ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹೊಸ ರೂಪಾಂತರದ ಭಯ: ಭಾರತ 'A' ಕ್ರಿಕೆಟ್ ಸರಣಿ ಮುಂದುವರಿಕೆಗೆ ಮುಂದಾದ ಬಿಸಿಸಿಐ!

ದಕ್ಷಿಣ ಆಫ್ರಿಕಾದಲ್ಲಿ ಭಾರೀ ಆತಂಕ ಮೂಡಿಸಿರುವ ಕೋವಿಡ್-19 ಹೊಸ ರೂಪಾಂತರದ ಹೊರತಾಗಿಯೂ ಭಾರತ ಎ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನ ಮುಂದುವರಿಸಲು ನಿರ್ಧರಿಸಿದೆ. ನೆದರ್ಲೆಂಡ್ಸ್‌ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿಗಾಗಿ ದೇಶದಲ್ಲಿದೆ. ಆದ್ರೆ ಇತ್ತೀಚಿನ ಬೆಳವಣಿಗೆಯು ಸರಣಿ ಮುಂದುವರಿಕೆ ಮೇಲೆ ಕರಿಛಾಯೆ ಮೂಡಿಸಿದೆ.

ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಮುಂದಿನ ದಿನಗಳಲ್ಲಿ ಆಡಲಿದೆ. ಆದ್ರೆ ಕೋವಿಡ್-19 ಹೊಸ ರೂಪಾಂತರ B.1.1.529 ಜಗತ್ತಿಗೆ ಆಂತಕ ಮೂಡಿಸಿದ್ದು, ಕ್ರಿಕೆಟ್ ಸರಣಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದು ಉಭಯ ಬೋರ್ಡ್‌ಗಳ ನಡುವೆ ಇಕ್ಕಟ್ಟಿಗೆ ಸಿಲುಕಿಸಿದೆ.

ಭಾರತ ಎ ಸರಣಿ ಮುಂದುವರಿಕೆ

ಭಾರತ ಎ ಸರಣಿ ಮುಂದುವರಿಕೆ

ಪ್ರಸ್ತುತ ಈಗಾಗಲೇ ಭಾರತ ಎ ತಂಡವು ಬ್ಲೋಮ್‌ಫಾಂಟೈನ್‌ನಲ್ಲಿದ್ದು ಮೂರು ದೀರ್ಘಾವಧಿ ಸ್ವರೂಪದ ಪಂದ್ಯಗಳನ್ನು ಆಡುತ್ತಿದ್ದಾರೆ. ಬ್ಲೋಮ್‌ಫಾಂಟೈನ್‌ನಲ್ಲಿ ತಮ್ಮ ಮೊದಲ ನಾಲ್ಕು-ದಿನದ ಪಂದ್ಯವನ್ನು ಆಡುತ್ತಿದೆ. ಇದರ ನಡುವೆ ಭಾರತ ಹಿರಿಯ ತಂಡವು ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯ ನಂತರ ದಕ್ಷಿಣ ಆಫ್ರಿಕಾಕ್ಕೆ ಹಾರಲು ಸಿದ್ಧವಾಗಿದೆ. ಇದರ ನಡುವೆ ಭಾರತ ಎ ಸರಣಿ ಮುಂದುವರಿಸಲು ಉಭಯ ಬೋರ್ಡ್‌ಗಳು ನಿರ್ಧರಿಸಿವೆ.

ಬಿಸಿಸಿಐ ಜೊತೆ ನಿರಂತರ ಮಾತುಕತೆ

ಬಿಸಿಸಿಐ ಜೊತೆ ನಿರಂತರ ಮಾತುಕತೆ

ಕ್ರಿಕೆಟ್ ಸೌತ್ ಆಫ್ರಿಕಾ (CSA) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಭಾರತ ಎ ತಂಡವು ಹಿಂತಿರುಗದಿರಲು ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ, ಭಾರತೀಯ ಪುರುಷರ ಹಿರಿಯ ತಂಡವು ಮೂರು ಟೆಸ್ಟ್‌ಗಳು, ಮೂರು ಏಕದಿನ ಮತ್ತು ನಾಲ್ಕು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಪ್ರವಾಸಕ್ಕೂ ಮುನ್ನ, ಕ್ರಿಕೆಟ್ ಸೌತ್ ಆಫ್ರಿಕಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.

"ನಾವು ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದೇವೆ ಮತ್ತು ಈ ಹಂತದಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಯಾವುದೇ ಹಿಂಜರಿಕೆಯಿಲ್ಲ. ನಾವು ಸಹಜವಾಗಿ, ವೈರಸ್ ಹರಡುವಿಕೆಗೆ ಸಂಬಂಧಿಸಿದ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಬಿಸಿಸಿಐಗೆ ಮಾಹಿತಿ ನೀಡುತ್ತೇವೆ'' ಎಂದು ಸಿಎಸ್‌ಎ ಹೇಳಿದೆ.

ಮತ್ತೆ ಕ್ರಿಕೆಟ್‌ಗೆ ಕೊರೊನಾವೈರಸ್ ಗುಮ್ಮ: ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಕರಿಛಾಯೆ

ಟೀಂ ಇಂಡಿಯಾಗೆ ಸಂಪೂರ್ಣ ಸುರಕ್ಷತೆ ಒದಗಿಸುತ್ತೇವೆ: CSA

ಟೀಂ ಇಂಡಿಯಾಗೆ ಸಂಪೂರ್ಣ ಸುರಕ್ಷತೆ ಒದಗಿಸುತ್ತೇವೆ: CSA

'' ಎಲ್ಲಾ ಭೇಟಿ ನೀಡುವ ತಂಡಗಳು ಮತ್ತು ಪ್ರೋಟೀಸ್ ಆಟಗಾರರಿಗೆ ಕ್ರಿಕೆಟ್ ಆಡಲು ಸುರಕ್ಷಿತ ವಾತಾವರಣವನ್ನು ಒದಗಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು CSA ಬದ್ಧವಾಗಿರುತ್ತದೆ" ಎಂದು CSA ಮುಖ್ಯಸ್ಥ ಲಾಸನ್ ನೈಡೂ ಶುಕ್ರವಾರ, ನವೆಂಬರ್ 26 ರಂದು ಕ್ರಿಕ್‌ಬಝ್‌ಗೆ ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಕಡೆಗೆ ನೋಡುತ್ತಿರುವ ಬಿಸಿಸಿಐ

ಆರೋಗ್ಯ ಇಲಾಖೆಯ ಕಡೆಗೆ ನೋಡುತ್ತಿರುವ ಬಿಸಿಸಿಐ

ವೈರಸ್‌ನ ಹೊಸ ರೂಪಾಂತರವಾದ B.1.1529 ಅನ್ನು ಗುರುತಿಸಿದ ನಂತರ ದಕ್ಷಿಣ ಆಫ್ರಿಕಾದ ಎಲ್ಲಾ ರಾಜ್ಯಗಳಿಗೆ ಆರೋಗ್ಯ ಸಚಿವಾಲಯದ ಸಲಹೆಯ ಹೊರತಾಗಿಯೂ, ಬಿಸಿಸಿಐ ಕಾದು ನೋಡುವ ಆಯ್ಕೆ ಮಾಡಿದೆ. ಏಕೆಂದರೆ ಇದು ಗಂಭೀರವಾದ ಸಾರ್ವಜನಿಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ.

ಕ್ರಿಸ್‌ಗೇಲ್ ಬೀಳ್ಕೊಡುಗೆಗೆ ವೆಸ್ಟ್‌ ಇಂಡೀಸ್ ಕ್ರಿಕೆಟ್ ಬೋರ್ಡ್ ಯೋಜನೆ: ಜನವರಿಯಲ್ಲಿ ಕೊನೆಯ ಪಂದ್ಯ!

ಹೊಸ ಕೋವಿಡ್ ವೈರಸ್ ಇರುವ ಸ್ಥಳ 1000 ಕಿ.ಮೀ ದೂರದಲ್ಲಿದೆ!

ಹೊಸ ಕೋವಿಡ್ ವೈರಸ್ ಇರುವ ಸ್ಥಳ 1000 ಕಿ.ಮೀ ದೂರದಲ್ಲಿದೆ!

ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ B.1.1.529 ಎಂದು ಕರೆಯಲ್ಪಡುವ ಹೊಸ ಕೋವಿಡ್- 19 ರೂಪಾಂತರವು ದೇಶದ ಉತ್ತರ ಭಾಗದಲ್ಲಿ ಕಂಡುಬಂದಿದೆ. ಭಾರತ ಎ ಸರಣಿ ನಡೆಯುತ್ತಿರುವ ಬ್ಲೋಮ್‌ಫಾಂಟೈನ್ ದಕ್ಷಿಣದಲ್ಲಿದೆ ಎಂದು ಇಂಡಿಯಾ ಎ ತಂಡದ ನಿರ್ವಹಣೆಗೆ ತಿಳಿಸಲಾಗಿದೆ.

"ಎರಡು ಸ್ಥಳಗಳ ನಡುವಿನ ಅಂತರವು 1000 ಮೈಲುಗಳಿಗಿಂತ ಹೆಚ್ಚು ಮತ್ತು ತಕ್ಷಣದ ಆರೋಗ್ಯದ ಅಪಾಯವಿಲ್ಲ ಎಂದು ನಮಗೆ ತಿಳಿಸಲಾಗಿದೆ. ನಾವು ಸಿಎಸ್‌ಎ ಅಧಿಕಾರಿಗಳು ಮತ್ತು ವೈದ್ಯಕೀಯ ತಂಡದೊಂದಿಗೆ ಚರ್ಚೆ ನಡೆಸಿದ್ದೇವೆ. ತಂಡದ ಹೋಟೆಲ್ ಮತ್ತು ಮೈದಾನದ ಪ್ರದೇಶವನ್ನು ಸ್ಯಾನಿಟೈಸ್ ಮಾಡಲಾಗಿದೆ ಮತ್ತು ನಾವು ಬಯೋ ಬಬಲ್‌ನಲ್ಲಿದ್ದೇವೆ. ಈ ಹಂತದಲ್ಲಿ ನಾವು ಮುಂದುವರಿಯಲು ನಿರ್ಧರಿಸಿದ್ದೇವೆ'' ಎಂದು ಭಾರತದ ಎ ತಂಡದ ಮ್ಯಾನೇಜರ್ ಅನಿಲ್ ಪಟೇಲ್ ತಿಳಿಸಿದ್ದಾರೆ.

ಭಾರತ ಎ ಪ್ರವಾಸದ ಮೊದಲ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿದ್ದು, ಕೊನೆಯ ದಿನದ ಆಟವು ಮಳೆಯಿಂದ ಕೊಚ್ಚಿಹೋಯಿತು. ಇತರ ಎರಡು ಪಂದ್ಯಗಳು ನವೆಂಬರ್ 29 ಮತ್ತು ಡಿಸೆಂಬರ್ 6 ರಂದು ಪ್ರಾರಂಭವಾಗಲಿದೆ. ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸವು ಡಿಸೆಂಬರ್ 17 ರಂದು ಪ್ರಾರಂಭವಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Saturday, November 27, 2021, 11:07 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X