ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಎನ್‌ಸಿಎನಲ್ಲಿ ತರಬೇತಿ ಆರಂಭಿಸಿದ ಮೊಹಮ್ಮದ್ ಶಮಿ

Team India pacer Mohammed Shami resumes training at NCA

ಟೀಮ್ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಗಾಯದ ಕಾರಣದಿಂದ ಅಲಭ್ಯರಾಗಿದ್ದರು. ಈಗ ಚೇತರಿಸಿಕೊಂಡಿರುವ ಶಮಿ ಮೂರನೇ ಪಂದ್ಯಕ್ಕೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಅವರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ(ಎನ್‌ಸಿಎ)ಯಲ್ಲಿ ತರಬೇತಿಯನ್ನು ಆರಂಭಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶಮಿ ಬ್ಯಾಟಿಂಗ್ ನಡೆಸುವ ವೇಳೆ ಪ್ಯಾಟ್ ಕಮ್ಮಿನ್ಸ್ ಎಸೆದ ಬೌನ್ಸರ್‌ಅನ್ನು ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಚೆಂಡು ಮೊಣಕೈಗೆ ಅಪ್ಪಳಿಸಿದ ಕಾರಣ ಗಾಯಗೊಂಡಿದ್ದರು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಂದ ಶಮಿ ಹೊರಬಿದ್ದಿದ್ದರು.

ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!

ಮೊಹಮ್ಮದ್ ಶಮಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ(ಎನ್‌ಸಿಎ)ಯಲ್ಲಿ ಆರಂಬದ ಕೆಲ ದಿನಗಳ ಕಾಲ ಕಡಿಮೆ ತೀವ್ರತೆಯ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಾದ ಬಳಿಕ ಪೂರ್ಣ ಪ್ರಮಾಣದಲ್ಲಿ ದೈಹಿಕ ತರಭೆತಿಗೆ ಒಳಗಾಗಲಿದ್ದು ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಸಂಪೂರ್ಣ ಸಜ್ಜಾಗುವ ಸಿದ್ಧತೆಯಲ್ಲಿದ್ದಾರೆ.

"ಮೊಹಮ್ಮದ್ ಶಮಿ ಅವರ ಮೊಣಕೈ ಈಗ ಚೇತರಿಕೆ ಕಂಡಿದೆ. ಮುಂದಿನ ಕೆಲ ದಿನಗಳ ಕಾಲ ಕಡಿಮೆ ತೀವ್ರತೆಯ ನೆಟ್ ಸೆಶನ್‌ನಲ್ಲಿ ಭಾಗಿಯಾಗಲಿದ್ದಾರೆ. ದಿನವೊಂದಕ್ಕೆ 18-20 ಎಸೆತಗಳನ್ನು 50-60 ಶೇಕಡಾ ಪ್ರಯತ್ನದಲ್ಲಿ ನಡೆಸುವಂತೆ ಸೂಚನೆ ನೀಡಲಾಗಿದೆ" ಎಂದು ಎನ್‌ಸಿಎನ ಅಧಿಕಾರಿಯೊಬ್ಬರು ಪಿಟಿಐಗೆ ನೀಡಿದ ಮಾಹಿತಿಯಲ್ಲಿ ವಿವರಿಸಿದ್ದಾರೆ.

ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ತಮಾಷೆಯ ವಿಡಿಯೋ ನೋಡಿ!

ಮೊಹಮ್ಮದ್ ಶಮಿ ಹೈದರಾಬಾದ್‌ನಲ್ಲಿ ಅಹರ್ನಿಶಿಯಾಗಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪಂದ್ಯಕ್ಕೆ ಇನ್ನೂ ಎರಡೂವರೆ ವಾರಗಳ ಕಾಲಾವಕಾಶ ಇರುವ ಕಾರಣ ಅಷ್ಟರಲ್ಲಿ ಶಮಿ ಸಂಪೂರ್ಣ ಫಿಟ್ ಆಗುವ ಸಾಧ್ಯತೆಯಿದ ಎಂದು ಎನ್‌ಸಿಎ ಅಧಿಕಾರಿ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ. ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 24 ರಿಂದ ಆರಂಭವಾಗಲಿದೆ.

Story first published: Sunday, February 7, 2021, 9:52 [IST]
Other articles published on Feb 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X