ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಮೂವರ ನಾಯಕತ್ವದಲ್ಲಿ ಭಾರತ ಟಿ20 ಮಾದರಿಯಲ್ಲಿ ಸೋತೇ ಇಲ್ಲ!

Team India never lost a t20I match under these 3 captains

2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್‌ಅನ್ನು ಎತ್ತಿ ಹಿಡಿದಿತ್ತು. ಆದರೆ ಅದಾದ ಬಳಿಕ ಭಾರತ ತಂಡಕ್ಕೆ ಮತ್ತೆ ಆ ಸಾಧನೆಯನ್ನು ಪುನರಾವರ್ತಿಸಲು ಈವರೆಗೆ ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಭಾರತ ತಂಡ ಆ ಪ್ರಯತ್ನದಲ್ಲಿದೆ. ಆದರೆ ಭಾರತವಿಶ್ವಕೊ್ ಗೆಲ್ಲಲು ಸಾಧ್ಯವಾಗದಿದ್ದರೂ ಟಿ20 ಮಾದರಿಯಲ್ಲಿ ಅದ್ಭುತವಾದ ದಾಖಲೆಯನ್ನು ಹೊಂದಿದೆ.

ಭಾರತ ಟಿ20 ಮಾದರಿಯಲ್ಲಿ ಈವರೆಗೆ ಒಟ್ಟು 9 ನಾಯಕರನ್ನು ಕಂಡಿದೆ. ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬ ನಾಯಕ ಕುಡ ಭಾರತ ತಂಡಕ್ಕೆ ತನ್ನದೇ ರೀತಿಯ ಕೊಡುಗೆಯನ್ನು ನೀಡಿದ್ದಾರೆ. ಕೆಲವರು ಸುದೀರ್ಘ ಕಾಲ ತಂಡವನ್ನು ಮುನ್ನಡೆಸುವ ಅದೃಷ್ಟವನ್ನು ಹೊಂದಿದ್ದರೆ ಇನ್ನು ಕೆಲವರಿಗೆ ಬೇರೆ ಬೇರೆ ಕಾರಣಗಳಿಂದಾಗಿ ಕೆಲವೇ ಸಮಯಗಳಿಗೆ ನಾಯಕನಾಗಿ ಮುನ್ನಡೆಸುವ ಅವಕಾಶ ದೊರೆತಿದೆ.

ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹ

ಸೋಲು ಗೆಲುವು ಈ ಕ್ರೀಡೆಯ ಭಾಗವಾಗಿದ್ದರೂ ಭಾರತ ತಂಡವನ್ನು ಮುನ್ನಡೆಸಿದ 9 ನಾಯಕರ ಪೈಕಿ ಈ ಮೂವರ ನಾಯಕತ್ವದಲ್ಲಿ ಭಾರತ ತಂಡ ಸೋಲನ್ನೇ ಅನುಭವಿಸಿಲ್ಲ. ಯಾರು ಆ ಮೂವರು ನಾಯಕರು? ಮುಂದೆ ಓದಿ..

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

ಟಿ20 ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಮೊದಲ ನಾಯಕ ವೀರೇಂದ್ರ ಸೆಹ್ವಾಗ್. ಈ ವಿಚಾರ ಹಲವು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದೇ ಇಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ 2006ರಲ್ಲಿ ಭಾರತ ತನ್ನ ಪ್ರಪ್ರಥಮ ಟಿ20 ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಭಾರತ ತಂಡ ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದು ಬೀಗಿತ್ತು. ಅದಾದ ಬಳಿಕ 2007ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಟಿ20 ನಾಯಕತ್ವವನ್ನು ಎಂಎಸ್ ಧೋನಿ ವಹಿಸಿಕೊಂಡರು. ದುರದೃಷ್ಟವಶಾತ್ ವೀರೇಂದ್ರ ಸೆಹ್ವಾಗ್‌ಗೆ ಭಾರತ ತಂಡವನ್ನು ಮತ್ತೊಮ್ಮೆ ಮುನ್ನಡೆಸುವ ಅವಕಾಶವೇ ದೊರೆಯಲಿಲ್ಲ. ಹೀಗಾಗಿ ಸೆಹ್ವಾಗ್ ಸೋಲರಿಯದ ನಾಯಕನಾಗಿ ಉಳಿದುಕೊಂಡರು.

ಸುರೇಶ್ ರೈನಾ

ಸುರೇಶ್ ರೈನಾ

ಭಾರತ ತಂಡದಲ್ಲಿ ಭರವಸೆಯ ಆಟಗಾರನಾಗಿ ಮಿಂಚಿದ್ದ ಸುರೇಶ್ ರೈನಾ ಆಲ್‌ರೌಂಡರ್ ಆಗಿ ತಂಡಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಅನುಭವಿ ಆಟಗಾರಿಗೆ ಒಮ್ಮೆ ವಿಶ್ರಾಂತಿ ನೀಡಿದ್ದಾಗ ಭಾರತ ಟಿ20 ತಂಡವನ್ನು ಮುನ್ನಡೆಸುವ ಅವಕಾಶ ಸುರೇಶ್ ರೈನಾಗೆ ದೊರೆತಿತ್ತು. ಈ ಸಂದರ್ಭದಲ್ಲಿ ಮೂರು ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು ಸುರೇಶ್ ರೈನಾ. ಮೂರು ಪಂದ್ಯದಲ್ಲಿಯೂ ಭಾರತ ಗೆಲುವು ಸಾಧಿಸಿತು. ಆದರೆ ಅದಾದ ಬಳಿಕ ಸುರೇಶ್ ರೈನಾಗೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ದೊರೆಯಲಿಲ್ಲ. ನಂತರ ಬ್ಯಾಟಿಂಗ್‌ನಲ್ಲಿ ಮಂಕಾದ ರೈನಾ ಭಾರತ ತಂಡದಿಂದಲೂ ಹೊರಬಿದ್ದರು.

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಭಾರತದ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರಲ್ಲಿದ್ದ ನಾಯಕತ್ವದ ಗುಣ ಇತ್ತೀಚೆಗಷ್ಟೇ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಯಿತು. ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅದ್ಭುತ ರೀತಿಯಲ್ಲಿ ತಂಡವನ್ನು ಮುನ್ನಡೆಸಿದರು. ಮಾತ್ರವಲ್ಲ ತಂಡವನ್ನು ಚೊಚ್ಚಲ ಪ್ರಯತ್ನದಲ್ಲಿಯೇ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. ಈ ಯಶಸ್ಸಿನ ನಂತರ ಭಾರತದ ಖಾಯಂ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಂಡಿದ್ದಾಗ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಹಾರ್ದಿಕ್ ಪಂಡ್ಯಾಗೆ ದೊರೆಯಿತು. ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ ಹಾರ್ದಿಕ್ ಪಾಂಡ್ಯ ಅಲ್ಲಿಯೂ ಸೈ ಎನಿಸಿಕೊಂಡರು. ಸರಣಿಯ ಮೂರು ಪಂದ್ಯಗಳಲ್ಲಿಯೂ ಗೆಲ್ಲುವ ಮೂಲಕ ಭಾರತ ಎದುರಾಳಿಗೆ ವೈಟ್‌ವಾಶ್ ಬಳಿದು ಸರಣಿ ವಶಕ್ಕೆ ಪಡೆದುಕೊಂಡಿತು. ಹೀಗಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿಯೂ ಭಾರತ ತಂಡ ಈವರೆಗೆ ಅಜೇಯವಾಗುಳಿದಿದೆ.

Story first published: Friday, August 12, 2022, 10:26 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X