ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾಸಿನ್ ಮಲಿಕ್ ಬೆಂಬಲಿಸಿ ಟ್ವೀಟ್ ಮಾಡಿದ್ದ ಅಫ್ರಿದಿಗೆ, ಸಖತ್ ಆಗಿ ಉತ್ತರ ನೀಡಿದ ಅಮಿತ್ ಮಿಶ್ರಾ

mishra vs afridi

ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರನ್ನು ಬೆಂಬಲಿಸಿ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಟ್ವೀಟ್‌ಗೆ, ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಸೂಕ್ತ ಉತ್ತರ ನೀಡಿದ್ದಾರೆ.

ಬುಧವಾರ(ಮೇ 25) ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಫ್ರಿದಿ ಟ್ವಿಟ್ಟರ್‌ನಲ್ಲಿ ಭಾರತವು, ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಧ್ವನಿಯನ್ನು ಮೌನಗೊಳಿಸುತ್ತಿದೆ ಎಂದು ಆರೋಪಿಸಿದರು. ಯಾಸಿನ್ ಮಲಿಕ್ ವಿರುದ್ಧದ ಆರೋಪಗಳನ್ನು ಕಟ್ಟುಕಥೆ ಎಂದು ಅವರು ಹೇಳಿದರು. ಕಾಶ್ಮೀರಿ ನಾಯಕರ ವಿರುದ್ಧದ ಶಿಕ್ಷೆಯನ್ನ ಪರಿಶೀಲಿಸುವಂತೆ ವಿಶ್ವಸಂಸ್ಥೆಯನ್ನು (ಯುಎನ್) ಒತ್ತಾಯಿಸಿದರು.

ಮೊಹಮ್ಮದ್ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

ಮೊಹಮ್ಮದ್ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಿದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಮೊಹಮ್ಮದ್ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಲಾಗಿದೆ.

ದೆಹಲಿ ವಿಶೇಷ ನ್ಯಾಯಾಲಯದ ಎದುರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಎಲ್ಲಾ ಆರೋಪಗಳಲ್ಲಿ ತಪ್ಪೊಪ್ಪಿಕೊಂಡಿರುವುದರ ಬೆನ್ನಲ್ಲೇ ಮೇ 19ರಂದು ಯಾಸಿನ್ ಮಲಿಕ್ ಅಪರಾಧಿ ಎಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಬುಧವಾರ ಎನ್ಐಎ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಭಾರತ ಮಾನವ ಹಕ್ಕುಗಳ ಉಲ್ಲಂಘನೆಯ ಧ್ವನಿ ಅಡಗಿಸುತ್ತಿದೆ ಎಂದ ಅಫ್ರಿದಿ

"ತನ್ನ ಅಬ್ಬರದ ಮಾನವ ಹಕ್ಕುಗಳ ದುರುಪಯೋಗದ ವಿರುದ್ಧ ಧ್ವನಿಗಳನ್ನು ಮೌನಗೊಳಿಸಲು ಭಾರತದ ನಿರಂತರ ಪ್ರಯತ್ನಗಳು ನಿಷ್ಪ್ರಯೋಜಕವಾಗಿದೆ. #ಯಾಸಿನ್ ಮಲಿಕ್ ವಿರುದ್ಧದ ಆರೋಪಗಳು ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೆ ಅಡ್ಡಿಯಾಗುವುದಿಲ್ಲ. ಕಾಶ್ಮೀರ ನಾಯಕರ ವಿರುದ್ಧ ಅನ್ಯಾಯ ಮತ್ತು ಕಾನೂನುಬಾಹಿರ ಚಟುವಟಿಕೆ ಬಗ್ಗೆ ಗಮನಹರಿಸುವಂತೆ #UN ಗೆ ಒತ್ತಾಯಿಸುತ್ತಿದ್ದೇನೆ'' ಎಂದು ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

KL Rahul ಬಗ್ಗೆ ಕ್ರಿಕೆಟ್ ಪಂಡಿತರು ಹೇಳಿದ್ದೇನು | Oneindia Kannada

ಅಫ್ರಿದಿಗೆ ಖಡಕ್ ಉತ್ತರ ಕೊಟ್ಟ ಅಮಿತ್‌ ಮಿಶ್ರಾ

ಭಾರತೀಯ ಕ್ರಿಕೆಟಿಗ ಅಮಿತ್ ಮಿಶ್ರಾ ಅವರು ಭಾರತದ ವಿರುದ್ಧ ಟ್ವೀಟ್ ಮಾಡಿದ್ದ ಶಾಹಿದ್ ಅಫ್ರಿದಿಗೆ ಖಡಕ್ ಉತ್ತರ ನೀಡಿದ್ದು, ಅಫ್ರಿದಿಯ ವಿವಾದಾತ್ಮಕ ಜನ್ಮದಿನಾಂಕದ ಕುರಿತು ಪ್ರಶ್ನಿಸಿದ್ದಾರೆ. ಅವರ ಜನ್ಮ ದಿನಾಂಕದಂತೆ ಎಲ್ಲವೂ ತಪ್ಪುದಾರಿಗೆಳೆಯುವುದಿಲ್ಲ ಎಂದು ಹೇಳಿದ್ದಾರೆ.

"ಆತ್ಮೀಯ safridiofficial ಅವರೇ ದಾಖಲೆಯಲ್ಲಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ನಿಮ್ಮ ಜನ್ಮದಿನಾಂಕದಂತೆ ಎಲ್ಲವೂ ತಪ್ಪುದಾರಿಗೆಳೆಯುವುದಿಲ್ಲ'' ಎಂದು ಅಮಿತ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಅಫ್ರಿದಿ ಅವರು 2019 ರಲ್ಲಿ ತಮ್ಮ ಜನ್ಮದಿನಾಂಕವನ್ನ ಬಹಿರಂಗಪಡಿಸಿದ್ದು, 1975ರಲ್ಲಿ ಜನಿಸಿದ್ದ ಅಫ್ರಿದಿಯು ಐಸಿಸಿ ದಾಖಲೆಗಳಲ್ಲಿ 1980 ರ ಜನ್ಮದಿನಾಂಕವನ್ನ ತೋರಿಸಿದ್ದರು. 1996ರಲ್ಲಿ ತನಗೆ 19 ವರ್ಷ ಎಂದು ಪುಸ್ತಕದಲ್ಲಿ ಹೇಳಿದಾಗ ಗೊಂದಲ ಹೆಚ್ಚಾಯಿತು.

Story first published: Thursday, May 26, 2022, 10:37 [IST]
Other articles published on May 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X