ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಿಮ T20 ಪಂದ್ಯದಲ್ಲಿ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರುತುರಾಜ್ ಗಾಯಕ್ವಾಡ್‌: ಭಾರೀ ಟೀಕೆ

Ruturaj gaikwad

ಭಾರತ-ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಪರಿಣಾಮ ನಿರ್ಣಾಯಕ ಪಂದ್ಯವು ಯಾವುದೇ ಫಲಿತಾಂಶವಿಲ್ಲ ಅಂತ್ಯಗೊಂಡ ಪರಿಣಾಮ ಸರಣಿಯು 2-2ರಿಂದ ಸಮಬಲಗೊಂಡಿತು.

ಪಂದ್ಯದುದ್ದಕ್ಕೂ ಕಾಡಿದ ಮಳೆರಾಯ ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ಸುಳ್ಳಲ್ಲ. ಆದ್ರೆ ಇದರ ಜೊತೆಗೆ ಟೀಂ ಇಂಡಿಯಾ ಓಪನರ್ ರುತುರಾಜ್ ಗಾಯಕ್ವಾಡ್ ಕೆಎಸ್‌ಸಿಎ ಗ್ರೌಂಡ್ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿದ್ದು, ಟೀಂ ಇಂಡಿಯಾವನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಮಳೆಯಿಂದಾಗಿ ಪಂದ್ಯ ನಿಧಾನಗತಿಯಲ್ಲಿ ಪ್ರಾರಂಭಗೊಂಡು ಒಂದು ಓವರ್ ಕಡಿತಗೊಂಡು 19 ಓವರ್‌ಗೆ ನಿಗದಿಯಾಯಿತು.

ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರುತುರಾಜ್ ಗಾಯಕ್ವಾಡ್

ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ರುತುರಾಜ್ ಗಾಯಕ್ವಾಡ್

ಪಂದ್ಯ ಇನ್ನೇನು ಪ್ರಾರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ಡಗೌಟ್‌ನಲ್ಲಿ ಕುಳಿತಿದ್ದ ರುತುರಾಜ್ ಗಾಯಕ್ವಾಡ್ ಬಳಿಗೆ ತೆರಳಿದ ಗ್ರೌಂಡ್ ಸಿಬ್ಬಂದಿ ಪಕ್ಕದ ಸೀಟ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಮೈಗೆ ತಾಗಿಸಿ ಸೆಲ್ಫಿ ತೆಗೆದುಕೊಳ್ಳಲು ಬಂದ ಎಂಬ ಕಾರಣಕ್ಕೆ ರುತುರಾಜ್ ಆತನಿಗೆ ಅಂತರ ಕಾಯ್ದುಕೊಳ್ಳು ಎಂದು ಹೇಳಿದ್ದಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಆತನಿಗೆ ನಿರಾಕರಿಸಿದ್ದಾರೆ.

ಆತ ಸೆಲ್ಫಿಗೆ ಪ್ರಯತ್ನಿಸಿದರು ಸಹ ರುತುರಾಜ್ ಗಾಯಕ್ವಾಡ್ ಫೋಟೋಗೆ ಸರಿಯಾಗಿ ಫೋಟೋ ತೆಗೆದುಕೊಳ್ಳಲು ನಿರಾಕರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಗಾಯಕ್ವಾಡ್‌ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿನ್ನ ವರ್ತನೆಗೆ ನಾಚಿಕೆಯಾಗಬೇಕು ಎಂದು ಟೀಕೆ

ರುತುರಾಜ್ ಗಾಯಕ್ವಾಡ್ ಸ್ಟೇಡಿಯಂ ಸಿಬ್ಬಂದಿಯೊಂದಿಗೆ ನಡೆದುಕೊಂಡ ರೀತಿ ನಿಜಕ್ಕೂ ನಾಚಿಕೆಯಿಲ್ಲದ ನಡವಳಿಕೆ ಎಂದು ನೆಟ್ಟಿಗರೊಬ್ಬರು ರುತುರಾಜ್ ಗಾಯಕ್ವಾಡ್‌ರನ್ನ ಟೀಕಿಸಿದ್ದಾರೆ. ಉತ್ತಮ ಮೈದಾನವನ್ನ ಒದಗಿಸಲು ಅವರು ನಿಮಗಾಗಿ ಕೆಲಸ ಮಾಡುತ್ತಾರೆ. ಮೊದಲು ಅವರನ್ನು ಗೌರವಿಸಿ ಎಂದು ಕಿಡಿಕಾರಿದ್ದಾರೆ.

ಮಳೆಯಿಂದಾಗಿ ಅಂತಿಮ ಟಿ20 ಪಂದ್ಯ ರದ್ದು: ಟಿಕೆಟ್‌ಗಳ ಶೇ. 50ರಷ್ಟು ಹಣ ಮರುಪಾವತಿ

ಅಸಹ್ಯಕರ ವರ್ತನೆ ನಿನ್ನದು ರುತುರಾಜ್!

ಇನ್ನೂ ಕೆಲ ನೆಟ್ಟಿಗರು ರುತುರಾಜ್ ಗ್ರೌಂಡ್ ಸಿಬ್ಬಂದಿಯೊಂದಿಗೆ ನಡೆದುಕೊಂಡ ರೀತಿಯನ್ನ ಗಮನಿಸಿ ನಿನ್ನದು ಅಸಹ್ಯಕರ ವರ್ತನೆ ಎಂದು ಗಾಯಕ್ವಾಡ್‌ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. #shameonruturaj ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ವೀಡಿಯೋವನ್ನ ಪೋಸ್ಟ್‌ ಮಾಡಿ ರುತುರಾಜ್ ವರ್ತನೆಯನ್ನ ವಿರೋಧಿಸಿದ್ದಾರೆ.

ರಿಷಭ್ ಪಂತ್ ಟಿ20 ವಿಶ್ವಕಪ್ ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದು ಅನುಮಾನ: ವಾಸಿಂ ಜಾಫರ್

ಅವಕಾಶಗಳನ್ನ ಕಳೆದುಕೊಂಡ ರಿಷಬ್ ಪಂತ್ !! | *Cricket | OneIndia Kannada

ರೋಹಿತ್ ಶರ್ಮಾ ನೋಡಿ ಕಲಿಯಿರಿ ಎಂದು ಟಾಂಗ್

ರುತುರಾಜ್ ಗಾಯಕ್ವಾಡ್ ಆ್ಯಟಿಟ್ಯೂಡ್ ಹೆಚ್ಚಾಗಿದೆ. ಗ್ರೌಂಡ್ ಸಿಬ್ಬಂದಿಯೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನ ಅರಿತಿಲ್ಲ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ರೀತಿಯಲ್ಲಿ ಯಾರೂ ಗ್ರೌಂಡ್ ಸಿಬ್ಬಂದಿಯೊಂದಿಗೆ ನಡೆದುಕೊಳ್ಳುವುದಿಲ್ಲ ಎಂದು ರೋಹಿತ್ ಸ್ಟೇಡಿಯಂವೊಂದರ ಸಿಬ್ಬಂದಿ ಜೊತೆಗಿನ ಫೋಟೋವನ್ನು ಹಾಗೂ ರುತುರಾಜ್ ಗಾಯಕ್ವಾಡ್ ಅಸಭ್ಯ ವರ್ತನೆಯನ್ನು ಹೋಲಿಸಿ ಟ್ವೀಟ್ ಮಾಡಿದ್ದಾರೆ.

Story first published: Monday, June 20, 2022, 12:04 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X