ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು: ರಾಹುಲ್ ದ್ರಾವಿಡ್ ಇತ್ತೀಚಿನ ಪ್ರತಿಕ್ರಿಯೆ

Rahul dravid
England test ಸೋತ ನಂತರ Dravid ಹೇಳಿದ್ದಿಷ್ಟು | OneIndia Kannada

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ಭಾರತ ತಂಡ 15 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಕೊನೆಯ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಚೊಚ್ಚಲ ಬಾರಿಗೆ 378 ರನ್‌ಗಳನ್ನ ಹೊಂದಿದ್ದರೂ ಸೋಲನ್ನ ಕಂಡಿದೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ 350ಕ್ಕೂ ಹೆಚ್ಚು ರನ್‌ಗಳ ಲೀಡ್ ಹೊಂದಿದ್ದರೂ ಸೋತಿದ್ದು ಇದೇ ಮೊದಲು. ಹೀಗಾಗಿ ಟೀಂ ಇಂಡಿಯಾ ಸೋಲಿನ ಕುರಿತಾಗಿ ರಾಹುಲ್ ದ್ರಾವಿಡ್ ಹೇಳಿರುವ ಪ್ರಮುಖ ವಿಚಾರಗಳು ಇಲ್ಲಿವೆ.

ಕೊನೆಯ ಎರಡು ದಿನಗಳಲ್ಲಿ ಟೀಂ ಇಂಡಿಯಾಗೆ ಹಿನ್ನಡೆ

ಕೊನೆಯ ಎರಡು ದಿನಗಳಲ್ಲಿ ಟೀಂ ಇಂಡಿಯಾಗೆ ಹಿನ್ನಡೆ

3 ದಿನದ ಪ್ರಾಬಲ್ಯ ತೋರಿದ್ದ ಟೀಂ ಇಂಡಿಯಾ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಕೊನೆಯ ಎರಡು ದಿನಗಳಲ್ಲಿ ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ಪಂದ್ಯದುದ್ದಕ್ಕೂ ಅದೇ ಉತ್ಸಾಹ ತೋರಲು ಸಾಧ್ಯವಾಗಲಿಲ್ಲ. ನಿಜ ಹೇಳಬೇಕೆಂದರೆ ಇಂಗ್ಲೆಂಡ್ ಆಟಗಾರರು ಚೆನ್ನಾಗಿ ಆಡಿದರು. ಬೈಸ್ಟ್ರೊವ್ ಮತ್ತು ಜೋ ರೂಟ್ ಅತ್ಯುತ್ತಮ ಜೊತೆಯಾಟವನ್ನು ನೀಡಿದರು ಎಂದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಒಪ್ಪಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆದಾಗ ನನ್ನ ಅಭಿಮಾನಿಗಳು ತಿರುಗಿಬಿದ್ದರು; ಭಾರತದ ವೇಗಿ

ಸಿಕ್ಕ ಎರಡು ಅವಕಾಶ ಕೈ ಚೆಲ್ಲಿದ್ದೇವೆ!

ಸಿಕ್ಕ ಎರಡು ಅವಕಾಶ ಕೈ ಚೆಲ್ಲಿದ್ದೇವೆ!

ಸಿಕ್ಕ ಎರಡು ಮೂರು ಅವಕಾಶಗಳನ್ನು ನಾವು ಸದುಪಯೋಗಪಡಿಸಿಕೊಳ್ಳಲಿಲ್ಲ. ಅದೇ ರೀತಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ನಮಗೆ 2 ಅವಕಾಶಗಳು ಸಿಕ್ಕಿವೆ. ಅದನ್ನೂ ಕಳೆದುಕೊಂಡೆವು. ಇದು ಖಂಡಿತವಾಗಿಯೂ ನಿರಾಶೆಗೊಳಿಸಿದೆ. ಯಾಕೆ ಹೀಗಾಗುತ್ತಿದೆ ಎಂದು ತನಿಖೆ ನಡೆಸಿ ಸರಿಪಡಿಸಬೇಕು ಎಂದು ದ್ರಾವಿಡ್ ಹೇಳಿದ್ದಾರೆ.

ವಿಂಡೀಸ್ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ: BCCI ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್‌

ಕಳೆದ ಎರಡು ತಿಂಗಳಿನಿಂದ ಠುಸ್ ಪಠಾಕಿ

ಕಳೆದ ಎರಡು ತಿಂಗಳಿನಿಂದ ಠುಸ್ ಪಠಾಕಿ

ಕಳೆದ 2 ವರ್ಷಗಳಲ್ಲಿ ಟೆಸ್ಟ್‌ನಲ್ಲಿ ಎದುರಾಳಿ ವಿರುದ್ಧ 20 ವಿಕೆಟ್‌ಗಳನ್ನು ಉರುಳಿಸಿದ್ದೇವೆ. ಕಳೆದ 2 ತಿಂಗಳಿಂದ ನಮಗೆ ಅದು ಸಾಧ್ಯವಾಗಿಲ್ಲ. ದೈಹಿಕ ಕ್ಷಮತೆಯನ್ನು ಸರಿಯಾಗಿ ಅನುಸರಿಸದಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಸದ್ಯಕ್ಕೆ ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿದೆ. ವಿದೇಶದಲ್ಲಿ ಆಡಿದ ಕೊನೆಯ 2 ಟೆಸ್ಟ್‌ಗಳಲ್ಲಿ ನಾವು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ವಿಫಲರಾಗಿದ್ದೇವೆ ಎಂದು ರಾಹುಲ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ vs ಇಂಗ್ಲೆಂಡ್, ಮೊದಲ ಟಿ20 ಪಂದ್ಯ: ಹೇಗಿದೆ ಸೌಥಾಂಪ್ಟನ್ ಹವಾಮಾನ? ಪಿಚ್ ರಿಪೋರ್ಟ್ ಮಾಹಿತಿ

ನಾಲ್ಕನೇ ಬಾರಿಗೆ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿತ್ತು

ನಾಲ್ಕನೇ ಬಾರಿಗೆ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿತ್ತು

ಹೌದು ಟೀಂ ಇಂಡಿಯಾ ಆಂಗ್ಲರ ನೆಲದಲ್ಲಿ ನಾಲ್ಕನೇ ಬಾರಿಗೆ ಸರಣಿ ಗೆಲ್ಲುವ ಅತ್ಯುತ್ತಮ ಅವಕಾಶವಿತ್ತು. 1971, 1986, 2007ರಲ್ಲಿ ಟೀಂ ಇಂಡಿಯಾ ಟೆಸ್ಟ್‌ ಸರಣಿಯನ್ನ ಇಂಗ್ಲೆಂಡ್‌ನಲ್ಲಿ ಗೆದ್ದಿದ್ದು, ನಾಲ್ಕನೇ ಬಾರಿಗೆ ಟ್ರೋಫಿ ಗೆಲ್ಲಬಹುದಿತ್ತು. 1971ರಲ್ಲಿ ಅಜಿತ್ ವಾಡೇಕರ್ ನಾಯಕತ್ವದಲ್ಲಿ 1-0 ಅಂತರದಲ್ಲಿ, 1986ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ 2-0 ಹಾಗೂ 2007ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 1-0 ಅಂತರದಲ್ಲಿ ಸರಣಿ ಗೆದ್ದಿತು. ಈ ಸರಣಿಯಲ್ಲಿ ಅನಿಲ್ ಕುಂಬ್ಳೆ ಸೆಂಚುರಿ ಸಿಡಿಸಿದ ಏಕೈಕ ಆಟಗಾರರಾಗಿದ್ದರು.

ಆದ್ರೆ 378ರನ್‌ಗಳ ದಾಖಲಿಸಿದ್ದರೂ ಸಹ ಗೆಲ್ಲುವ ಅವಕಾಶ ಕಳೆದುಕೊಂಡ ಟೀಂ ಇಂಡಿಯಾ 2-2ರ ಸರಣಿ ಸಮಬಲಕ್ಕೆ ತೃಪ್ತಿಪಟ್ಟಿತು. ನಾಲ್ಕನೇ ವಿಕೆಟ್‌ಗೆ ಜಾನಿ ಬೈಸ್ಟ್ರೋವ್ ಮತ್ತು ಜೋ ರೂಟ್ ಅಜೇಯ 269 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.

Story first published: Thursday, July 7, 2022, 8:21 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X