ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India Tour Bangladesh: ತರಬೇತಿ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್

Team India Captain Rohit Sharma And KL Rahul Started Practice For Bangladesh Tour

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿ ನಿರಾಸೆ ಅನುಭವಿಸಿದ ನಂತರ, ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಎರಡು ವಾರಗಳ ವಿಶ್ರಾಂತಿ ಪಡೆದಿದ್ದರು.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಅನೇಕ ಯುವ ಕ್ರಿಕೆಟಿಗರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದಿದ್ದರು. ಸದ್ಯ, ನ್ಯೂಜಿಲೆಂಡ್ ವಿರುದ್ಧ ಭಾರತ ಎರಡು ಏಕದಿನ ಪಂದ್ಯಗಳನ್ನು ಆಡಲಿದೆ.

ಅದಾದ ನಂತರ, ಭಾರತ ತನ್ನ ಮುಂದಿನ ಸರಣಿಯನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದ್ದು, ಹಿರಿಯ ಆಟಗಾರರು ತಂಡಕ್ಕೆ ಮರಳಲಿದ್ದಾರೆ. ಎರಡು ವಾರಗಳ ವಿಶ್ರಾಂತಿಯ ನಂತರ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಮುಂಬೈನ ಬಿಕೆಸಿ ಕಾಂಪ್ಲೆಕ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ಫಿಫಾ ವಿಶ್ವಕಪ್: ಟ್ಯುನಿಸಿಯಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ: ವಿಶ್ವಕಪ್ ಕನಸು ಜೀವಂತಫಿಫಾ ವಿಶ್ವಕಪ್: ಟ್ಯುನಿಸಿಯಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ: ವಿಶ್ವಕಪ್ ಕನಸು ಜೀವಂತ

ಭಾರತ ತಂಡ ಡಿಸೆಂಬರ್ 1ರಂದು ಢಾಕಾಗೆ ಪ್ರಯಾಣ ಮಾಡಲಿದೆ. ಅಲ್ಲಿ ಭಾರತ 3 ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಸೋಮವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಮುಂಬೈನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

15 ದಿನಗಳ ಕಾಲ ವಿಶ್ರಾಂತಿ

15 ದಿನಗಳ ಕಾಲ ವಿಶ್ರಾಂತಿ

ಟಿ20 ವಿಶ್ವಕಪ್ ಅಭಿಯಾನ ಮುಕ್ತಾಯದ ನಂತರ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಸರಣಿಯಿಂದ ವಿಶ್ರಾಂತಿ ಪಡೆದರು. ರೋಹಿತ್ ಶರ್ಮಾ ಮುಂಬೈನಲ್ಲಿ ತಮ್ಮ ಕುಟುಂಬದೊಂದಿದೆ ಕಾಲ ಕಳೆದರು. ಕೆಎಲ್ ರಾಹುಲ್ ತಮ್ಮ ಮದುವೆಗಾಗಿ ಒಂದಷ್ಟು ತಯಾರಿಗಳನ್ನು ಮಾಡಿಕೊಂಡಿದ್ದರು. ಮಾತ್ರವಲ್ಲದೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ವಿರಾಟ್ ಕೊಹ್ಲಿ ಕೂಡ ಈ ವಿಶ್ರಾಂತಿಯ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಟ್ಟಿದ್ದರು. ಪತ್ನಿ ಅನುಷ್ಕಾ ಮತ್ತು ಮಗಳ ಜೊತೆ ಕಾಲ ಕಳೆದಿದ್ದಾರೆ.

ಕೋಚ್ ದ್ರಾವಿಡ್ ಮತ್ತು ಸಿಬ್ಬಂದಿಗೆ ಕೂಡ ವಿಶ್ರಾಂತಿ

ಕೋಚ್ ದ್ರಾವಿಡ್ ಮತ್ತು ಸಿಬ್ಬಂದಿಗೆ ಕೂಡ ವಿಶ್ರಾಂತಿ

ವಿಶ್ವಕಪ್ ತಯಾರಿಗಾಗಿ ಸಾಕಷ್ಟು ಶ್ರಮ ಹಾಕಿದ್ದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿ ಪರಸ್ ಮಾಂಬ್ರೆ ಮತ್ತು ವಿಕ್ರಮ್ ರಾಥೋರ್ ಕೂಡ ವಿಶ್ರಾಂತಿ ಪಡೆದಿದ್ದರು. ಡಿಸೆಂಬರ್ 1ರಂದು ಇವರು ತಂಡವನ್ನು ಸೇರಿಕೊಳ್ಳಲಿದ್ದು ಢಾಕಾಗೆ ಪ್ರಯಾಣಿಸಲಿದ್ದಾರೆ.

ಭಾರತ ತಂಡ ಢಾಕಾಗೆ ಪ್ರಯಾಣಿಸುವ ಮೊದಲು ಕೋಲ್ಕತ್ತಾದಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ತಂಡ ಈಗ ಢಾಕಾಗೆ ನೇರವಾಗಿ ತೆರಳಲಿದ್ದು, ಅಲ್ಲೇ ಅಭ್ಯಾಸ ಮಾಡಲು ನಿರ್ಧರಿಸಿದೆ.

ನ್ಯೂಜಿಲೆಂಡ್‌ನಿಂದ ಢಾಕಾಗೆ ಬರಲಿದೆ ಟೀಂ ಇಂಡಿಯಾ

ನ್ಯೂಜಿಲೆಂಡ್‌ನಿಂದ ಢಾಕಾಗೆ ಬರಲಿದೆ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ಇನ್ನೂ ವಿಶ್ರಾಂತಿ ಪಡೆಯುತ್ತಿದ್ದು, ಸೋಮವಾರದಿಂದ ಅಭ್ಯಾಸ ಮಾಡಲಿದ್ದಾರೆ. ನ್ಯೂಜಿಲೆಂಡ್‌ನಲ್ಲಿರುವ ಇತರೆ ಆಟಗಾರರು, ಸರಣಿ ಮುಕ್ತಾಯವಾದ ನಂತರ ಅಲ್ಲಿಂದ ನೇರವಾಗಿ ಢಾಕಾಗೆ ಪ್ರಯಾಣ ಮಾಡಲಿದ್ದಾರೆ.

ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಢಾಕಾದಲ್ಲಿ ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರು ಡಿಸೆಂಬರ್ 1 ರಂದು ಕ್ರೈಸ್ಟ್‌ಚರ್ಚ್‌ನಿಂದ ವಿಮಾನದಲ್ಲಿ ಪ್ರಯಾಣ ಮಾಡಲಿದ್ದಾರೆ. ನ್ಯೂಜಿಲೆಂಡ್‌ನಲ್ಲಿರುವ ಆಟಗಾರರು ಢಾಕಾದಲ್ಲಿ ಅಭ್ಯಾಸವನ್ನು ಪುನರಾರಂಭಿಸುವ ಮೊದಲು 2 ದಿನಗಳ ವಿರಾಮವನ್ನು ಪಡೆಯುತ್ತಾರೆ.

ಏಕದಿನ ಮತ್ತು ಟೆಸ್ಟ್ ಸರಣಿಗೆ ಟೀಂ ಇಂಡಿಯಾ

ಏಕದಿನ ಮತ್ತು ಟೆಸ್ಟ್ ಸರಣಿಗೆ ಟೀಂ ಇಂಡಿಯಾ

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್, ಇಶಾನ್ ಕಿಶನ್, ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಸ್ ಭರತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

Story first published: Saturday, November 26, 2022, 21:56 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X