ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೀಗೆ ಆಗದಿದ್ರೆ CSK ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ: ಬ್ರೆಟ್‌ ಲೀ

Talk On MS Dhoni Batting Position Putting Pressure On CSK: Brett Lee

ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಳಿಕ ಆತ ಯಾವಾಗ ಮೈದಾನಕ್ಕೆ ಇಳಿಯುತ್ತಾನೆ, ಯಾವಾಗ ಮತ್ತೆ ಪಂದ್ಯ ಆಡುತ್ತಾನೆ ಎಂದು ಅಭಿಮಾನಿಗಳು ಎದುರು ನೋಡ್ತಿದ್ದರು. ಆದರೆ ಐಪಿಎಲ್ ಆರಂಭವಾದ ಬಳಿಕ ಸಿಎಸ್‌ಕೆ ಈಗ ಟೀಕೆಗಳ ಸುರಿಮಳೆಯನ್ನೇ ಎದುರಿಸ್ತಿದೆ. ಇದಕ್ಕೆ ಕಾರಣ ಧೋನಿಯ ಬ್ಯಾಟಿಂಗ್ ಕ್ರಮಾಂಕವೇ ದೊಡ್ಡ ಸಮಸ್ಯೆ ರೀತಿಯಲ್ಲಿ ಬಿಂಬಿತವಾಗಿರುವುದು.

ಹೌದು, ಧೋನಿ ಬ್ಯಾಟಿಂಗ್ ಕ್ರಮಾಂಕವೂ ಸರಿಯಾಗಿಲ್ಲ ಎಂದು ಅನೇಕ ಕ್ರಿಕೆಟ್ ವಿಶ್ಲೇಷಕರು ಈಗಾಗಲೇ ಟೀಕೆ ಮಾಡಿದ್ದಾಗಿದೆ. ಇದರ ಜೊತೆಗೆ ಸಿಎಸ್‌ಕೆ ಉತ್ತಮ ಪ್ರದರ್ಶನ ತೋರಬೇಕಾದ್ರೆ ಕೂಡಲೇ ಧೋನಿ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸರಿಪಡಿಸಿಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್‌ ಲೀ ಅಭಿಪ್ರಾಯ ಪಟ್ಟಿದ್ದಾರೆ.

RCB ಗೆಲ್ಲಬೇಕಾದ್ರೆ ಡೆತ್‌ ಓವರ್‌ನಲ್ಲಿ ಈತನಿಗೆ ಬೌಲಿಂಗ್ ಕೊಡ್ಬೇಡಿ: ಇರ್ಫಾನ್ ಪಠಾಣ್RCB ಗೆಲ್ಲಬೇಕಾದ್ರೆ ಡೆತ್‌ ಓವರ್‌ನಲ್ಲಿ ಈತನಿಗೆ ಬೌಲಿಂಗ್ ಕೊಡ್ಬೇಡಿ: ಇರ್ಫಾನ್ ಪಠಾಣ್

ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವಿನ ಹೆಜ್ಜೆ ಇಟ್ಟ ಸಿಎಸ್‌ಕೆ ನಂತರದ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಸುರೇಶ್ ರೈನಾ ಅನುಪಸ್ಥಿತಿ ಜೊತೆಗೆ ಕಳೆದ ಎರಡು ಪಂದ್ಯಗಳಲ್ಲಿ ಇನ್‌ ಫಾರ್ಮ್ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಕೂಡ ಅಲಭ್ಯವಾಗಿದ್ದು ಚೆನ್ನೈಗೆ ನುಂಗಲಾರದ ತುತ್ತಾಯಿತು.

ಹೀಗೆ ಬ್ಯಾಟಿಂಗ್ ಕ್ರಮಾಂಕ ವೀಕ್‌ ಆಗಿರುವಾಗ ಧೋನಿ ಕೂಡಲೇ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಉತ್ತಮ ಎಂಬ ಅಭಿಪ್ರಾಯ ಹೆಚ್ಚಾಗಿದೆ. ಹಾಗೇನಾದ್ರು ಆಗದೇ ಹೋದಲ್ಲಿ ಸಿಎಸ್‌ಕೆ ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ ಎಂದು ಬ್ರೆಟ್‌ ಲೀ ಎಚ್ಚರಿಸಿದ್ದಾರೆ.

ಆರ್‌ಸಿಬಿಯ ಈ ತಪ್ಪುಗಳನ್ನ ಒಪ್ಪಿಕೊಂಡ ಎಬಿ ಡಿವಿಲಿಯರ್ಸ್!ಆರ್‌ಸಿಬಿಯ ಈ ತಪ್ಪುಗಳನ್ನ ಒಪ್ಪಿಕೊಂಡ ಎಬಿ ಡಿವಿಲಿಯರ್ಸ್!

ಈ ಬಾರಿಯ ಐಪಿಎಲ್‌ ಟೂರ್ನಿಗೂ ಮುನ್ನ ಎಂಎಸ್‌ ಧೋನಿ 14 ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. 2019ರ ಜುಲೈನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಮ್‌ ಇಂಡಿಯಾ ಆಡಿದ ಸೆಮಿಫೈನಲ್‌ ಪಂದ್ಯವೇ ಧೋನಿಯ ಕಟ್ಟ ಕಡೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ನಂತರ ಅನಿರ್ದಿಷ್ಟಾವಧಿಯ ವಿರಾಮ ತೆಗೆದುಕೊಂಡಿದ್ದ ಕ್ಯಾಪ್ಟನ್‌ ಕೂಲ್‌, ಇದೇ ವರ್ಷ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

Story first published: Tuesday, September 29, 2020, 17:51 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X