಟೈ ಬ್ರೇಕರ್‌ ನಿಯಮ ಬಳಕೆಗೆ ತಂದು ನಿಗದಿತ 100 ಓವರ್‌ಗಳು ಮತ್ತು ಸೂಪರ್‌ ಓವರ್‌ನಲ್ಲಿ ಒಟ್ಟು ಅತಿ ಹೆಚ್ಚು ಬೌಂಡರಿಗಳನ್ನು ಗಳಿಸಿದ್ದ ಇಂಗ್ಲೆಂಡ್‌ (26-17) ತಂಡಕ್ಕೆ ಗೆಲುವು ಪ್ರಾಪ್ತಿಯಾಯಿತು. ಜಗತ್ತಿಗೆ ಕ್ರಿಕೆಟ್‌ ಆಟವನ್ನು ಪರಿಚಯಿಸಿದ ಇಂಗ್ಲೆಂಡ್‌ ಕ್ರಿಕೆಟ್‌ ವಿಶ್ವಕಪ್‌ನ 44 ವರ್ಷಗಳ ಸುದೀರ್ಘಾವಧಿಯ ಬಳಿಕ ಚೊಚ್ಚಲ ವಿಶ್ವಕಪ್‌ ಮುಡಿಗೇರಿಸಿಕೊಂಡಿತು.

ವಿಶ್ವಕಪ್‌: ಜಯವರ್ಧನೆ ಅವರ ವಿಶ್ವ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌ವಿಶ್ವಕಪ್‌: ಜಯವರ್ಧನೆ ಅವರ ವಿಶ್ವ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್‌

ಇನ್ನು ನ್ಯೂಜಿಲೆಂಡ್‌ ಪರ ಸೂಪರ್‌ ಓವರ್‌ನಲ್ಲಿ ಬ್ಯಾಟ್‌ ಮಾಡಿದ ಜಿಮ್ಮಿ ನೀಶಮ್‌ 5 ಎಸೆತಗಳಲ್ಲಿ 14 ರನ್‌ಗಳಿಸಿದ್ದರು. ಕೊನೆಯ ಎಸೆತ ಎದುರಿಸಿದ ಮಾರ್ಟಿನ್‌ ಗಪ್ಟಿಲ್‌ 2 ರನ್‌ ಕದಿಯುವ ಪ್ರಯತ್ನದಲ್ಲಿ ರನ್‌ಔಟ್‌ ಆಗುತ್ತಿದ್ದಂತೆಯೇ ಇಂಗ್ಲೆಂಡ್‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಇಂಥದ್ದೊಂದು ಅಪರೂಪದ ಸೋಲಿನ ಆಘಾತಕ್ಕೊಳಗಾದ ಬಳಿಕ ಟ್ವಿಟರ್‌ ಮೂಲಕ ತಮ್ಮ ಪ್ರತಿಕ್ರಿಯೆ ಹೊರಹಾಕಿದ ಆಲ್‌ರೌಂಡರ್‌ ಜಿಮ್ಮಿ ನೀಶಮ್‌, ಮೊದಲಿಗೆ ಇಂಗ್ಲೆಂಡ್‌ಗೆ ಶುಭಾಶಯ ಕೋರಿದ್ದರು. "ಇದು ನಿಜಕ್ಕೂ ನೋವುಂಟು ಮಾಡಿದೆ. ಮುಂದಿನ ಒಂದು ದಶಕದ ವರೆಗೆ ನಾನು ಇಲ್ಲಿನ ಅರ್ಧಶಗಂಟೆಯ ಆಟವನ್ನು ನೆನೆಯುವುದಿಲ್ಲ. ಇಂಗ್ಲೆಂಡ್‌ಗೆ ಶುಭಾಶಯಗಳು. ಗೆಲುವು ನಿಮಗೆ ಅರ್ಹವಾಗಿದೆ," ಎಂದು ಟ್ವೀಟ್‌ ಮಾಡಿದ್ದರು.

ಇದಾದ ಬಳಿಕ ಮತ್ತೊಂದು ಟ್ವೀಟ್‌ ಮಾಡಿದ ನೀಶಮ್‌ ತಮ್ಮ ಅಭಿಮಾನಿಗಳ ಎದುರು ಹತಾಶೆಯನ್ನು ಹೊರಹಾಕಿದರು. "ನಮ್ಮ ತಂಡಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ದನಿ ದಿನಪೂರ್ತಿ ನಮ್ಮ ಕಿವಿಗೆ ಮುಟ್ಟುತ್ತಿತ್ತು. ಗೆದ್ದೇ ತೀರುವ ಹಂಬಲ ನಮ್ಮದಾಗಿತ್ತು. ಆದರೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಕ್ಕಳೇ, ಕ್ರೀಡೆಯನ್ನು ನಿಮ್ಮ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳದಿರಿ. ಬದಲಿಗೆ ಬೇಕರಿ ಕೆಲಸ ಬೇರೇನಾದರೂ ತೆಗೆದುಕೊಳ್ಳಿ. ಬೊಜ್ಜು ತುಂಬಿಸಿಕೊಂಡು 60 ವರ್ಷಕ್ಕೆ ಕೊನೆಯುಸಿರೆಳೆದರಷ್ಟೇ ಸಾಕು," ಎಂದು ತಮ್ಮೊಳಗಿನ ನೋವು ಹಾಗೂ ಹತಾಶೆಯನ್ನು ಬಿಚ್ಚಿಟ್ಟಿದ್ದಾರೆ.

ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌ಸೂಪರ್‌ ಓವರ್‌ನಲ್ಲಿ ವಿಶ್ವಕಪ್‌ ಗೆದ್ದು ಇತಿಹಾಸ ಬರೆದ ಇಂಗ್ಲೆಂಡ್‌

ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಆಸರೆಯಾಗಿ ಅಜೇಯ 84 ರನ್‌ಗಳನ್ನು ಚೆಚ್ಚಿದ ಬೆನ್‌ ಸ್ಟೋಕ್ಸ್‌ ಪಂದ್ಯಶ್ರೇಷ್ಠ ಗೌರವ ಪಡೆದರೆ, ಅತ್ಯುತ್ತಮ ನಾಯಕತ್ವ ಮತ್ತು ಒಟ್ಟು 578 ರನ್‌ಗಳನ್ನು ಚೆಚ್ಚಿದ್ದ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು. ಅಂದಹಾಗೆ 2023ರ ವಿಶ್ವಕಪ್‌ ಟೂರ್ನಿಯು ಸಂಪೂರ್ಣ ಭಾರತ ಆತಿಥ್ಯದಲ್ಲಿ ನಡೆಯಲಿದೆ. ಭಾರತ ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಟೂರ್ನಿ ಆಯೋಜಿಸುವ ಹಕ್ಕನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ಮೂರು ಬಾರಿ ಜಂಟಿಯಾಗಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ.

Story first published: Monday, July 15, 2019, 14:26 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X