ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ ಕ್ರಿಕೆಟ್‌ ಆಡಲು ಅನುಮತಿ ನೀಡಿದ ತಾಲಿಬಾನ್

ಕಾಬೂಲ್: ಇಡೀ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ಹಿಡಿತಕ್ಕೆ ತಂದುಕೊಂಡ ಬಳಿಕ ತಾಲಿಬಾನ್ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಟೆಸ್ಟ್‌ ಪಂದ್ಯ ಆಡಲು ಅನುಮತಿ ನೀಡಿದೆ. ಇದರೊಂದಿಗೆ ತಾಲಿಬಾನ್ ಆಡಳಿತದಲ್ಲಿ ಅಫ್ಘಾನ್ ಕ್ರಿಕೆಟ್‌ ತಂಡ ಎಂದಿನಂತೆ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಶಾಭಾವನೆ ಮೂಡಿದೆ.

ICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾICC Test Rankings: ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ

"ಟೆಸ್ಟ್‌ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ತಂಡ ಕಳುಹಿಸಲು ನಮಗೆ ಅನುಮತಿ ಲಭಿಸಿದೆ," ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್‌ನ ಮುಖ್ಯ ನಿರ್ವಹಣಾಧಿಕಾರಿ ಹಮಿದ್ ಶಿನ್ವಾರಿ ಎಎಫ್‌ಪಿಗೆ ಹೇಳಿದ್ದಾರೆ. ಇದರೊಂದಿಗೆ ಇಸ್ಲಾಮಿಸ್ಟ್‌ಗಳ ಕೈಯಲ್ಲಿ ಅಫ್ಘಾನ್ ಆಡಳಿತ ಇದೆಯಾದರೂ ಕ್ರಿಕೆಟ್‌ ಚಟುವಟಿಕೆಗಳು ಎಂದಿನಂತೆ ಮುಂದುವರೆಯುವ ನಿರೀಕ್ಷೆ ಮೂಡಿದೆ.

2001ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಆಡಳಿತಕ್ಕೇರಿದ್ದಾಗ ಕ್ರೀಡೆಯೂ ಸೇರಿ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿತ್ತು. ಆ ವೇಳೆ ಸ್ಟೇಡಿಯಂಗಳನ್ನು ಸಾರ್ವಜನಿಕ ಮರಣದಂಡನಾ ಸ್ಥಳಗಳಾಗಿ ಬದಲಾಯಿಸಲಾಗಿತ್ತು.

ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಬಳಿಕ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಬಳಿಕ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಲಿರುವ ಅಫ್ಘಾನಿಸ್ತಾನ ತಂಡ ಅಲ್ಲಿ ನವೆಂಬರ್ 27ರಿಂದ ಡಿಸೆಂಬರ್‌ 1ರವರೆಗೆ ಟೆಸ್ಟ್‌ ಪಂದ್ಯ ಆಡಲಿದೆ. ಹೋಬರ್ಟ್‌ನಲ್ಲಿ ಈ ಪಂದ್ಯ ನಡೆಯಲಿದೆ. ಅಸಲಿಗೆ ಈ ಪಂದ್ಯ ಕಳೆದ ವರ್ಷ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಪ್ರಯಾಣ ನಿರ್ಬಂಧವಿದ್ದರಿಂದ ಪಂದ್ಯವನ್ನು ಮುಂದೂಡಲಾಗಿತ್ತು.

ಇಂಗ್ಲೆಂಡ್ ವಿರುದ್ಧ ಹೋರಾಟಕ್ಕೆ ಸಜ್ಜಾದ ಆಟಗಾರರು! | Oneindia Kannada

ಇಸ್ಲಾಮಿಸ್ಟ್‌ಗಳು ಕ್ರಿಕೆಟ್‌ ಬಗ್ಗೆ ಹೆಚ್ಚಿನ ತೊಂದರೆ ನೀಡುವುದಿಲ್ಲ. ಯಾಕೆಂದರೆ ತಾಲಿಬಾನಿಗಳೂ ಕೂಡ ಕ್ರಿಕೆಟ್ ಆಟವನ್ನು ಇಷ್ಟಪಡುತ್ತಾರೆ ಎಂದು ಅಫ್ಘಾನ್‌ ಕ್ರಿಕೆಟ್ ಬೋರ್ಡ್‌ನ ಹಮಿದ್ ಶಿನ್ವಾರಿ ಈ ಮೊದಲೇ ಹೇಳಿದ್ದರು. ಅದರಂತೆ ತಾಲಿಬಾನ್‌ಗಳು ಕ್ರಿಕೆಟ್‌ ಚಟುವಟಿಕೆಗಳಿಗೆ ಅನುಮತಿ ನೀಡಿರುವುದು ಅಲ್ಲಿನ ಕ್ರಿಕೆಟಿಗರಿಗೆ ನಿರಾಳತೆ ನೀಡಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 1, 2021, 21:13 [IST]
Other articles published on Sep 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X