ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡವನ್ನು ಮುನ್ನಡೆಸಲು ಹಾಗೂ ಉತ್ತಮ ಆಟ ಪ್ರದರ್ಶಿಸಲು ಕೊಹ್ಲಿ ಉತ್ಸುಕರಾಗಿರುತ್ತಾರೆ: ಜೋಸ್ ಬಟ್ಲರ್

team India captain Virat Kohli hungry lead on field says Jos Buttler

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೆ ಮೈದಾನಕ್ಕೆ ಇಳಿದು ಇಂಗ್ಲಂಡ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಲು ಕಾತುರರಾಗಿರುತ್ತಾರೆ ಎಂದು ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 5 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದ ಹಿನ್ನೆಲೆಯಲ್ಲಿ ಅವರ ಪ್ರತಿಕ್ರಿಯಿಸಿದರು.

"ವಿರಾಟ್ ಕೊಹ್ಲಿ ಕೆಲ ಸಮಯಗಳ ವಿರಾಮದ ಬಳಿಕ ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ. ಹೀಗಾಗಿ ತಂಡವನ್ನು ಮುನ್ನಡೆಸಲು ಹಾಗೂ ಉತ್ತಮ ಪ್ರದರ್ಶಿವನ್ನು ನೀಡುವ ಹಸಿವಿನಲ್ಲಿರುತ್ತಾರೆ. ಹಾಗಾಗಿ ಇದೊಂದು ಶ್ರೇಷ್ಠವಾದ ಸವಾಲಾಗಿರಲಿದೆ" ಎಂದು ಜೋಸ್ ಬಟ್ಲರ್ ಶನಿವಾರ ನಡೆದ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ICC Test Rankings: ಟಾಪ್ 10ನಲ್ಲಿ ಮೂವರು ಭಾರತೀಯರಿಗೆ ಸ್ಥಾನICC Test Rankings: ಟಾಪ್ 10ನಲ್ಲಿ ಮೂವರು ಭಾರತೀಯರಿಗೆ ಸ್ಥಾನ

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಭರ್ಜರಿಯಾಗಿ ಗೆದ್ದ ಬಗ್ಗೆಯೂ ಜೋಸ್ ಬಟ್ಲರ್ ಪ್ರತಿಕ್ರಿಯಿಸಿದ್ದಾರೆ. "ಆಸ್ಟ್ರೇಲಿಯಾ ವಿರುದ್ಧದ ಸರಣಿ ಖಂಡಿತವಾಗಿಯೂ ಟೀಮ್ ಇಂಡಿಯಾದಲ್ಲಿರುವ ಸಾಮರ್ಥ್ಯ ಹಾಗೂ ಆಳವನ್ನು ಜಗತ್ತಿಗೆ ತೋರಿಸಿದೆ. ಮೊದಲ ಟೆಸ್ಟ್‌ನ ಬಳಿಕ ವಿರಾಟ್ ಕೊಹ್ಲಿಯ ಅಲಭ್ಯತೆಯಲ್ಲಿ, ಹಲವಾರು ಗಾಯಗಳ ಮಧ್ಯೆ, ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲಿ ಸೋಲಿಸುವುದು ಅದ್ಭುತವಾದ ಸಾಮರ್ಥ್ಯ ಹಾಗೂ ಭಾರತೀಯ ಕ್ರಿಕೆಟ್‌ನಲ್ಲಿರುವ ಸ್ಪರ್ಧೆಯನ್ನು ತೋರಿಸುತ್ತದೆ" ಎಂದು ಬಟ್ಲರ್ ಹೇಳಿದ್ದಾರೆ.

87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ನಡೆಯುತ್ತಿಲ್ಲ!87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ನಡೆಯುತ್ತಿಲ್ಲ!

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ಪಿತೃತ್ವದ ರಜೆಯಲ್ಲಿ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮರಳಿರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದಲ್ಲಿ ಮುಖಾಮುಖಿಯಾಗಲಿದೆ. ಸದ್ಯ ಎರಡು ತಂಡಗಳ ಆಟಗಾರರು ಚೆನ್ನೈಗೆ ತಲುಪಿದ್ದು ಸದ್ಯ ಹೋಟೆಲ್ ಕ್ವಾರಂಟೈನ್ ಅವಧಿ ಪೂರೈಸುತ್ತಿದ್ದಾರೆ.

Story first published: Sunday, January 31, 2021, 11:56 [IST]
Other articles published on Jan 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X