ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಕಿವೀಸ್ ಟೆಸ್ಟ್: ಟೀಂ ಇಂಡಿಯಾದ ಕೆಟ್ಟ ಇತಿಹಾಸ ಮರುಕಳಿಸದಿರಲಿ

ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ವೆಲ್ಲಿಂಗ್ಟನ್, ಬೇಸಿನ್ ರಿವರ್ಸ್ ಮೈದಾನದಲ್ಲಿ ಮೊದಲ ಟೆಸ್ಟ್ ಈಗ ಚಾಲ್ತಿಯಲ್ಲಿದೆ. ಎರಡನೇ ದಿನದಾಟಕ್ಕೆ ನ್ಯೂಜಿಲ್ಯಾಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 216 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡು 51 ರನ್ ಗಳ ಮುನ್ನಡೆ ಸಾಧಿಸಿದೆ.

ಟಿ20 ಸರಣಿಯಲ್ಲಿ ಪ್ರಚಂಡ ಫಾರಂನಲ್ಲಿದ್ದ ಟೀಂ ಇಂಡಿಯಾ ಆ ನಂತರ ಸೊರಗಿದಂತೆ ಕಾಣುತ್ತಿದೆ. ಏಕದಿನ ಸರಣಿಯಲ್ಲಿ ಸೋತಿದ್ದು ಒಂದೆಡೆಯಾದರೆ, ಮೊದಲ ಟೆಸ್ಟ್ ನಲ್ಲಿ ಕೇವಲ 165ರನ್ನಿಗೆ ಆಲೌಟ್ ಆಗಿದೆ.

ನ್ಯೂಜಿಲ್ಯಾಂಡ್ ಬೌಲರ್ ಗಳ ವಿರುದ್ದ ಸಟೆದು ನಿಲ್ಲಲು ವಿಫಲರಾದ ಟೀಂ ಇಂಡಿಯಾ ಆಟಗಾರರ ಪೈಕಿ, ಕೊಂಚ ಪ್ರತಿರೋಧ ತೋರಿದವರೆಂದರೆ, ಅಜಿಂಕ್ಯಾ ರಹಾನೆ, ಮಯಾಂಕ್ ಅಗರವಾಲ್ ಮತ್ತು ಮೊಹಮ್ಮದ್ ಶಮಿ.

52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!52 ವರ್ಷಗಳ ಹಿಂದಿನ ಜಯ ಮತ್ತೆ ದಾಖಲಿಸಲಿದೆಯಾ ಟೀಮ್ ಇಂಡಿಯಾ?!

ಇತ್ತೀಚಿನ ದಿನಗಳಲ್ಲಿ ಭಾರತ ಇಷ್ಟು ಕಮ್ಮಿ ಮೊತ್ತಕ್ಕೆ ಆಲೌಟ್ ಉದಾಹರಣೆಗಳು ಕಮ್ಮಿ. ಪಂದ್ಯದ ಫಲಿತಾಂಶ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಮೇಲೆ ಬೀರುವುದರಿಂದ ಪ್ರತೀ ಪಂದ್ಯವೂ ನಿರ್ಣಾಯಕ. ಟೀಂ ಇಂಡಿಯಾದ ಕೆಟ್ಟ ಇತಿಹಾಸ ಮರುಕಳಿಸದಿರಲಿ, ಮುಂದೆ ಓದಿ..

ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ

ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ

ವೆಲ್ಲಿಂಗ್ಟನ್‌ ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 165 ರನ್‌ ಗಳಿಗೆ ಆಲೌಟ್ ಆಗಿದೆ. ವಿದೇಶ ನೆಲದಲ್ಲಿ, ಭಾರತದ ಟೆಸ್ಟ್ ಇತಿಹಾಸವನ್ನೊಮ್ಮೆ ಅವಲೋಕಿಸುವುದಾದರೆ 165 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ಔಟ್ ಆದರೆ, ಆ ಟೆಸ್ಟ್ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಪಡೆ, ಎರಡನೇ ಇನ್ನಿಂಗ್ಸ್ ನಲ್ಲಿ ಯಾವ ಪ್ರತಿರೋಧ ತೋರಲಿದೆ ಎನ್ನುವುದನ್ನು ನೋಡಬೇಕಿದೆ. ಒಟ್ಟಾರೆ ಟೀಂ ಇಂಡಿಯಾದ ಸರಾಸರಿ ಹೀಗಿದೆ:

ಭಾರತ ಸೋತ ಉದಾಹರಣೆಗಳು ಶೇ. 80

ಭಾರತ ಸೋತ ಉದಾಹರಣೆಗಳು ಶೇ. 80

ಕಡಿಮೆ ರನ್ನಿಗೆ ಆಲೌಟ್ ಆದ ನಂತರ, ಎರಡನೇ ಇನ್ನಿಂಗ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆದ್ದ ಉದಾಹರಣೆ ಕೇವಲ ಮೂರೇ ಟೆಸ್ಟ್ ಗಳು, ಅದೆಲ್ಲಾ ಸ್ವದೇಶದಲ್ಲೇ ಹೊರತು, ವಿದೇಶದಲ್ಲಿ ಅಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಇಂತಹ ಸಂದರ್ಭದಲ್ಲಿ ಭಾರತ ಸೋತ ಉದಾಹರಣೆಗಳು ಶೇ. 80. (ಚಿತ್ರ:ಪಿಟಿಐ)

ಭಾರತ vs ಕೀವಿಸ್ ಟೆಸ್ಟ್: ಬ್ಯಾಟ್ಸ್‌ಮನ್‌ಗಳಿಗೆ ಎದುರಾಗಲಿದೆ ನಿಜವಾದ ಅಗ್ನಿಪರೀಕ್ಷೆ

ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದು 16 ಪಂದ್ಯಗಳನ್ನು

ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದು 16 ಪಂದ್ಯಗಳನ್ನು

ಪ್ರಸಕ್ತ ಟೆಸ್ಟ್ ಪಂದ್ಯವನ್ನು ಹೊರತು ಪಡಿಸಿ, ಕಳೆದ 59 ಟೆಸ್ಟ್ ಗಳ ಸರಾಸರಿಯನ್ನು (165 ರನ್‌ ಗಿಂತ ಕಮ್ಮಿ ಮೊತ್ತಕ್ಕೆ ಔಟಾದಾಗ) ನೋಡಿದಾಗ, ಭಾರತ ಡ್ರಾ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದು ಕೇವಲ ಹದಿನಾರು ಪಂದ್ಯಗಳನ್ನು. ಇನ್ನು, ವಿದೇಶ ನೆಲದಲ್ಲಿ ಆಡಿದ 29 ಪಂದ್ಯಗಳ ಪೈಕಿ, 23 ಪಂದ್ಯವನ್ನು ಸೋತಿದ್ದರೆ, 6 ಪಂದ್ಯಗಳು ಡ್ರಾ ಆಗಿದ್ದವು.

ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಇನ್ನೂ ಗಟ್ಟಿಯಾಗುತ್ತದೆ

ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಇನ್ನೂ ಗಟ್ಟಿಯಾಗುತ್ತದೆ

ಒಟ್ಟಾರೆಯಾಗಿ ಭಾರತದ ಈ ಹಿಂದಿನ ಟ್ರ್ಯಾಕ್ ರೆಕಾರ್ಡ್ ಗಮನಿಸಿದಾಗ, ಮೊದಲ ಟೆಸ್ಟ್ ಪಂದ್ಯವನ್ನು ಭಾರತೆ ಗೆಲ್ಲುವ ಸಾಧ್ಯತೆ ಶೇ. 5, ಡ್ರಾ ಮಾಡಿಕೊಳ್ಳುವ ಸಾಧ್ಯತೆ ಶೇ. 26.67. ಇವೆಲ್ಲಾ, ಹಳೆಯ ರೆಕಾರ್ಡ್ ಅನ್ನು ಮೀರಿ, ವಿರಾಟ್ ಕೊಹ್ಲಿ ಪಡೆ, ವೆಲ್ಲಿಂಗ್ಟನ್ ಟೆಸ್ಟ್ ಗೆದ್ದಿದ್ದೇ ಆದಲ್ಲಿ, ಇಲ್ಲೂ ಒಂದು ದಾಖಲೆ ಬರೆದಂತಾಗುತ್ತದೆ. ಜೊತೆಗೆ, ಐಸಿಸಿ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಇನ್ನೂ ಗಟ್ಟಿಯಾಗುತ್ತದೆ.

Story first published: Saturday, February 22, 2020, 15:42 [IST]
Other articles published on Feb 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X