ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

76 ಓವರ್ 439 ರನ್ 3 ವಿಕೆಟ್: ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಬೂಮ್ರಾಗೆ ಇದೇನಾಯ್ತು?

Team India pacer in bad form, What’s wrong with Jasprit Bumrah in ODI’s ?

ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರ ಜಸ್ಪ್ರೀತ್ ಬೂಮ್ರಾ. ತನ್ನ ನಿಖರವಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಂಟಕವಾಗುವ ಬೌಲರ್. ವಿಶ್ವದ ದಿಗ್ಗಜ ಕ್ರಿಕೆಟಿಗರು ಕೂಡ ಬೂಮ್ರಾ ಬೌಲಿಂಗ್ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಕಂಡ ಅತ್ಯುತ್ತಮ ಬೌಲರ್‌ಗಳಲ್ಲಿ ಬೂಮ್ರಾ ಕೂಡ ಒಬ್ಬರು ಎಂದಿದ್ದಾರೆ.

ಆದರೆ 2019ರ ವಿಶ್ವಕಪ್‌ ಬಳಿಕ ಜಸ್ಪ್ರೀತ್ ಬೂಮ್ರಾ ಹಿಂದಿನಷ್ಟು ಮೊನಚಾಗಿ ಕಂಡು ಬರುತ್ತಿಲ್ಲ. ಆರಂಭದಲ್ಲೇ ವಿಕೆಟ್ ಪಡೆದು ಮಿಂಚುತ್ತಿದ್ದ ಬೂಮ್ರಾ ಪಂದ್ಯದಲ್ಲಿ ಒಂದು ವಿಕೆಟ್ ಕಬಳಿಸಲೂ ಕಷ್ಟಪಡುತ್ತಿದ್ದಾರೆ. ಬೂಮ್ರಾ ಅವರ ಈ ಪ್ರದರ್ಶನ ಟೀಮ್ ಇಂಡಿಯಾದ ಒಟ್ಟಾರೆ ಪ್ರದರ್ಶನದ ಮೇಲೂ ಪರಿಣಾಮ ಬಿದ್ದಿದೆ.

Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್Ind vs Aus : ಆಸ್ಟ್ರೇಲಿಯಾದ ಇಬ್ಬರು ಸ್ಟಾರ್ ಆಟಗಾರರು ಸೀಮಿತ ಓವರ್‌ಗಳ ಸರಣಿಯಿಂದ ಔಟ್

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲೂ ಬೂಮ್ರಾ ಅವರ ಕಳಪೆ ಪ್ರದರ್ಶನ ಮುಂದುವರಿದಿದೆ. ಹಾಗಾದರೆ ಬೂಮ್ರಾ ಅವರ ಕಳೆದ ಕೆಲ ಏಕದಿನ ಪಂದ್ಯಗಳಲ್ಲಿ ಪ್ರದರ್ಶನ ಹೇಗಿತ್ತು ಮುಂದೆ ಓದಿ..

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಿರಾಸೆ

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಿರಾಸೆ

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಮಿಂಚಿದ್ದ ಬೂಮ್ರಾ ಮೇಲೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸಾಕಷ್ಟು ನಿರೀಕ್ಷೆಯಿತ್ತು. ಆದರ ಆ ನಿರೀಕ್ಷೆ ಮೊದಲ ಎರಡು ಪಂದ್ಯಗಳಲ್ಲಿ ಹುಸಿಯಾಗಿದೆ. ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಬೂಮ್ರಾ 10 ಓವರ್‌ಗಳನ್ನು ಎಸೆದಿದ್ದು 73 ರನ್ ನೀಡಿ ಕೇವಲ 1 ವಿಕೆಟ್ ಪಡೆದಿದ್ದರು. ಎರಡನೇ ಪಂದ್ಯದಲ್ಲೂ ಅತಿ ದುಬಾರಿ ಬೌಲರ್ ಎನಿಸಿಕೊಂಡಿದ್ದು 79 ರನ್ ನೀಡಿ 1 ವಿಕೆಟ್ ಮಾತ್ರವೇ ಪಡೆದುಕೊಂಡಿದ್ದಾರೆ.

2019ರ ವಿಶ್ವಕಪ್ ಬಳಿಕ

2019ರ ವಿಶ್ವಕಪ್ ಬಳಿಕ

ಟೀಮ್ ಇಂಡಿಯಾ 2019 ವಿಶ್ವಕಪ್‌ನ ಬಳಿಕ ಆಸ್ಟ್ರೇಲಿಯಾ ವಿರುದ್ಧ ಸದ್ಯ ನಡೆಯುತ್ತಿರುವ ಸರಣಿಗೂ ಮುನ್ನ ಮೂರು ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಮೊದಲನೆಯದ್ದು 2019ರ ಆಗಸ್ಟ್‌ನಲ್ಲಿ ವೆಸ್ಟ್ ಇಮಡೀಸ್ ವಿರುದ್ಧ, ಬಳಿಕ 2020ರ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ ನ್ಯೂಜಿಂಡ್ ವಿರುದ್ಧ ಆಡಿತ್ತು. ಇದರಲ್ಲಿ ಬೂಮ್ರಾ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಿಂದ ವಿಶ್ರಾಂತಿಯನ್ನು ಪಡೆದುಕೊಂಡಿದ್ದರು. ಆದರೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಗಾಗಿ ಭಾರತಕ್ಕೆ ಪ್ರವಾಸ ಕಗೊಂಡಿದ್ದಾಗ ಬೂಮ್ರಾ ತಂಡಕ್ಕೆ ವಾಪಾಸಾಗಿದ್ದರು.

ವಿಕೆಟ್ ಕಬಳಿಸಲು ಪರದಾಟ

ವಿಕೆಟ್ ಕಬಳಿಸಲು ಪರದಾಟ

ಆಸ್ಟ್ರೇಲಿಯಾ ವಿರುದ್ಧದ ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬೂಮ್ರಾ ಕೊನೆಯ ವಿಕೆಟ್ ಪಡೆದುಕೊಂಡಿದ್ದರು. ಅದಾದ ಬಳಿಕ ನವೆಂಬರ್ 27ರಂದು ಆಸ್ಟ್ರೇಲಿಯಾ ವಿರುದ್ಧದ ಪಮದ್ಯದ ವರೆಗೆ 56 ಓವರ್‌ಗಳನ್ನು ಏಕದಿನ ಕ್ರಿಕೆಟ್‌ನಲ್ಲಿ ಎಸೆದಿದ್ದರು. ಆದರೆ ಒಮದೇ ಒಂದು ವಿಎಕಟ್ ಪಡೆಯಲು ವಿಫಲರಾಗಿದ್ದರು. ಸುದೀರ್ಘ ಕಾಲದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಒಂದು ವಿಕೆಟ್ ಪಡೆದರಾದರೂ ದುಬಾರಿಯಾದರು.

ಕಳೆದ ಮೂರು ಸರಣಿ

ಕಳೆದ ಮೂರು ಸರಣಿ

ಜಸ್ಪ್ರೀತ್ ಬೂಮ್ರಾ ಕಳೆದ ಮೂರು ಏಕದಿನ ಸರಣಿಯಲ್ಲಿನ ಪ್ರದರ್ಶನ ತಂಡಕ್ಕೆ ಆತಂಕವನ್ನುಂಟು ಮಾಡುವಂತಿದೆ. ಮೂರು ಪಂದ್ಯಗಳಲ್ಲಿ ಬೂಮ್ರಾ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇದರಲ್ಲಿ 76.1 ಓವರ್‌ ಬೌಲಿಂಗ್ ಮಾಡಿದ್ದು 439 ರನ್ ಬಿಟ್ಟುಕೊಟ್ಟಿದ್ದಾರೆ. ಆದರೆ ಪಡೆದಿರುವ ವಿಕೆಟ್ ಕೇವಲ 3 ಮಾತ್ರ. ಜಸ್ಪ್ರೀತ್ ಬೂಮ್ರಾ ಈ ಅವಧಿಯಲ್ಲಿನ ಸರಾಸರಿ ಬರೊಬ್ಬರಿ 146.3 ಆಗಿದೆ. ಈ ಕಳಪೆ ಫಾರ್ಮ್‌ನಿಂದ ಬೂಮ್ರಾ ಆದಷ್ಟು ಶೀಘ್ರದಲ್ಲಿ ಆಚೆ ಬಂದು ಉತ್ತಮ ಪ್ರದರ್ಶನ ನೀಡುವಂತಾಗಲಿ ಎಂಬುದು ಟೀಮ್ ಇಂಡಿಯಾ ಅಭಿಮಾನಿಗಳ ಆಶಯ.

Story first published: Monday, November 30, 2020, 13:54 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X