ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಅಂತಿಮ ಟಿ20 ಪಂದ್ಯ ಗೆದ್ರೆ, ಪಾಕಿಸ್ತಾನದ ಈ ವಿಶ್ವದಾಖಲೆ ನುಚ್ಚುನೂರು

Team india

ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನ ಜೀವಂತವಾಗಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದ್ದಾಗಿದೆ. ನಾಗ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮಳೆಯಿಂದಾಗಿ 8 ಓವರ್ ಗಳಿಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ರೋಹಿತ್ ಪಡೆ ಭರ್ಜರಿ ಗೆಲುವು ದಾಖಲಿಸಿತು. ಶುಕ್ರವಾರ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತು.

ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಭಾರತ 1-1ರಿಂದ ವಶಪಡಿಸಿಕೊಂಡಿದೆ. ಆ ಮೂಲಕ ಭಾನುವಾರ ಹೈದ್ರಾಬಾದ್‌ನ ಉಪ್ಪಳ ಮೈದಾನದಲ್ಲಿ ನಡೆಯಲಿರುವ ಪಂದ್ಯ ಸರಣಿ ನಿರ್ಣಾಯಕ ಎನಿಸಿಕೊಂಡಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಟಿ20ಯಲ್ಲಿಯೇ ಹೊಸ ಇತಿಹಾಸ ಬರೆಯಲಿದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಹಿತ್ ಟೀಂ ಪಾತ್ರವಾಗಲಿದೆ.

ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆಲುವನ್ನ ಸಾಧಿಸಿದ್ದೇ ಆದಲ್ಲಿ, ಬದ್ಧ ಎದುರಾಳಿ ದೇಶ ಪಾಕಿಸ್ತಾನದ ದಾಖಲೆಯನ್ನು ಹಿಂದಿಕ್ಕಲಿದೆ. ನಾಗ್ಪುರದಲ್ಲಿ ಪಂದ್ಯ ಗೆಲುವಿನೊಂದಿಗೆ ರೋಹಿತ್ ಸೇನೆ ಪಾಕಿಸ್ತಾನದ ದಾಖಲೆಯನ್ನು ಸರಿಗಟ್ಟಿದೆ. ಭಾರತ ಈ ವರ್ಷ ಒಟ್ಟು 28 ಟಿ20 ಪಂದ್ಯಗಳನ್ನು ಆಡಿದ್ದು, 20 ಗೆಲುವು ದಾಖಲಿಸಿದೆ.

ನಾನು ಹೆಚ್ಚು ಅಭ್ಯಾಸ ಮಾಡುವುದಿಲ್ಲ, ಯೋಜನೆಯ ಪ್ರಕಾರವಷ್ಟೇ ಅಭ್ಯಾಸ: ದಿನೇಶ್ ಕಾರ್ತಿಕ್ನಾನು ಹೆಚ್ಚು ಅಭ್ಯಾಸ ಮಾಡುವುದಿಲ್ಲ, ಯೋಜನೆಯ ಪ್ರಕಾರವಷ್ಟೇ ಅಭ್ಯಾಸ: ದಿನೇಶ್ ಕಾರ್ತಿಕ್

ಕಳೆದ ವರ್ಷ 2021ರಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಒಟ್ಟು 20 ಗೆಲುವು ದಾಖಲಿಸಿ ಈ ಗೌರವ ಪಡೆದ ಮೊದಲ ತಂಡವಾಗಿ ಇತಿಹಾಸ ಸೃಷ್ಟಿಸಿತ್ತು. ನಾಗ್ಪುರದ ಇತ್ತೀಚಿನ ಗೆಲುವಿನೊಂದಿಗೆ ಭಾರತ ಈ ದಾಖಲೆಯನ್ನು ಸರಿಗಟ್ಟಿದೆ. ಭಾನುವಾರ (ಸೆ.25) ಉಪ್ಪಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆದ್ದರೆ ಅದು 21ನೇ ಗೆಲುವಾಗಲಿದ್ದು, ಪಾಕಿಸ್ತಾನದ ಈ ವಿಶ್ವದಾಖಲೆ ನುಚ್ಚುನೂರಾಗಲಿದೆ.

ಹೈದ್ರಾಬಾದ್‌ನ ಉಪ್ಪಲ್ ಮೈದಾನವು ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಆಗಿರುವ ಕಾರಣ ಹೆಚ್ಚಿನ ರನ್‌ ಹರಿದುಬರುವ ಸಾಧ್ಯತೆ ಹೆಚ್ಚಿದೆ.

ನಾಗ್ಪುರ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ನಿಗದಿತ 8 ಓವರ್ ಗಳಲ್ಲಿ 5 ವಿಕೆಟ್ ಗೆ 90 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಮ್ಯಾಥ್ಯೂ ವೇಡ್‌ (20 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಔಟಾಗದೆ 43 ರನ್‌ಗಳಿಸಿದ್ರು. ) ಮತ್ತು ಆ್ಯರೋನ್ ಫಿಂಚ್ (15 ಎಸೆತಗಳಲ್ಲಿ 4 ಬೌಂಡರಿ, 31) ಮಿಂಚಿದರು. ಭಾರತದ ಬೌಲರ್‌ಗಳಲ್ಲಿ ಅಕ್ಷರ್ ಪಟೇಲ್ ಕೇವಲ 13 ರನ್ ನೀಡಿ ಎರಡು ವಿಕೆಟ್ ಪಡೆದರು . ಬುಮ್ರಾ ಒಂದು ವಿಕೆಟ್ ಪಡೆದರು. ಹರ್ಷಲ್ ಪಟೇಲ್ 2 ಓವರ್ ಗಳಲ್ಲಿ 32 ರನ್ ನೀಡಿ ವಿಫಲರಾದರು.

ಬಳಿಕ ಭಾರತ 7.2 ಓವರ್‌ಗಳಲ್ಲಿ 4 ವಿಕೆಟ್‌ಗೆ 92 ರನ್ ಗಳಿಸಿ 4 ಎಸೆತಗಳು ಬಾಕಿ ಇರುವಂತೆಯೇ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮಾ (20 ಎಸೆತ, 4 ಬೌಂಡರಿ ಸಹಿತ ಔಟಾಗದೆ 46) ಅಜೇಯ ಇನ್ನಿಂಗ್ಸ್ ಆಡಿದರು. ಆಸೀಸ್ ಬೌಲರ್‌ಗಳಲ್ಲಿ ಆಡಮ್ ಝಂಪಾ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಒಂದು ವಿಕೆಟ್ ಪಡೆದರು.

Story first published: Saturday, September 24, 2022, 18:32 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X