ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾ ತಂಡ ಪ್ರಕಟ: ತಂಡಕ್ಕೆ ಮರಳಿದ ತಮೀಮ್ ಇಕ್ಬಾಲ್

Tamim Iqbal Returns To Bangladesh Squad For Pakistan T20Is

ಬಾಂಗ್ಲಾದೇಶ ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಗೆ ಬಾಂಗ್ಲಾ ಹಿರಿಯ ಆಟಗಾರ ತಮೀಮ್ ಇಕ್ಬಾಲ್ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಜನವರಿ 24 ರಿಂದ ಟಿ20 ಸರಣಿ ಆರಂಭವಾಗಲಿದೆ.

ಬಾಂಗ್ಲಾದೇಶದ ಹಿರಿಯ ಆಟಗಾರ ಕಳೆದ ವರ್ಷದ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ವೈಯಕ್ತಿಕ ಕಾರಣವನ್ನು ನೀಡಿ ಭಾರತದ ವಿರುದ್ಧ ನವೆಂಬರ್‌ನಲ್ಲಿ ನಡೆದ ಸರಣಿಯಂದ ಹೊರಗುಳಿದಿದ್ದರು.

ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾಗೆ ಆರಂಭಿಕ ಆಘಾತ: live ಸ್ಕೋರ್ಭಾರತ vs ಆಸ್ಟ್ರೇಲಿಯಾ: ಆಸ್ಟ್ರೇಲಿಯಾಗೆ ಆರಂಭಿಕ ಆಘಾತ: live ಸ್ಕೋರ್

ಬಾಂಗ್ಲಾದೇಶದ ಪ್ರಮುಖ ಆಟಗಾರನಾಗಿರುವ ತಮೀಮ್ ಇಕ್ಬಾಲ್ ದಸಕಕ್ಕೂ ಹೆಚ್ಚು ಕಾಲ ಬಾಂಗ್ಲಾ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಮೂರೂ ಫಾರ್ಮೆಟ್‌ಗಳಲ್ಲಿ ಬಾಂಗ್ಲಾದೇಶ ಪರವಾಗಿ ಗರಿಷ್ಠ ರನ್ ದಾಖಲಿಸಿರುವ ಹೆಗ್ಗಳಿಕೆಗೂ ತಮೀಮ್ ಇಕ್ಬಾಲ್ ಪಾತ್ರರಾಗಿದ್ದಾರೆ.

ಬಾಂಗ್ಲಾದೇಶದ ವಿಕೆಟ್‌ ಕೀಪರ್ ಮುಷ್ಫಿಕರ್ ರಹೀಮ್ ಭದ್ರತಾ ಕಾರಣಗಳನ್ನು ನೀಡಿ ತಂಡದಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ನಿನ್ನೆಯೇ ಬಾಂಗ್ಲಾದೇಶ ಕ್ರಿಕೆಟ್‌ ಆಯ್ಕೆ ಸಮಿತಿ ಮುಖ್ಯಸ್ಥರು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಯನ್ನು ಕೊಟ್ಟಿದ್ದರು. ಬಲಗೈ ವೇಗಿ ರೂಬೆನ್ ಹುಸೈನ್ ಆರು ತಿಂಗಳ ಬಳಿಕ ಮತ್ತು ಬಾಂಗ್ಲಾ ದೇಶ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. 20 ವರ್ಷದ ಯುವ ವೇಗಿ ಹಸನ್ ಮಹ್ಮದ್ ತಂಡಕ್ಕೆ ಸೇರ್ಪಡೆಗೊಂಡಿರುವ ಹೊಸ ಆಟಗಾರ.

ಭಾರತ vs ಆಸ್ಟ್ರೇಲಿಯಾ: ಚಿನ್ನಸ್ವಾಮಿಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರಭಾರತ vs ಆಸ್ಟ್ರೇಲಿಯಾ: ಚಿನ್ನಸ್ವಾಮಿಯಲ್ಲಿ ಸೋಲು ಗೆಲುವಿನ ಲೆಕ್ಕಾಚಾರ

ಲಾಹೋರ್‌ನ ಗದ್ದಾಫಿ ಸ್ಟೇಡಿಯಮ್‌ನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮಧ್ಯೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಪಾಕಿಸ್ತಾನ ತಂಡ ಈ ಸರಣಿಗಾಗಿ ಈಗಾಗಕೇ ತನ್ನ ತಂಡವನ್ನು ಪ್ರಕಟಿಸಿದೆ.

ಬಾಂಗ್ಲಾದೇಶ ತಂಡ: ಮಹಮ್ಮದುಲ್ಲಾ (ಕ್ಯಾಪ್ಟನ್), ತಮೀಮ್ ಇಕ್ಬಾಲ್, ಸೌಮ್ಯಾ ಸರ್ಕಾರ್, ನೈಮ್ ಶೇಖ್, ನಜ್ಮುಲ್ ಹೊಸೈನ್, ಲಿಟಾನ್ ದಾಸ್, ಮೊಹಮ್ಮದ್ ಮಿಥುನ್, ಅಫಿಫ್ ಹೊಸೈನ್, ಮಹೆದಿ ಹಸನ್, ಅಮೀನುಲ್ ಇಸ್ಲಾಂ, ಮುಸ್ತಾಫಿಜುರ್ ರಹಮಾನ್, ಶಫಿಯುಲ್ ಇಸ್ಲಾಂ, ಅಲ್-ಅಮೀನ್ ಹೊಸೈನ್, ರುಬೆಲ್ ಹೊಸೈನ್, ಹಸನ್ ಮಹಮ್ಮದ್

Story first published: Sunday, January 19, 2020, 15:12 [IST]
Other articles published on Jan 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X