ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನಿಲ್ಲದೇ ನಮ್ಮ ದೇಶಕ್ಕೆ ಪ್ರವಾಸ ಕೈಗೊಂಡ ಟೀಮ್ ಇಂಡಿಯಾ ಸೋತಿದೆ ಎಂದ ಡೇಲ್ ಸ್ಟೇನ್!

Team India missed Ravindra Jadeja in South Africa tour says Dale Steyn

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟೆಸ್ಟ್ ಹಾಗೂ ಏಕದಿನ ಸರಣಿಗಳು ಮುಕ್ತಾಯಗೊಂಡರೂ ಸಹ ಆ ಸರಣಿಗಳ ಕುರಿತಾದ ಚರ್ಚೆಗಳು ಮಾತ್ರ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡ ಟೀಮ್ ಇಂಡಿಯಾ ಸಾಲು ಸಾಲು ಸೋಲುಗಳನ್ನು ಕಂಡದ್ದು ಮಾತ್ರವಲ್ಲದೇ ತಂಡದ ದೊಡ್ಡ ಬದಲಾವಣೆಗಳಿಗೂ ಕೂಡ ಸಾಕ್ಷಿಯಾಯಿತು. ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತ ನಂತರ ತಂಡದಲ್ಲಿ ಭಾರಿ ಬದಲಾವಣೆಯಾಗಿದ್ದು ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಘೋಷಿಸಿ ಎಲ್ಲರಿಗೂ ಅಚ್ಚರಿಯುಂಟಾಗುವಂತೆ ಮಾಡಿದರು.

ಸರಣಿ ಸೋಲು: ಬಲಿಷ್ಠ ಭಾರತ ದಿಢೀರನೆ ಕಳಪೆಯಾಗಲು ಹೇಗೆ ಸಾಧ್ಯ ಎಂದು ಕುಟುಕಿದ ರವಿಶಾಸ್ತ್ರಿಸರಣಿ ಸೋಲು: ಬಲಿಷ್ಠ ಭಾರತ ದಿಢೀರನೆ ಕಳಪೆಯಾಗಲು ಹೇಗೆ ಸಾಧ್ಯ ಎಂದು ಕುಟುಕಿದ ರವಿಶಾಸ್ತ್ರಿ

ಇನ್ನು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳುವುದಕ್ಕೂ ಮುನ್ನ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಬಹುತೇಕ ಕ್ರಿಕೆಟ್ ಅಭಿಮಾನಿಗಳು ಟೀಮ್ ಇಂಡಿಯಾ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಸರಣಿ ಮಾತ್ರವಲ್ಲದೆ ಟೆಸ್ಟ್ ಸರಣಿಯನ್ನು ಕೂಡ ಗೆದ್ದು ಇತಿಹಾಸ ಬರೆಯಲಿದೆ ಎಂದು ಊಹಿಸಿದ್ದರು. ಆದರೆ ಈ ಊಹೆ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಎಡವಿದ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು ಗೆಲ್ಲಲಿಲ್ಲ ಹಾಗೂ ನಂತರ ನಡೆದ ಏಕದಿನ ಸರಣಿಯಲ್ಲಿಯೂ ಕೂಡ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಈ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅಲಭ್ಯತೆಯಿಂದ ಕೆಎಲ್ ರಾಹುಲ್ ನಾಯಕತ್ವವನ್ನು ನಿರ್ವಹಿಸಿ ಚೊಚ್ಚಲ ನಾಯಕತ್ವದಲ್ಲಿಯೇ ಎಡವಿದರು.

ಯುವರಾಜ್ ಸಿಂಗ್ ದಂಪತಿ ಮುದ್ದು ಮಗುವಿಗೆ ತಂದೆ - ತಾಯಿಯಾದ ಖುಷಿ ಹಂಚಿಕೊಂಡಿದ್ದು ಹೀಗೆಯುವರಾಜ್ ಸಿಂಗ್ ದಂಪತಿ ಮುದ್ದು ಮಗುವಿಗೆ ತಂದೆ - ತಾಯಿಯಾದ ಖುಷಿ ಹಂಚಿಕೊಂಡಿದ್ದು ಹೀಗೆ

ಹೀಗೆ ಏಕದಿನ ಸರಣಿಯನ್ನು ಸೋಲಲು ಕೆಎಲ್ ರಾಹುಲ್ ಅವರ ನಾಯಕತ್ವ ಕಾರಣ ಎಂದು ಕೆಲವೊಂದಿಷ್ಟು ಮಂದಿ ಟೀಕಿಸುತ್ತಿದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರಿಯರು ಕೆಲವೊಂದಷ್ಟು ಆಟಗಾರರ ಅಲಭ್ಯತೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾಗೆ ಹಿನ್ನಡೆಯನ್ನುಂಟು ಮಾಡಿತು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಹಲವಾರು ಮಾಜಿ ಕ್ರಿಕೆಟಿಗರು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಸೋಲಲು ಕಾರಣವೇನು ಎಂಬುದನ್ನು ತಮ್ಮ ದೃಷ್ಟಿಕೋನದಲ್ಲಿ ತಿಳಿಸಿದ್ದು, ಇದೀಗ ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ಕೂಡ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಸೋಲಲು ಕಾರಣವೇನು ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಟೀಮ್ ಇಂಡಿಯಾಗೆ ಆ ಆಟಗಾರನ ಅನುಪಸ್ಥಿತಿ ಕಾಡಿತು

ಟೀಮ್ ಇಂಡಿಯಾಗೆ ಆ ಆಟಗಾರನ ಅನುಪಸ್ಥಿತಿ ಕಾಡಿತು

ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿ ಹಿನ್ನಡೆ ಅನುಭವಿಸಿತು ಎಂದು ಹೇಳಿಕೆ ನೀಡಿರುವ ಡೇಲ್ ಸ್ಟೇನ್ ಇದಕ್ಕೆ ಕಾರಣ ತಂಡದಲ್ಲಿ ರವೀಂದ್ರ ಜಡೇಜಾ ಇಲ್ಲದೇ ಇದ್ದದ್ದು ಎಂದಿದ್ದಾರೆ. "ಟೀಮ್ ಇಂಡಿಯಾ ಖಂಡಿತವಾಗಿಯೂ ರವೀಂದ್ರ ಜಡೇಜಾರನ್ನು ಮಿಸ್ ಮಾಡಿಕೊಂಡಿದೆ. ಆತನೋರ್ವ ಅತ್ಯದ್ಭುತ ಆಟಗಾರ. ತನ್ನ ಎಡಗೈ ಸ್ಪಿನ್ ಬೌಲಿಂಗ್‌ನಿಂದ ಆಟವನ್ನು ನಿಯಂತ್ರಿಸಬಲ್ಲ ರವೀಂದ್ರ ಜಡೇಜಾ ಬ್ಯಾಟಿಂಗ್ ವಿಭಾಗದಲ್ಲಿಯೂ ಕೂಡಾ ಕೊಡುಗೆಯನ್ನು ನೀಡುತ್ತಿದ್ದರು" ಎಂದು ಡೇಲ್ ಸ್ಟೇನ್ ಹೇಳಿಕೆ ನೀಡಿದ್ದಾರೆ.

ಟೀಮ್ ಇಂಡಿಯಾಗೆ ಬೌಲಿಂಗ್ ಸಮಸ್ಯೆ ಕಾಡಿತು

ಟೀಮ್ ಇಂಡಿಯಾಗೆ ಬೌಲಿಂಗ್ ಸಮಸ್ಯೆ ಕಾಡಿತು

ಇನ್ನೂ ಮುಂದುವರೆದು ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಲು ಕಾರಣ ಏನೆಂಬುದರ ಕುರಿತು ಮಾತನಾಡಿರುವ ಡೇಲ್ ಸ್ಟೇನ್ ಟೀಮ್ ಇಂಡಿಯಾಗೆ ಬೌಲಿಂಗ್ ಕೊರತೆ ಹೆಚ್ಚಾಗಿ ಕಾಡಿತು ಎಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಅವರಿಗೆ ಸಾಥ್ ನೀಡುವಂತಹ ಮತ್ತೊಬ್ಬ ಬೌಲರ್ ಅಗತ್ಯತೆ ಇತ್ತು, ಸುಮಾರು 140 - 145 ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯಬಲ್ಲ ಬೌಲರ್‌ನ ಅಗತ್ಯತೆ ತಂಡಕ್ಕಿತ್ತು ಆದರೆ ಅಂತಹ ಸಾಮರ್ಥ್ಯವಿರುವ ಬೌಲರ್ ತಂಡದಲ್ಲಿ ಇಲ್ಲದೇ ಇದ್ದದ್ದು ಟೀಮ್ ಇಂಡಿಯಾಗೆ ಸಮಸ್ಯೆಯಾಯಿತು ಎಂದು ಡೇಲ್ ಸ್ಟೈನ್ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ?

ಟೀಮ್ ಇಂಡಿಯಾದ ಮುಂದಿನ ಸರಣಿ ಯಾವಾಗ?

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಸೋತಿರುವ ಟೀಮ್ ಇಂಡಿಯಾ ಫೆಬ್ರವರಿ ತಿಂಗಳಿನಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಈ ಕೆಳಕಂಡ ಪಂದ್ಯಗಳಲ್ಲಿ ಭಾಗವಹಿಸಲಿದೆ.


ಮೊದಲನೇ ಏಕದಿನ ಪಂದ್ಯ: ಫೆಬ್ರವರಿ 6ಕ್ಕೆ ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ

ದ್ವಿತೀಯ ಏಕದಿನ ಪಂದ್ಯ: ಫೆಬ್ರವರಿ 9ಕ್ಕೆ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣ

ತೃತೀಯ ಏಕದಿನ ಪಂದ್ಯ: ಫೆಬ್ರವರಿ 12ಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ


ಪ್ರಥಮ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 15ಕ್ಕೆ, ಬರಬತಿ ಕ್ರೀಡಾಂಗಣ, ಕಟಕ್

ದ್ವಿತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 18ಕ್ಕೆ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣ, ವಿಶಾಖಪಟ್ಟಣ

ತೃತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 20, ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

KL Rahul ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ | Oneindia Kannada

Story first published: Wednesday, January 26, 2022, 13:04 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X