ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ನಾದರೂ ರಿಷಬ್‌ ಪಂತ್‌ಗೆ ವಿಶ್ರಾಂತಿ ನೀಡಿ ಎಂದು ಸಲಹೆ ನೀಡಿದ ಮಾಜಿ ಕ್ರಿಕೆಟಿಗ

Team India Management Should Give Break To Rishabh Pant - Krishnamachari Srikkanth

ರಿಷಬ್ ಪಂತ್ ಸತತ ವೈಫಲ್ಯದ ನಡುವೆಗೂ ಭಾರತ ತಂಡದಲ್ಲಿ ಮೇಲಿಂದ ಮೇಲೆ ಅವಕಾಶಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್, ರಿಷಬ್ ಪಂತ್ ಕೆಲವು ದಿನಗಳು ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲಿ ಎಂದು ಸಲಹೆ ನೀಡಿದ್ದಾರೆ.

ವಿಶ್ವಕಪ್‌ನಿಂದಲೂ ಕಳಪೆಯಾಗಿ ಆಡುತ್ತಿರುವ ರಿಷಬ್ ಪಂತ್ ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲಿ ಎಂದು ಅವರು ಹೇಳಿದರು.

ರಿಷಬ್ ಪಂತ್ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಭಾಗವಾಗಿದ್ದರು. ಎರಡು ಪಂದ್ಯಗಳಲ್ಲಿ ಅವಕಾಶ ಪಡೆದರು, ಪಂತ್ ತಮ್ಮ ಸಾಮರ್ಥ್ಯ ತೋರಿಸುವಲ್ಲಿ ವಿಫಲರಾಗಿದ್ದರು. ನಂತರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೂಡ ಪಂತ್ ಸ್ಥಾನ ಪಡೆದರು.

ಸಂಜು ಸ್ಯಾಮ್ಸನ್‌ ಪರವಾಗಿ ನಿಂತು ಭಾರತ ತಂಡದ ಆಡಳಿತ ಮಂಡಳಿಯನ್ನು ಟೀಕಿಸಿದ ಆಶಿಶ್ ನೆಹ್ರಾ!ಸಂಜು ಸ್ಯಾಮ್ಸನ್‌ ಪರವಾಗಿ ನಿಂತು ಭಾರತ ತಂಡದ ಆಡಳಿತ ಮಂಡಳಿಯನ್ನು ಟೀಕಿಸಿದ ಆಶಿಶ್ ನೆಹ್ರಾ!

ಎರಡು ಟಿ20 ಪಂದ್ಯಗಳಲ್ಲಿ ಪಂತ್ 94.44 ಸ್ಟ್ರೈಕ್‌ ರೇಟ್‌ನಲ್ಲಿ ಕೇವಲ 17 ರನ್ ಗಳಿಸಿದರು. ಆಕ್ಲೆಂಡ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಂತ್ 23 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಔಟಾದರು. ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸಿದ ನಂತರ, ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರಿಷಬ್ ಪಂತ್ ಏಕೆ ಬ್ರೇಕ್ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಮಾತನಾಡಿದ್ದಾರೆ.

Team India Management Should Give Break To Rishabh Pant - Krishnamachari Srikkanth

ಆತನಿಗೆ ವಿಶ್ರಾಂತಿ ಅಗತ್ಯವಿದೆ

"ಆತನಿಗೆ ಕ್ರಿಕೆಟ್‌ನಿಂದ ಸ್ವಲ್ಪ ವಿರಾಮ ನೀಡಬೇಕು. ಆತ ಬ್ರೇಕ್ ನಂತರ ಬಂದು ಆಟವಾಡಬಹುದು, ಭಾರತ ತಂಡದಲ್ಲಿ ಆತನನ್ನು ಸರಿಯಾಗಿ ನಿಭಾಯಿಸಲಿಲ್ಲ. ಆತನಿಗೆ ವಿರಾಮ ನೀಡುವ ಮುನ್ನ ಒಂದೆರಡು ಪಂದ್ಯಗಳನ್ನು ಆಡಿಸಲು ಕಾಯುತ್ತಿದ್ದೀರಾ?" ಎಂದು ಕೇಳಿದರು.

ಪಂತ್‌ಗೆ ಎಚ್ಚರಿಕೆ ನೀಡಿದ ಶ್ರೀಕಾಂತ್

ರಿಷಬ್ ಪಂತ್ ತಮಗೆ ಸಿಗುತ್ತಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಶ್ರೀಕಾಂತ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಳೆಯಿಂದ ರದ್ದಾದ ಎರಡನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ತಂಡದಿಂದ ಹೊರಗುಳಿದರೆ, ರಿಷಬ್ ಪಂತ್ ಅವಕಾಶ ಪಡೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

2023ರ ಏಕದಿನ ವಿಶ್ವಕಪ್‌ಗೆ ಮುನ್ನ ರಿಷಬ್ ಪಂತ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. "ರಿಷಬ್ ಪಂತ್ ಸಿಕ್ಕ ಅವಕಾಶಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಏಕದಿನ ವಿಶ್ವಕಪ್ ಬರುತ್ತಿದೆ. ಪಂತ್ ಉತ್ತಮವಾಗಿ ಆಡುತ್ತಿಲ್ಲ ಎಂದು ಹಲವರು ಈಗಾಗಲೇ ಟೀಕೆ ಮಾಡುತ್ತಿದ್ದಾರೆ. ಪಂತ್ ತನ್ನ ಫಾರ್ಮ್ ಅನ್ನು ಕಂಡುಕೊಳ್ಳಬೇಕಿದೆ" ಎಂದು ಹೇಳಿದರು.

ರಿಷಬ್ ಪಂತ್ ಕ್ರಿಸ್‌ನಲ್ಲಿ ಹೆಚ್ಚಿನ ಸಮಯ ನಿಂತು ಆಡಬೇಕು, ಆದರೆ ಬೇಡದ ಹೊಡೆತವನ್ನು ಆಡಲು ಹೋಗಿ ವಿಕೆಟ್ ಒಪ್ಪಿಸುತ್ತಿದ್ದಾರೆ ಎಂದು ಅವರು ಹೇಳಿದರು. ನವೆಂಬರ್ 30 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಸರಣಿಯ ಅಂತಿಮ ಏಕದಿನ ಪಂದ್ಯ ನಡೆಯಲಿದೆ.

Story first published: Sunday, November 27, 2022, 20:00 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X