ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

300 ಪ್ಲಸ್ ರನ್ ಮೊತ್ತ: ಭಾರತದ ಹೊಸ ವಿಶ್ವ ದಾಖಲೆ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 310 ರನ್ ಗಳಿಸಿದ ಟೀಂ ಇಂಡಿಯಾದಿಂದ ವಿಶ್ವದಾಖಲೆ. ಅತಿ ಹೆಚ್ಚು (96) 300 ಪ್ಲಸ್ ರನ್ ಗಳಿಸಿದ ತಂಡವಾಗಿ ಹೊರಹೊಮ್ಮಿರುವ ಭಾರತ.

ಪೋರ್ಟ್ ಆಫ್ ಸ್ಪೇನ್, ಜೂನ್ 26: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 300 ರನ್ ಗಳಿಗೂ ಅಧಿಕ ಮೊತ್ತ ಕಲೆಹಾಕಿರುವ ಟೀಂ ಇಂಡಿಯಾ, ಆ ಮೂಲಕ ಏಕದಿನ ಪಂದ್ಯಗಳ ಮಾದರಿಯಲ್ಲಿ ಅತಿ ಹೆಚ್ಚು '300 ಪ್ಲಸ್' ರನ್ ಪೇರಿಸಿದ ತಂಡವೆಂಬ ವಿಶ್ವದಾಖಲೆ ಬರೆದಿದೆ.

ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಓವಲ್ ನಲ್ಲಿ, ಭಾರತೀಯ ಕಾಲಮಾನದ ಪ್ರಕಾರ, ಭಾನುವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ಭಾರತವು ಮೊದಲು ಬ್ಯಾಟ್ ಮಾಡಿ ನಿಗದಿತ 43 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತ್ತು.

Team India create world record for most 300-plus scores in ODIs

ಈ ಮೊತ್ತವನ್ನು ಹಿಂದಿಕ್ಕುವ ಭರದಲ್ಲಿ ವೆಸ್ಟ್ ಇಂಡೀಸ್, 43 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 205 ರನ್ ಗಳಿಸಿತು.

ಈ ಪಂದ್ಯದಲ್ಲಿ ಭಾರತ ಗಳಿಸಿದ ಮೊತ್ತ ಆ ತಂಡದ 96ನೇ '300 ಪ್ಲಸ್' ಮೊತ್ತವಾಗಿದ್ದು, ಈ ಮೂಲಕ ಆಸ್ಟ್ರೇಲಿಯಾದ (95 ಬಾರಿ) ದಾಖಲೆಯನ್ನು ಭಾರತ ಹಿಂದಿಕ್ಕಿದೆ.

2ನೇ ಏಕದಿನ: ವಿಂಡೀಸ್ ವಿರುದ್ಧ ಭಾರತಕ್ಕೆ 105 ರನ್ ಜಯ2ನೇ ಏಕದಿನ: ವಿಂಡೀಸ್ ವಿರುದ್ಧ ಭಾರತಕ್ಕೆ 105 ರನ್ ಜಯ

ಇದೀಗ, ಅತಿ ಹೆಚ್ಚು 300 ಪ್ಲಸ್ ರನ್ ಪೇರಿಸಿದ ತಂಡಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಆನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ (95), ದಕ್ಷಿಣ ಆಫ್ರಿಕಾ (77), ಪಾಕಿಸ್ತಾನ (69), ಶ್ರೀಲಂಕಾ (63), ಇಂಗ್ಲೆಂಡ್ (57) ಹಾಗೂ ನ್ಯೂಜಿಲೆಂಡ್ (51) ಇವೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X