ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಆಫರ್ ತಿರಸ್ಕರಿಸಿದ ಬಾಂಗ್ಲಾ ಕ್ರಿಕೆಟಿಗರು

Tamim Iqbal, Mahmudullah Decline Cpl 2020 Offer

ಕೊರೊನಾ ಭೀತಿಯ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚಾಲನೆ ದೊರೆತಿದೆ. ಈ ಮಧ್ಯೆ ಆಗಸ್ಟ್ ತಿಂಗಳಿನಿಂದ ಖ್ಯಾತ ಕ್ರಿಕೆಟ್ ಲೀಗ್ ಕೆರಿಬಿಯನ್ ಪ್ರೀಮಿಯರ್ ಲೀಗ್ ನಡೆಸಲು ಸಿದ್ಧತೆಯಾಗುತ್ತಿದೆ. ಆದರೆ ಈ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಿಪಿಎಲ್ ಫ್ರಾಂಚೈಸಿಗಳ ಆಫರ್‌ಅನ್ನು ಇಬ್ಬರು ಬಾಂಗ್ಲಾ ಕ್ರಿಕೆಟಿಗರು ತಿರಸ್ಕರಿಸಿರುವುದನ್ನು ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ನಡೆಸುವ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಇತ್ತೀಚೆಗೆ ಸಾಕಷ್ಟು ಯಶಸ್ಸನ್ನು ಕಾಣುತ್ತಿದೆ. ಸಿಪಿಎಲ್ 2020 ಕೊರೊನಾ ಭೀತಿಯ ಮಧ್ಯೆ ನಡೆಯುವ ಮೊದಲ ಪ್ರಮುಖ ಲೀಗ್‌ ಟೂರ್ನಮೆಂಟ್ ಆಗಲಿದೆ. ಆಗಸ್ಟ್‌ 18ರಿಂದ ಟ್ರಿನಿಡಾಡ್ & ಟೊಬ್ಯಾಗೋದಲ್ಲಿ ಸಿಪಿಎಲ್ ನಡೆಯಲಿದೆ.

ಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭ

ಹಾಗಾದರೆ ಕೆರಿಬಿಯನ್ ಪ್ರೀಮಿಯರ್ ಲೀಗ್ ತಿರಸ್ಕರಿಸಿದ ಆ ಇಬ್ಬರು ಆಟಗಾರರು ಯಾರು? ಯಾವ ಕಾರಣಕ್ಕೆ ಪ್ರಮುಖ ಟೂರ್ನಿಯಲ್ಲಿ ಬಾಂಗ್ಲಾ ಕ್ರಿಕೆಟಿಗರು ಪಾಲ್ಗೊಳ್ಳುತ್ತಿಲ್ಲ ಮುಂದೆ ಓದಿ..

ಮೊಹಮ್ಮದುಲ್ಲಾ ಮತ್ತು ತಮೀಮ್ ಇಕ್ಬಾಲ್

ಮೊಹಮ್ಮದುಲ್ಲಾ ಮತ್ತು ತಮೀಮ್ ಇಕ್ಬಾಲ್

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಟಗಾರರಾದ ಮೊಹಮ್ಮದುಲ್ಲಾ ಮತ್ತು ತಮಿಮ್ ಇಕ್ಬಾಲ್ ಕೆರಿಬಿಯನ್ ಪ್ರಿಮಿಯರ್ ಲೀಗ್ ಆಫರ್ ತಿರಸ್ಕರಿಸಿರುವ ಆಟಗಾರರಾಗಿದ್ದಾರೆ. ಇಬ್ಬರು ಆಟಗಾರರು ಬೇರೆ ಬೇರೆ ಕಾರಣಗಳನ್ನು ನೀಡಿ ಟೂರ್ನಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಕೊರೊನಾ ವೈರಸ್ ಕಾರಣ

ಕೊರೊನಾ ವೈರಸ್ ಕಾರಣ

ನಾನು ಸಿಪಿಎಲ್‌ನ ಒಂದು ಫ್ರಾಂಚೈಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಸನಿಹದಲ್ಲಿದ್ದೆ. ಆದರೆ ನನ್ನ ಕುಟುಂಬದ ಕಾಳಜಿ ನನಗೆ ಮುಖ್ಯ. ಕೊರೊನಾ ವೈರಸ್‌ನ ಇಂತಾ ಸಂದರ್ಭದಲ್ಲಿ ನಾನು ಪ್ರಯಾಣವನ್ನು ಮಾಡುವುದಕ್ಕೆ ಅವರು ಕೂಡ ಆತಂಕಿತರಾಗಿದ್ದಾರೆ. ನಾನು ಈ ಹಿಂದೆ ಕೂಡ ಸಿಪಿಎಲ್‌ನಲ್ಲಿ ಆಡಿದ್ದೇನೆ. ಅಲ್ಲಿನ ಅನುಭವವನ್ನು ನಾನು ಆನಂದಿಸಿದ್ದೇನೆ ಎಂದು ಮೊಹಮ್ಮದುಲ್ಲಾ ಹೇಳಿಕೆ ನೀಡಿದ್ದಾರೆ.

ತಮೀಮ್ ಇಕ್ಬಾಲ್ ನೀಡಿದ ಕಾರಣ

ತಮೀಮ್ ಇಕ್ಬಾಲ್ ನೀಡಿದ ಕಾರಣ

ಮತ್ತೊಂದೆಡೆ ಈ ಬಗ್ಗೆ ತಮಿಮ್ ಇಕ್ಬಾಲ್ ಕೂಡ ಪ್ರತಿಕ್ರಿಯಿಸಿದ್ದಾರೆ. ತಮೀಮ್ ಇಕ್ಬಾಲ್ ಸಿಪಿಎಲ್ ಟೂರ್ನಿಯನ್ನು ತಿರಸ್ಕರಿಸಲು ಬೇರೆಯದ್ದೇ ಕಾರಣವನ್ನು ನೀಡಿದ್ದಾರೆ. ಬಾಂಗ್ಲಾದೇಶ ಪ್ರಥಮದರ್ಜೆ ಕ್ರಿಕೆಟ್ ಜೊತೆಗೆ ಹೊಂದಾಣಿಕೆಯಾಗದ ಕಾರಣಕ್ಕೆ ತಿರಸ್ಕರಿಸಿರುವುದಾಗಿ ಹೇಳಿದ್ದಾರೆ. ಬಾಂಗ್ಲಾ ಪ್ರಥಮರ್ಜೆ ಕ್ರಿಕೆಟ್ ಆಗಸ್ಟ್‌ನಲ್ಲಿ ಆರಂಭವಾಗುವ ನಿರೀಕ್ಷೆಯಲ್ಲಿದ್ದಾರೆ.

ಇಬ್ಬರೂ ಈ ಹಿಂದೆ ಪಾಲ್ಗೊಂಡಿದ್ದರು

ಇಬ್ಬರೂ ಈ ಹಿಂದೆ ಪಾಲ್ಗೊಂಡಿದ್ದರು

ಮೊಹಮ್ಮದುಲ್ಲಾ ಹಾಗೂ ತಮೀಮ್ ಇಕ್ಬಾಲ್ ಈ ಹಿಂದಿನ ಆವೃತ್ತಿಯಲ್ಲೂ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಬಾರಿ ಇನ್ನಷ್ಟು ವಿದೇಶಿ ಆಟಗಾರರೊಂದಿಗೆ ಈ ಹಿಂದಿನ ಲೀಗ್ ಟೂರ್ನಿಗಿಂತ ಹೆಚ್ಚು ವರ್ಣರಂಜಿತವಾಗುವ ನಿರೀಕ್ಷೆಯಿದೆ.

Story first published: Thursday, July 16, 2020, 9:49 [IST]
Other articles published on Jul 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X