ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿ ಪೈಕಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಸೆಂಚುರಿಯನ್ ಅಂಗಳದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿದರೆ ನಂತರ ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಇತ್ತಂಡಗಳು ಸಮಬಲ ಸಾಧಿಸಿವೆ.
ಬಲಿಷ್ಠ ಡೆಲ್ಲಿಗೆ ಮಣ್ಣು ಮುಕ್ಕಿಸಿದ ಬೆಂಗಳೂರು: ಪಿಕೆಎಲ್ ಇತಿಹಾಸದಲ್ಲೇ ಇದು 2ನೇ ದೊಡ್ಡ ಗೆಲುವು!
ಹೀಗೆ ಇತ್ತಂಡಗಳ ನಡುವಿನ ಮೊದಲೆರೆಡು ಟೆಸ್ಟ್ ಪಂದ್ಯಗಳು ಮುಗಿದ ನಂತರ ಸರಣಿಯಲ್ಲಿ ಎರಡೂ ತಂಡಗಳು ಕೂಡ ಸಮಬಲ ಸಾಧಿಸಿರುವ ಕಾರಣದಿಂದಾಗಿ ಇದೀಗ ತೃತೀಯ ಟೆಸ್ಟ್ ಪಂದ್ಯ ವಿಜೇತರನ್ನು ನಿರ್ಧರಿಸುವ ಪಂದ್ಯವಾಗಿ ಪರಿಣಮಿಸಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕೇಪ್ ಟೌನ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯ ಸರಣಿಯಲ್ಲಿ ಯಾವುದು ವಿಜೇತ ತಂಡವಾಗಲಿದೆ ಎಂಬುದನ್ನು ನಿರ್ಧರಿಸಲಿದ್ದು ಎರಡೂ ತಂಡಗಳಿಗೂ ಕೂಡಾ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ದ್ರಾವಿಡ್ ಮತ್ತು ನಾನು ಒಂದೇ ಕುಟುಂಬದವರು ಎಂದ ನಟಿ; ದ್ರಾವಿಡ್‌ಗೂ ಆ ನಟಿಗೂ ಇರುವ ನಂಟೇನು?
ಇನ್ನು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದೇ ಆದರೆ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ದಾಖಲೆಯನ್ನು ನಿರ್ಮಿಸಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಪಡೆಗೆ ಈ ಪಂದ್ಯ ಅತ್ಯಮೂಲ್ಯವಾಗಿದ್ದು ಸಾಕಷ್ಟು ಒಳ ಚರ್ಚೆಗಳ ನಂತರ ಮೊಹಮ್ಮದ್ ಸಿರಾಜ್ ಬದಲು ಉಮೇಶ್ ಯಾದವ್ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿದೆ. ಹೌದು, ಮೊದಲೆರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮೊಹಮ್ಮದ್ ಸಿರಾಜ್ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೊಳಗಾದ ಕಾರಣ ತೃತೀಯ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದು ಸಿರಾಜ್ ಬದಲಿಗೆ ಉಮೇಶ್ ಯಾದವ್ ಅವರನ್ನು ಟೀಮ್ ಇಂಡಿಯಾ ಕಣಕ್ಕಿಳಿಸಿದೆ. ಮೊಹಮ್ಮದ್ ಸಿರಾಜ್ ಗಾಯದ ಸಮಸ್ಯೆಗೊಳಗಾದಾಗ ತಂಡದ ಹಿರಿಯ ಬೌಲರ್ ಇಶಾಂತ್ ಶರ್ಮಾ ಅವರಿಗೆ ಅವಕಾಶ ನೀಡಬಹುದು ಎಂಬ ಊಹೆಗಳು ಕೂಡ ಇದ್ದವು. ಆದರೆ ಇದಕ್ಕೆ ಅವಕಾಶ ನೀಡದ ಬಿಸಿಸಿಐ ಇಶಾಂತ್ ಶರ್ಮಾರನ್ನು ಮತ್ತೊಮ್ಮೆ ಬೆಂಚ್ ಕಾಯುವಂತೆ ಮಾಡಿದೆ. ಈ ಕುರಿತಾಗಿ ಮಾತನಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್ ಬಿಸಿಸಿಐ ವಿರುದ್ಧ ಈ ಕೆಳಕಂಡಂತೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ತಂಡದ ಪರ ಅತ್ಯುತ್ತಮ ಆಟವನ್ನು ಅಡಿರುವ ಆಟಗಾರನನ್ನು ಗೌರವಿಸಿ ಎಂದ ಶಾನ್ ಪೊಲಾಕ್
ಇಶಾಂತ್ ಶರ್ಮಾ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಅವಕಾಶ ಸಿಗದೇ ಇರುವುದರ ಕುರಿತು ಮಾತನಾಡಿರುವ ಶಾನ್ ಪೊಲಾಕ್ ಇಶಾಂತ್ ಶರ್ಮಾ ಈ ಹಿಂದೆ ಹಲವಾರು ಬಾರಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನವನ್ನು ನೀಡಿರುವಂತಹ ಆಟಗಾರನಾಗಿದ್ದು ಬಿಸಿಸಿಐ ಆತ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಗೌರವಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಆತನ ಜತೆ ಸಂಪರ್ಕಿಸಿ ಮಾತುಕತೆಯನ್ನು ನಡೆಸಿ ಆಯ್ಕೆ ಮಾಡದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ತಿಳಿಸುವುದು ಉತ್ತಮ ಎಂದು ಶಾನ್ ಪೊಲಾಕ್ ಅಭಿಪ್ರಾಯಪಟ್ಟಿದ್ದಾರೆ.
ಇಶಾಂತ್ ಶರ್ಮಾರಿಗೆ ತೃತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಬೇಕಿತ್ತು
ಇನ್ನೂ ಮುಂದುವರೆದು ಇಶಾಂತ್ ಶರ್ಮಾ ಕುರಿತಾಗಿ ಮಾತನಾಡಿರುವ ಶಾನ್ ಪೊಲಾಕ್ ಮೊದಲೆರಡು ಪಂದ್ಯಗಳಲ್ಲಿ ಪಿಚ್ ಸ್ಥಿತಿಯನ್ನು ನೋಡಿದ ಟೀಮ್ ಇಂಡಿಯಾ ಇಶಾಂತ್ ಶರ್ಮಾರಿಗೆ ತೃತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ನೀಡಬೇಕಿತ್ತು, ಈ ಹಿಂದೆ ಇಂತಹ ಪಿಚ್‌ಗಳಲ್ಲಿ ಉತ್ತಮ ಆಟವನ್ನು ಆಡಿರುವ ಅನುಭವ ಹೊಂದಿರುವ ಇಶಾಂತ್ ಶರ್ಮಾ ಈ ಪಂದ್ಯಕ್ಕೆ ಸೂಕ್ತ ಆಯ್ಕೆಯಾಗಿದ್ದರು ಎಂದು ಶಾನ್ ಪೊಲಾಕ್ ಇಶಾಂತ್ ಶರ್ಮಾ ಪರ ಬ್ಯಾಟ್ ಬೀಸಿದ್ದಾರೆ.
ಇಶಾಂತ್ ಶರ್ಮಾ ಬದಲು ಉಮೇಶ್ ಯಾದವ್ ಆಯ್ಕೆಯಾಗಿದ್ದೇಕೆ?
ಸಾಕಷ್ಟು ಅನುಭವವನ್ನು ಹೊಂದಿರುವ ಇಶಾಂತ್ ಶರ್ಮಾ ಬದಲು ಉಮೇಶ್ ಯಾದವ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶವನ್ನು ನೀಡಲು ಪ್ರಮುಖ ಕಾರಣ ಈ ಹಿಂದೆ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಸರಣಿಯಲ್ಲಿ ಉಮೇಶ್ ಯಾದವ್ ನೀಡಿದ್ದ ಪ್ರದರ್ಶನ. ಹೌದು, ಇಂಗ್ಲೆಂಡ್ ನೆಲದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಉಮೇಶ್ ಯಾದವ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed