ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬೂಮ್ರಾ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಕೋಚ್ ರಾಹುಲ್ ದ್ರಾವಿಡ್

Team India coach Rahul Dravid give update on Jasprit Bumrah said waiting for official confirmation on fitness

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ವಿಶ್ವಕಪ್‌ನ ಸನಿಹದಲ್ಲಿರುವಾಗಲೇ ಮತ್ತೆ ಬೆನ್ನುನೋವಿಗೆ ತುತ್ತಾಗಿದ್ದು ವಿಶ್ವಕಪ್‌ನಿಂದಲೇ ಹೊರಬೀಳುವ ಆತಂಕವಿದೆ. ಈ ಬಗ್ಗೆ ಬಿಸಿಸಿಐ ಈವರೆಗೆ ಅಧಿಕೃತವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲವಾದರೂ ಬೂಮ್ರಾ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಈ ಸಂದರ್ಭದಲ್ಲಿ ಶುಕ್ರವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜಸ್ಪ್ರೀತ್ ಬೂಮ್ರಾ ಅವರು ಇನ್ನು ಕೂಡ ವಿಶ್ವಕಪ್ ತಂಡದಿಂದ ಹೊರಬೀಳುವುದು ಅಧಿಕೃವಾಗಿಲ್ಲ ಎಂದಿದ್ದರು. ಇದೀಗ ತಂಡದ ಕೋಚ್ ರಾಹುಲ್ ದ್ಆವಿಡ್ ಮತ್ತೊಂದು ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬೂಮ್ರಾ ಫಿಟ್‌ನೆಸ್ ಬಗ್ಗೆ ಮಾತನಾಡಿದ್ದಾರೆ. ಜಸ್ಪ್ರೀತ್ ಬೂಮ್ರಾ ಬೆಂಗಳೂರಿನಲ್ಲಿರುವ ರಾಷ್ಟೀಯ ಕ್ರಿಕೆಟ್ ಅಕಾಡೆಮಿಗೆ ತೆರಳಲಿದ್ದು ಅದಾದ ಬಳಿಕವೇ ತಂಡದ ಮ್ಯಾನೇಜ್‌ಮೆಂಟ್‌ಗೆ ಬೂಮ್ರಾ ವಿಶ್ವಕಪ್‌ಗೆ ಲಭ್ಯತೆ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.

ಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ

ಇದಕ್ಕೂ ಮುನ್ನ ಜಸ್ಪ್ರೀತ್ ಬೂಮ್ತಾ ಬೆನ್ನು ನೋವಿನ ಕಾರಣದಿಂದಾಗಿ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ ಇದನ್ನು ಬಿಸಿಸಿಐ ಅಥವಾ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹಾಗಾಗಿ ಬೂಮ್ರಾ ಇನ್ನು ಕುಡ ವಿಶ್ವಕಪ್‌ನ ತಂಡದಲ್ಲಿ ಇದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಬೂಮ್ರಾ ಅಧಿಕೃತವಾಗಿ ಹೊರಬಿದ್ದಿದ್ದು ಅವರ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಈ ಬಗ್ಗೆ ರಾಹುಲ್ ದ್ರಾವಿಡ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನಿಮಗೆ ತಿಳಿದಿರುವಂತೆ ಜಸ್ಪ್ರೀತ್ ಬೂಮ್ಆ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದು ಅವರು ಎನ್‌ಸಿಎಗೆ ತೆರಳಿದ್ದಾರೆ. ಮುಂದಿನ ಹೆಜ್ಜೆಯ ಬಗ್ಗೆ ನಾವು ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ. ಈವರೆಗೆ ಅವರು ಈ ಸರಣಿಯಿಂದ ಮಾತ್ರವೇ ಹೊರಬಿದ್ದಿದ್ದಾರೆ. ಆದರೆ ಮುಂದಿನ ಕೆಲ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡುತ್ತೇವೆ. ಅಧಿಕೃತವಾಗಿ ನಮಗೆ ಮಾಹಿತಿ ಲಭ್ಯವಾದರೆ ಮಾತ್ರವೇ ನಾವು ಅದನ್ನು ಹಂಚಿಕೊಳ್ಳಲು ಸಾಧ್ಯ" ಎಂದಿದ್ದಾರೆ ರಾಹುಲ್ ದ್ರಾವಿಡ್.

ಜಸ್ಪ್ರೀತ್ ಬೂಮ್ರಾ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿಯುವುದು ಖಚಿತವಾದರೆ ಅವರ ಬದಲಿಗೆ ದೀಪಕ್ ಚಹಾರ್ ಅಥವಾ ಮೊಹಮ್ಮದ್ ಶಮಿ ತಂಡದೊಳಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಸದ್ಯಕ್ಕೆ ಈ ಇಬ್ಬರು ಆಟಗಾರರು ಕುಡ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಭಾರತದ ಮೀಸಲು ಆಟಗಾರರಾಗಿ ಹೆಸರಿಸಲ್ಪಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಮತ್ತು ಮೂರನೇ ಟಿ20 ಆಡಿದ ಬುಮ್ರಾ ಬೆನ್ನುನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿದಿದ್ದರು.

ಸೂರ್ಯಕುಮಾರ್ ಅಬ್ಬರ, ಗಬ್ಬರ್ ಹೆಸರಲ್ಲಿದ್ದ ಈ ದಾಖಲೆ ನೆಲಸಮ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ಸೂರ್ಯಕುಮಾರ್ ಅಬ್ಬರ, ಗಬ್ಬರ್ ಹೆಸರಲ್ಲಿದ್ದ ಈ ದಾಖಲೆ ನೆಲಸಮ, ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್

ಟೀಮ್ ಇಂಡಿಯಾದ ಅನೇಕ ಹಿರಿಯ ಆಟಗಾರರಿಗೆ ಕೆಲಸದ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ವಿಶ್ರಾಂತಿ ನೀಡಲಾಗಿದೆ. ಮುಂಬೈ ಇಂಡಿಯನ್ಸ್‌ಗಾಗಿ ಐಪಿಎಲ್ ಪಂದ್ಯಗಳನ್ನು ಹೊರತುಪಡಿಸಿ 2022 ರಲ್ಲಿ ಬುಮ್ರಾ ಕೇವಲ ಐದು ಟೆಸ್ಟ್‌, ಐದು ಏಕದಿನ ಹಾಗೂ ಐದು ಟಿ20 ಪಂದ್ಯಗಳನ್ನು ಮಾತ್ರವೇ ಆಡಿದ್ದಾರೆ.

Story first published: Saturday, October 1, 2022, 20:03 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X