ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾದ, ವಿರಾಟ್, ಸಚಿನ್, ಕಪಿಲ್‌ದೇವ್

Team India captain Virat Kohli named Wisden Almanack’s ODI cricketer of the 2010s

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಜನ್ಮ ತಾಳಿ 50 ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ಡನ್ ಅಲ್ಮನಾಕ್ಸ್ ದಶಕದ ಆಟಗಾರರ ಏಕದಿನ ಆಟಗಾರರ ಪಟ್ಟಿಯನ್ನು ಘೋಷಿಸಿದೆ. 1971ರಿಂದ 2021ರ ಅವಧಿಯಲ್ಲಿ ಪ್ರತಿ ದಶಕದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ದಶಕದಲ್ಲಿ ಓರ್ವ ಆಟಗಾರನನ್ನು ವಿಸ್ಡನ್ ಅಲ್ಮನಾಕ್ಸ್ ಘೋಷಿಸಿದೆ.

ಐಪಿಎಲ್ 14ನೇ ಆವೃತ್ತಿಯ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆಗೆ ಈ ಪಟ್ಟಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2010ರ ದಶಕದಲ್ಲಿ ಮಾಡಿದ ಸಾಧನೆಗೆ ವಿರಾಟ್ ಕೊಹ್ಲಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 10 ವರ್ಷಗಳ ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 11,000 ರನ್‌ಗಳಿಸಿದ್ದಾರೆ. 60ಕ್ಕಿಂತ ಅಧಿಕ ಸರಾಸರಿಯಲ್ಲಿ 42 ಶತಕಗಳಿಸಿದ್ದಾರೆ. 2011ರಲ್ಲಿ ವಿಶ್ವಕಪ್ ಗೆಲುವು ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿದ್ದರು.

ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್‌ಸಿಬಿ!

ಮುತ್ತಯ್ಯ ಮುರಳೀಧರನ್

ಮುತ್ತಯ್ಯ ಮುರಳೀಧರನ್

ಇನ್ನು 2000ನೇ ದಶಕದ ಪ್ರಶಸ್ತಿಗೆ ಶ್ರೀಲಂಕಾ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಭಾಗಿಯಾಗಿದ್ದಾರೆ. ಅವರು ಈ ಒಂದು ದಶಕದ ಅವಧಿಯಲ್ಲಿ 335 ವಿಕೆಟ್ ಕಬಳಿಸಿದ್ದಾರೆ. ಇದು ಯಾವುದೇ ಬೌಲರ್‌ಗೆ ಹೋಲಿಸಿದರೆ ಅತಿ ಹೆಚ್ಚು.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್

1990ರ ದಶಕದ ಸಾಧನೆಗೆ ದಶಕದ ಆಟಗಾರ ಪ್ರಶಸ್ತಿಯನ್ನು ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಪಡೆದುಕೊಂಡಿದ್ದಾರೆ. 1998ರಲ್ಲಿ ಸಚಿನ್ ತೆಂಡೂಲ್ಕರ್ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 9 ಏಕದಿನ ಶತಕವನ್ನು ಬಾರಿಸಿ ದಾಖಲೆ ಸಹಿತ ಶ್ರೇಷ್ಠ ಪ್ರದರ್ಶನವನ್ನು ಈ ಅವಧಿಯಲ್ಲಿ ಸಚಿನ್ ನೀಡಿದ್ದರು.

ಕಪಿಲ್ ದೇವ್

ಕಪಿಲ್ ದೇವ್

1980ರ ದಶಕದ ಸಾಧನೆಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್‌ಗೆ ಈ ಪ್ರಶಸ್ತಿ ಸಂದಿದೆ. 1983ರ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಿಸುವುದರ ಜೊತೆಗೆ ವೈಯಕ್ತಿಕ ಪ್ರದರ್ಶನವೂ ಶ್ರೇಷ್ಠ ಮಟ್ಟದಲ್ಲಿತ್ತು. ಈ ದಶಕದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸುವುದರ ಜೊತೆಗೆ 1000 ರನ್‌ಗೂ ಅಧಿಕ ರನ್‌ಗಳಿಸಿದ ಆಟಗಾರರ ಪೈಕಿ ಅತಿ ಹೆಚ್ಚು ಸ್ಟ್ರೈಕ್‌ರೇಟ್ ಹೊಂದಿದ ಆಟಗಾರನಾಗಿದ್ದಾರೆ.

ವಿವಿಯನ್ ರಿಚರ್ಡ್ಸ್

ವಿವಿಯನ್ ರಿಚರ್ಡ್ಸ್

1970ರಲ್ಲಿ ಏಕದಿನ ಕ್ರಿಕೆಟ್‌ ಪರಿಚಯವಾದ ದಶಕ. ಈ ಅವಧಿಯಲ್ಲಿ ವೆಸ್ಟ್ ಇಂಡೀಸ್‌ನ ಸರ್ ವಿವಿಯನ್ ರಿಚರ್ಡ್ಸ್ ನೀಡಿದ ಶ್ರೇಷ್ಠ ಪ್ರದರ್ಶನದ ಕಾರಣಕ್ಕೆ ದಶಕದ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿದ್ದಾರೆ. ವೆಸ್ಟ್ ಇಂಡೀಸ್ ತಂಡ ಸತತ ಎರಡು ಬಾರಿ ಏಕದಿನ ವಿಶ್ವಕಪ್‌ನ ಚಾಂಪಿಯನ್ ಪಟ್ಟಕ್ಕೇರಲು ಅವರು ಕಾರಣಗಿದ್ದರು.

Story first published: Thursday, April 15, 2021, 13:35 [IST]
Other articles published on Apr 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X