ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ನೆಲದಲ್ಲಿ ಭಾರತ ಸೋಲುತ್ತೆ ಎಂದು ಬೆಟ್ ಕಟ್ಟಲಾರೆ: ಮೈಕಲ್ ವಾನ್

Team India best team in the world says Michael Vaughan

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರವೇ ಸಾಕಷ್ಟು ಹೇಳಿಕೆಗಳನ್ನು ನೀಡಿಕೊಂಡು ಸುದ್ದಿಯಲ್ಲಿರುತ್ತಿದ್ದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಸಂದರ್ಭದಲ್ಲೂ ಭಾರೀ ಚರ್ಚೆಗೆ ಕಾರಣರಾಗಿದ್ದರು. ಪಿಚ್ ವಿರುದ್ಧ ಟೀಕೆ ಸೇರಿದಂತೆ ನಿತ್ಯವೂ ಒಂದಲ್ಲಾ ಒಂದು ಹೇಳಿಕೆಯ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆಣಕುವ ಪ್ರಯತ್ನ ಮಾಡುತ್ತಿದ್ದರು. ಆದರೆ ಈಗ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿದ್ದು ಭಾರತ ತಂಡದ ಪ್ರದರ್ಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

"ಭಾರತ ನನ್ನ ಪ್ರಕಾರ ವಿಶ್ವದ ಅತ್ಯುತ್ತಮ ತಂಡವಾಗಿದೆ. 2021ರಲ್ಲಿ ನೀವು ಗಮನಿಸಿದರೆ ಅವರು ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸಿದರು. ಇಂಗ್ಲೆಂಡ್ ತಂಡವನ್ನು 3-1 ಅಂತರದಿಂದ ಮಣಿಸಿದ್ದಾರೆ. ಈ ಬಾರಿ ಭಾರತದಲ್ಲಿಯೇ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಅದರಲ್ಲಿಯೂ ಗೆಲ್ಲಲು ಭಾರತವೇ ಫೇವರೀಟ್ ತಂಡವಾಗಿದೆ" ಎಂದಿದ್ದಾರೆ ಮೈಕಲ್ ವಾನ್.

ಪೂಜಾರ, ಅಜಿಂಕ್ಯ, ಇಶಾಂತ್ ಹಾಗೂ ನನಗೆ ಇದು ವಿಶ್ವಕಪ್ ಇದ್ದಂತೆ: WTC ಫೈನಲ್ ಬಗ್ಗೆ ಅಶ್ವಿನ್ ಹೇಳಿಕೆಪೂಜಾರ, ಅಜಿಂಕ್ಯ, ಇಶಾಂತ್ ಹಾಗೂ ನನಗೆ ಇದು ವಿಶ್ವಕಪ್ ಇದ್ದಂತೆ: WTC ಫೈನಲ್ ಬಗ್ಗೆ ಅಶ್ವಿನ್ ಹೇಳಿಕೆ

ಭಾರತ ಸೋಲತ್ತೆ ಎಂದು ಬೆಟ್ ಕಟ್ಟಲ್ಲ!

ಭಾರತ ಸೋಲತ್ತೆ ಎಂದು ಬೆಟ್ ಕಟ್ಟಲ್ಲ!

"ಮುಂದಿನ ಕೆಲ ತಿಂಗಳುಗಳಲ್ಲಿ ಅವರು ಇಂಗ್ಲೆಂಡ್‌ಗೆ ಬರಲಿದ್ದು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಳ್ಗೊಳ್ಳಲಿದ್ದಾರೆ. ಚೆಂಡು ಸುತ್ತಲೂ ಚಲನೆಯಲ್ಲಿರುವ ತವರಿನ ವಾತಾವರಣದಲ್ಲಿ ಅವರು ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ... ಭಾರತ ಇಂಗ್ಲೆಂಡ್‌ಗೆ ಬಂದು ಸೋಲು ಕಾಣುತ್ತದೆ ಎಂದು ನಾನು ಬೆಟ್ ಕಟ್ಟುವುದಿಲ್ಲ. ಯಾಕೆಂದರೆ ಅವರ ಬಳಿ ಅದಕ್ಕೆ ಬೇಕಾದ ಸಮರ್ಥ್ಯವಿದೆ" ಎಂದಿದ್ದಾರೆ ಮೈಕಲ್ ವಾನ್.

ಈ ಯುಗದ ತಂಡವಾಗಲಿದೆ

ಈ ಯುಗದ ತಂಡವಾಗಲಿದೆ

"ಅವರು ಇಂಗ್ಲೆಂಡ್‌ಗೆ ಬಂದು ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ ನನ್ನ ಪ್ರಕಾರ ಅವರ ತಂಡ ಈ ಯುಗದ ತಂಡವೆನಿಸಲಿದೆ. ಅವರ ಬಳಿ ಸಾಕಷ್ಟು ಸಾಮರ್ಥ್ಯವಿದೆ. ಅವರ ಬಳಿ ವೇಗವಿದೆ, ಕೌಶಲ್ಯವಿದೆ, ಸ್ಪಿನ್ನರ್‌ಗಳು ಇದ್ದಾರೆ, ವಿರಾಟ್ ಕೊಹ್ಲಿ ಇದ್ದಾರೆ. ಅವರದ್ದು ಪ್ರಚಂಡವಾದ ತಂಡ" ಎಂದು ಮೈಕಲ್ ವಾನ್ ಟೀಮ್ ಇಂಡಿಯಾವನ್ನು ಮುಕ್ತಕಂಠದಿಂದ ಬಿಬಿಸಿ 5 ಲೈವ್ ಸ್ಪೋರ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೊಗಳಿದ್ದಾರೆ.

ಭಾರತದ ಅದ್ಭುತ ಪ್ರದರ್ಶನ

ಭಾರತದ ಅದ್ಭುತ ಪ್ರದರ್ಶನ

ಭಾರತ ತವರಿನಲ್ಲಿ ನಡೆದ 13 ಸರಣಿಗಳಲ್ಲಿ ಸತತವಾಗಿ ಗೆಲುವು ಕಂಡಿದೆ. ಇದು ಕೂಡ ಜೂನ್‌ನಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸ್ಥಾನವನ್ನು ಪಡೆಯಲಿ ಕಾರಣವಾಗಿದೆ. ಕಳೆದ ಎರಡು ಪಂದ್ಯಗಳನ್ನು ಭಾರತ ಐದು ದಿನಗಳಲ್ಲಿ ಗೆಲುವು ಸಾಧಿಸಿದೆ. ಸಾಮನ್ಯವಾಗಿ ಒಂದು ಪಂದ್ಯ ನಡೆಯುವ ಕಾಲಾವಧಿ ಇದಾಗಿದೆ. ಇದು ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವಂತಿದೆ.

Story first published: Sunday, March 7, 2021, 11:55 [IST]
Other articles published on Mar 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X