ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ 5 ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಾವೇ ನಂಬರ್ 1: ರವಿಶಾಸ್ತ್ರಿ

Ravishastri

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆದ್ದ ಬಳಿಕ, ಟೆಸ್ಟ್ ಸರಣಿಯನ್ನ 1-0ಯಿಂದ ವಶಪಡಿಸಿಕೊಂಡ ಟೀಂ ಇಂಡಿಯಾ ಮತ್ತೊಮ್ಮೆ ದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ತಾನೆಷ್ಟು ಬಲಿಷ್ಠ ಅನ್ನೋದನ್ನ ಪ್ರೂವ್ ಮಾಡಿದೆ. ಅದ್ರಲ್ಲೂ ತವರಿನಲ್ಲಿ ತನ್ನನ್ನ ಸೋಲಿಸುವ ತಂಡವೇ ಇದುವರೆಗೂ ಇಲ್ಲ ಎಂಬಂತಹ ಪರ್ಫಾಮೆನ್ಸ ನೀಡುತ್ತಿದೆ.

2012ರ ಡಿಸೆಂಬರ್‌ನಿಂದ ಈಚೆಗೆ ಭಾರತವು ತವರಿನಲ್ಲಿ 14 ಟೆಸ್ಟ್ ಸರಣಿಗಳನ್ನ ಆಡಿದ್ದು, ಒಂದೇ ಒಂದು ಸರಣಿಯನ್ನೂ ಕೈ ಚೆಲ್ಲದೆ ಅಜೇಯ 14 ಸರಣಿಗಳ ಜಯದೊಂದಿಗೆ ವಿಶ್ವದಾಖಲೆಯನ್ನ ನಿರ್ಮಿಸಿದೆ. ಇದುವರೆಗೂ ಆಸ್ಟ್ರೇಲಿಯಾ ತವರಿನಲ್ಲಿ ಎರಡು ಬಾರಿ 10 ಟೆಸ್ಟ್ ಸರಣಿ ಗೆದ್ದ ದಾಖಲೆ ಹೊಂದಿತ್ತು.

ICC T20 ವರ್ಲ್ಡ್ ಕಪ್ 2021 ರ ಕೊನೆಯಲ್ಲಿ ಭಾರತದ ಮುಖ್ಯ ಕೋಚ್ ಆಗಿ ಶಾಸ್ತ್ರಿ ಅವರ ಅಧಿಕಾರಾವಧಿಯು ಪೂರ್ಣಗೊಂಡಿತು, ಅಲ್ಲಿ ಭಾರತವು ಗ್ರೂಪ್‌ ಸ್ಟೇಜ್‌ನಲ್ಲಿ ಮೂರನೇ ಸ್ಥಾನವನ್ನ ಗಳಿಸಿ ನಿರ್ಗಮಿಸಿತು.

ಟೀಂ ಇಂಡಿಯಾ ಪರ್ಫಾಮೆನ್ಸ್ ಬಗ್ಗೆ ಹೊಗಳಿದ ರವಿಶಾಸ್ತ್ರಿ

ಟೀಂ ಇಂಡಿಯಾ ಪರ್ಫಾಮೆನ್ಸ್ ಬಗ್ಗೆ ಹೊಗಳಿದ ರವಿಶಾಸ್ತ್ರಿ

"ಕಳೆದ ಐದು ವರ್ಷಗಳಲ್ಲಿ ಯಾವುದೇ ತಂಡವು ಟೆಸ್ಟ್ ಪಂದ್ಯಗಳಿಗೆ ರಾಯಭಾರಿಯಾಗಿದ್ದಲ್ಲಿ ಅದು ಈ ಭಾರತೀಯ ಕ್ರಿಕೆಟ್ ತಂಡ ಎಂದು ನಾನು ಭಾವಿಸುತ್ತೇನೆ. ವಿರಾಟ್ ಟೆಸ್ಟ್ ಕ್ರಿಕೆಟ್ ಅನ್ನು ಪೂಜಿಸುತ್ತಾರೆ. ಇದು ಭಾರತದಲ್ಲಿ ಆಡುವ ಏಕದಿನ ಕ್ರಿಕೆಟ್‌, ಐಪಿಎಲ್ ಟೂರ್ನಿಗಿಂತಲೂ ಹೆಚ್ಚು ಪ್ರಚಾರ ಪಡೆದಂತಿದೆ'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

"ನೀವು ತಂಡದಲ್ಲಿರುವ ಯಾರನ್ನಾದರೂ ಕೇಳಿದರೆ, ಅವರಲ್ಲಿ ಶೇಕಡಾ 99 ರಷ್ಟು ಜನರು ತಾವು ಟೆಸ್ಟ್ ಪಂದ್ಯವನ್ನು ಪ್ರೀತಿಸುತ್ತೇವೆ ಎಂದು ಹೇಳುತ್ತಾರೆ. ಅದಕ್ಕಾಗಿಯೇ, ಕಳೆದ ಐದು ವರ್ಷಗಳಲ್ಲಿ ಭಾರತ ಏನು ಮಾಡಿದೆ. ಪ್ರತಿ ವರ್ಷದ ಕೊನೆಯಲ್ಲಿ ವಿಶ್ವದ ನಂ. 1 ತಂಡವಾಗಿ ಉಳಿಯುತ್ತದೆ, "ಎಂದು ಶಾಸ್ತ್ರಿ ತಮ್ಮ ಪಾಡ್‌ಕ್ಯಾಸ್ಟ್‌ನಲ್ಲಿ ಖ್ಯಾತ ಲೇಖಕ ಜೆಫ್ರಿ ಆರ್ಚರ್‌ಗೆ ತಿಳಿಸಿದರು.

ಶಾಸ್ತ್ರಿ ಅವರು ತಮ್ಮ ಅಧಿಕಾರಾವಧಿಯಲ್ಲಿ ICC ಟ್ರೋಫಿಯನ್ನು ಗೆಲ್ಲದೇ ಇರಬಹುದು, ಆದರೆ ಖಂಡಿತವಾಗಿಯೂ ಅವರು ಭಾರತದ ಟೆಸ್ಟ್ ಬಲಿಷ್ಠ ತಂಡವನ್ನ ಕಟ್ಟುವಲ್ಲಿ ಪರಿಷ್ಕರಿಸಿದ್ದಾರೆ, ವಿಶೇಷವಾಗಿ ವಿದೇಶಿ ಸರಣಿಗಳಲ್ಲಿ , ಅವರ ಅಡಿಯಲ್ಲಿ, ಭಾರತವು ಮೊದಲ ಬಾರಿಗೆ 2018/19 ರಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತು ಮತ್ತು 2020/21 ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಂಡಿತು.

ತವರಿನಲ್ಲಿ ವೇಗವಾಗಿ 300 ಟೆಸ್ಟ್‌ ವಿಕೆಟ್ ಪಡೆದ ಬೌಲರ್ಸ್‌: ಭಾರತದವರೆಷ್ಟು?

42 ತಿಂಗಳುಗಳ ಕಾಲ ನಂಬರ್ 1 ಟೆಸ್ಟ್‌ ತಂಡ

42 ತಿಂಗಳುಗಳ ಕಾಲ ನಂಬರ್ 1 ಟೆಸ್ಟ್‌ ತಂಡ

ಶಾಸ್ತ್ರಿ ಅವರು 2017 ರಲ್ಲಿ ಪೂರ್ಣ ಸಮಯದ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದರು. ಆಸ್ಟ್ರೇಲಿಯಾವನ್ನು ಅವರ ಅಂಗಳದಲ್ಲಿ ಎರಡು ಬಾರಿ ಸೋಲಿಸುವುದರಿಂದ ಹಿಡಿದು 42 ತಿಂಗಳುಗಳ ಕಾಲ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸುವವರೆಗೆ ತಂಡವು ಉತ್ತಮ ಸಾಧನೆಗಳನ್ನು ಮಾಡಿದೆ.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್, ಏಕದಿನ ಸರಣಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಸಾಧನೆಗಳು

ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಭಾರತದ ಸಾಧನೆಗಳು

ರವಿಶಾಸ್ತ್ರಿ ನಾಯಕತ್ವದಲ್ಲಿ ಭಾರತ 183 ಪಂದ್ಯಗಳಲ್ಲಿ 118 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತದ ಮುಖ್ಯ ಕೋಚ್ ಆಗಿ ಶಾಸ್ತ್ರಿ ಅವರ ಕ್ಯಾಬಿನೆಟ್‌ನಲ್ಲಿ ಯಾವುದೇ ಐಸಿಸಿ ಟ್ರೋಫಿ ಇಲ್ಲದಿದ್ದರೂ, ಶಾಸ್ತ್ರಿ ಅಡಿಯಲ್ಲಿ ಟೀಮ್ ಇಂಡಿಯಾ ಜಗತ್ತಿನ ಯಾವುದೇ ಭಾಗದಲ್ಲಿ ಸ್ಥಿರವಾದ ಕ್ರಿಕೆಟ್ ಆಡುವ ತಂಡವಾಗಿಸುವಲ್ಲಿ ಯಶಸ್ವಿಯಾದರು.

ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ | Oneindia kannada
ಕೋಚ್ ಆಗಿ ರವಿಶಾಸ್ತ್ರಿ ಪ್ರಮುಖ ಸಾಧನೆಗಳು

ಕೋಚ್ ಆಗಿ ರವಿಶಾಸ್ತ್ರಿ ಪ್ರಮುಖ ಸಾಧನೆಗಳು

* ಶ್ರೀಲಂಕಾವನ್ನು ಮೂರು ಫಾರ್ಮೆಟ್‌ನಲ್ಲಿ 9-0 ಅಂತರದಲ್ಲಿ ಸೋಲಿಸಿರುವುದು
* 2018ರ ಏಷ್ಯಾ ಕಪ್
* ಆಸ್ಟ್ರೇಲಿಯಾದಲ್ಲಿ 2019 ಮತ್ತು 2020ರ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲುವು
* ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ
* ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ ಸರಣಿ ಗೆಲುವು
* ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಏಕದಿನ ಸರಣಿ ಗೆಲುವು
* ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕ, ಐರ್ಲೆಂಡ್, ಇಂಗ್ಲೆಂಡ್, ನ್ಯೂಜಿಲೆಂಡ್ , ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆಲುವು

Story first published: Tuesday, December 7, 2021, 0:00 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X