ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಟೀಮ್‌ ಇಂಡಿಯಾದ ಯಂಗ್‌ ಬ್ಯಾಟ್ಸ್‌ಮನ್‌ ಬ್ಯಾನ್‌

Prithvi Shaw Suspended for Doping

ಹೊಸದಿಲ್ಲಿ, ಜುಲೈ 30: ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸುತ್ತಿರುವ ಯುವ ಆಟಗಾರ ಪೃಥ್ವಿ ಶಾ, ಡೋಪಿಂಗ್‌ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಶಿಕ್ಷೆ ಹೇರಿದೆ.

ಪೃಥ್ವಿ ಶಾ ಅವರ ಮೂತ್ರದ ಮಾದರಿಯಲ್ಲಿ ನಿಷೇಧಿತ ಮದ್ದು ಪತ್ತೆಯಾಗಿದೆ. ಸಾಮಾನ್ಯವಾಗಿ ಕೆಮ್ಮಿಗೆ ನೀಡಲಾಗುವ ಸಿರಪ್‌ನಲ್ಲಿ ಇರುವಂತಹ ಟರ್ಬುಟಲೈನ್‌ ಅಂಶವು ನಿಷೇಧಿತ ಮದ್ದಿನ ಪಟ್ಟಿಯಲ್ಲಿದ್ದು, ಪೃಥ್ವಿ ಶಾ ಅವರ ಮೂತ್ರದಲ್ಲೂ ಇದೇ ಮದ್ದು ಪತ್ತೆಯಾಗಿದೆ.

ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌ಭಾರತೀಯ ವಧುವನ್ನು ವರಿಸಲಿರುವ ಪಾಕಿಸ್ತಾನದ ವೇಗದ ಬೌಲರ್‌

"ಕಳೆದ ಫೆಬ್ರವರಿಯಲ್ಲಿ ನಡೆದ ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಸಂದರ್ಭದಲ್ಲಿ ಬಿಸಿಸಿಐನ ಡೋಪಿಂಗ್‌ ತಡೆ ಘಟಕ ಕೈಗೊಂಡ ಡೋಪಿಂಗ್‌ ಪರೀಕ್ಷೆ ವೇಳೆ ಪೃಥ್ವಿ ಶಾ ಅವರು ನೀಡಿದ್ದ ಮೂತ್ರದ ಮಾದರಿಯಲ್ಲಿ ನಿಷೇಧಿತ ಟರ್ಬುಟಲೈನ್‌ ಮದ್ದಿನ ಅಂಶ ಪತ್ತೆಯಾಗಿದೆ. ವಿಶ್ವ ಡೋಪಿಂಗ್‌ ನಿಗ್ರಹ ಸಂಸ್ಥೆ ಪಟ್ಟಿ ಮಾಡಿರುವ ನಿಷೇಧಿತ ಮದ್ದುಗಳಲ್ಲಿ ಟರ್ಬುಟಲೈನ್‌ ಕೂಡ ಒಂದಾಗಿದೆ," ಎಂದು ಬಿಸಿಸಿಐ ಬಿಡುಗಡೆ ಮಾಡಿರುವ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಜುಲೈ 16ರಂದು ಶಾ ವಿರುದ್ಧ ಬಿಸಿಸಿಐನ ಡೋಪಿಂಗ್‌ ತಡೆ ನಿಯಮ ಆರ್ಟಿಕಲ್‌ 2.1 ಪ್ರಕಾರ ಪ್ರಥಮಿಕ ಕ್ರಮ ಕೈಗೊಳ್ಳಲಾಗಿದ್ದು, ಅಮಾನತ್ತಿನಲ್ಲಿ ಇಡಲಾಗಿತ್ತು. ಶಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಕೆಮ್ಮಿನ ನಿವಾರಣೆ ಸಲುವಾಗಿ ತೆಗೆದುಕೊಂಡ ಸಿರಪ್‌(ಔಷಧ) ನಿಂದ ಈ ರೀತಿ ಆಗಿರುವುದಾಗಿ ಹೇಳಿದ್ದರು," ಎಂದು ಬಿಸಿಸಿಐ ವಿವರಿಸಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

"ಪದೇ ಪದೇ ಎದುರಾಗುತ್ತಿದ್ದ ಗಂಟಲಿನ ಸೋಂಕಿನ ನಿವಾರಣೆ ಸಲುವಾಗಿ ತೆಗೆದುಕೊಂಡ ಔಷಧದಲ್ಲಿ ಟರ್ಬುಟಲೈನ್‌ ಮದ್ದು ಇರುವುದಾಗಿ ಪೃಥ್ವಿ ಶಾ ಕೊಟ್ಟಿರುವ ಕಾರಣ ಬಿಸಿಸಿಐಗೆ ತೃಪ್ತಿ ನೀಡಿದೆ. ಅಂದಹಾಗೆ ಟರ್ಬುಟಲೈನ್‌ ಸಾಮರ್ಥ್ಯ ವರ್ಧನೆಗೆ ತೆಗೆದುಕೊಂಡಿರುವ ಮದ್ದಲ್ಲ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪರಿಶೀಲನೆ ನಡೆಸಿ ಹಾಗೂ ಪರಿಣತರ ಸಲಹೇ ಬಳಿಕ ಪೃಥ್ವಿ ಶಾಗೆ 8 ತಿಂಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ," ಎಂದು ಹೇಳಿದೆ.

ಈ ಮೂಲಕ 19 ವರ್ಷದ ಆರಂಭಿಕ ಬ್ಯಾಟ್ಸ್‌ಮನ್‌ ನವೆಂಬರ್‌ 15ರವರೆಗೆ ಯಾವುದೇ ಪಂದ್ಯಗಳನ್ನು ಆಡುವಂತಿಲ್ಲ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ ರಾಜಸ್ಥಾನ ತಂಡ ದಿವ್ಯ ಗಜರಾಜ್‌ ಮತ್ತು ವಿದರ್ಭ ತಂಡದ ಅಕ್ಷಯ್‌ ದುಲ್ಲಾವರ್‌ ಕೂಡ ಡೋಪಿಂಗ್‌ ನಿಯಮ ಉಲ್ಲಂಘಿಸಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ಪೃಥ್ವಿ ಶಾ ಟೆಸ್ಟ್‌ ಕ್ರಿಕೆಟ್‌ ಸಾಧನೆ

ಪೃಥ್ವಿ ಶಾ ಟೆಸ್ಟ್‌ ಕ್ರಿಕೆಟ್‌ ಸಾಧನೆ

02 ಪಂದ್ಯ
237 ರನ್‌
134 ಗರಿಷ್ಠ
118.50 ಸರಾಸರಿ
94.04 ಸ್ಟ್ರೈಕ್‌ ರೇಟ್‌
01 ಶತಕ
01 ಅರ್ಧಶತಕ

ಪ್ರಥಮ ದರ್ಜೆಯಲ್ಲಿ ನೀಡಿದ ಪ್ರದರ್ಶನ

ಪ್ರಥಮ ದರ್ಜೆಯಲ್ಲಿ ನೀಡಿದ ಪ್ರದರ್ಶನ

17 ಪಂದ್ಯ
1767 ರನ್‌
188 ಗರಿಷ್ಠ
60.93 ಸರಾಸರಿ
78.81 ಸ್ಟ್ರೈಕ್‌ರೇಟ್‌
08 ಶತಕ
08 ಅರ್ಧಶತಕ

ಲಿಸ್ಟ್‌ 'ಎ' ಕ್ರಿಕೆಟ್‌

ಲಿಸ್ಟ್‌ 'ಎ' ಕ್ರಿಕೆಟ್‌

26 ಪಂದ್ಯ
1045 ರನ್‌
132 ಗರಿಷ್ಠ
40.19 ಸರಾಸರಿ
114.33 ಸ್ಟ್ರೈಕ್‌ರೇಟ್‌
03 ಶತಕ
06 ಅರ್ಧಶತಕ

ಟಿ20 ಕ್ರಿಕೆಟ್‌ ಸ್ಟ್ಯಾಟ್ಸ್‌

ಟಿ20 ಕ್ರಿಕೆಟ್‌ ಸ್ಟ್ಯಾಟ್ಸ್‌

33 ಪಂದ್ಯ
732 ರನ್‌
99 ಗರಿಷ್ಠ
22.18 ಸರಾಸರಿ
143.24 ಸ್ಟ್ರೈಕ್‌ರೇಟ್‌
05 ಅರ್ಧಶತಕ

Story first published: Tuesday, July 30, 2019, 22:23 [IST]
Other articles published on Jul 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X